• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಮ್ಯಾ ಟ್ವೀಟ್ : ಅನುಪಮಾ ಶೆಣೈ ಮತ್ತೆ ಕೂಡ್ಲಿಗಿಗೆ ವರ್ಗಾವಣೆ

By Mahesh
|

ಬೆಂಗಳೂರು/ಬಳ್ಳಾರಿ, ಫೆ. 01: ಕೂಡ್ಲಿಗಿ ಡಿವೈಎಸ್‍ಪಿ ಅನುಪಮಾ ಶೆಣೈ ಅವರ ವರ್ಗಾವಣೆ ಪ್ರಕರಣ ಬಹುತೇಕ ಸೋಮವಾರ ಅಂತ್ಯ ಕಂಡಿದೆ. ಖಾಕಿ vs ಖಾದಿ ಸಮರದಲ್ಲಿ ಮತ್ತೊಮ್ಮೆ ಐಪಿಎಸ್ ಅಧಿಕಾರಿ ಅನುಪಮಾ ಅವರನ್ನು ಕೂಡ್ಲಿಗಿ ಉಪವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಈ ಬಗ್ಗೆ ಮಾಜಿ ಸಂಸದೆ ರಮ್ಯಾ ಅವರು ಟ್ವೀಟ್ ಮಾಡಿ ಖಚಿತಪಡಿಸಿದ್ದಾರೆ.

ಅನುಪಮಾ ಶೆಣೈ ಅವರ ವರ್ಗಾವಣೆ ಕುರಿತಂತೆ ಜನವರಿ 31ರಂದು ಟ್ವೀಟ್ ಮಾಡಿದ್ದ ರಮ್ಯಾ ಅವರು ವರ್ಗಾವಣೆ ಮಾಡಿದ್ದನ್ನು ಖಂಡಿಸಿ ಕಾಂಗ್ರೆಸ್ ನಾಯಕ(ಪರಮೇಶ್ವರ್ ನಾಯಕ್) ವಿರುದ್ಧವೇ ದನಿ ಎತ್ತಿದ್ದರು. ಅಲ್ಲಿಗೆ ಸುಮ್ಮನಾಗದ ರಮ್ಯಾ ಅವರು ಸೋಮವಾರ ಮಧ್ಯಾಹ್ನ ಗೃಹ ಸಚಿವ ಜಿ ಪರಮೇಶ್ವರ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ. ಇದಕ್ಕೂ ಮುನ್ನ ಹೈಕಮಾಂಡ್ ಗೂ ಈ ಬಗ್ಗೆ ಸುದ್ದಿ ಮುಟ್ಟಿದೆ ಎಂಬುದು ಟ್ವಿಟ್ಟರಲ್ಲಿ ಏನು ಗೊತ್ತಾಗಲ್ಲ.[ಡಿವೈಎಸ್ ಪಿ ಅನುಪಮಾ ಶೆಣೈ ವರ್ಗಾವಣೆ, ಮೌನ ಮುರಿದ ಸಿದ್ದರಾಮಯ್ಯ]

ಅನುಪಮಾ ಶೆಣೈ ಅವರ ವರ್ಗಾವಣೆ ಬಗ್ಗೆ ಡಾ. ಜಿ ಪರಮೇಶ್ವರ ಅವರೊಂದಿಗೆ ಮಾತನಾಡಿದೆ. ಶೆಣೈ ಅವರನ್ನು ಮರು ವರ್ಗಾವಣೆ ಮಾಡಿ ಕೂಡ್ಲಿಗಿಗೆ ಮತ್ತೆ ಡಿವೈಎಸ್ಪಿಯಾಗಿ ನೇಮಕ ಮಾಡಲಾಗುವುದು ಎಂಬ ಭರವಸೆ ನೀಡಿದ್ದಾರೆ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ. ಇದಾದ ಕೆಲ ಗಂಟೆಗಳ ಬಳಿಕ ಶೆಣೈ ಅವರ ವರ್ಗಾವಣೆ ಆದೇಶದ ಬಗ್ಗೆ ಅಧಿಕೃತ ಹೇಳಿಕೆ ಪ್ರಕಟವಾಗಿದೆ.

ಅನುಪಮಾ ಶೆಣೈಗೆ ವರ್ಗಾವಣೆ ಶಿಕ್ಷೆ ನೀಡಲಾಗಿತ್ತು

ಅನುಪಮಾ ಶೆಣೈಗೆ ವರ್ಗಾವಣೆ ಶಿಕ್ಷೆ ನೀಡಲಾಗಿತ್ತು

ಕಾರ್ಮಿಕ ಸಚಿವ ಪರಮೇಶ್ವರ್ ನಾಯಕ್ ಅವರ ಫೋನ್ ಕರೆ ಸ್ವೀಕರಿಸದ ಕಾರಣಕ್ಕೆ ಐಪಿಎಸ್ ಅಧಿಕಾರಿ ಅನುಪಮಾ ಶೆಣೈ ಅವರನ್ನು ವಿಜಯಪುರದ ಇಂಡಿಯ ಡಿವೈಎಸ್‌ಪಿಯಾಗಿ ವರ್ಗಾವಣೆ ಮಾಡಲಾಗಿತ್ತು. ಆದರೆ, ಅವರು ಅಲ್ಲಿ ಅಧಿಕಾರ ಸ್ವೀಕರಿಸುವ ಮೊದಲೇ ಅವರಿಗೆ 15 ದಿನಗಳ ಕಾಲ ಕಡ್ಡಾಯ ರಜೆ ಮೇಲೆ ತೆರಳುವಂತೆ ಸೂಚನೆ ನೀಡಲಾಗಿದೆ. ಇದು ಮತ್ತೊಂದು ವಿವಾದಕ್ಕೆ ಕಾರಣವಾಗಿತ್ತು.

ರಮ್ಯಾ ಪ್ರತಿಭಟನೆಯ ಟ್ವೀಟ್

ಮಾಜಿ ಸಂಸದೆ ರಮ್ಯಾ ಅವರು ಟ್ವೀಟ್ ಮಾಡಿ ಅನುಪಮಾ ಶೆಣೈಗೆ ಬೆಂಬಲ ಕೋರಿದ್ದು, ಕಾಂಗ್ರೆಸ್ ನಾಯಕರಿಗೆ ಇರಸು ಮುರುಸು ಉಂಟು ಮಾಡಿತ್ತು. ರಮ್ಯಾ ಟ್ವೀಟ್ ಗೂ ಮುನ್ನ ಪರಮೇಶ್ವರ್ ನಾಯಕ್ ಕ್ರಮವನ್ನು ಸಿಎಂ ಸಿದ್ದರಾಮಯ್ಯ ಕೂಡಾ ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದರು. ಹೀಗಾಗಿ ವಿಷಯ ಇನ್ನಷ್ಟು ಜಟಿಲವಾಯಿತು.

ಸಿಎಂ ಸಿದ್ದರಾಮಯ್ಯರಿಂದ ಸಮರ್ಥನೆ

ಸಿಎಂ ಸಿದ್ದರಾಮಯ್ಯರಿಂದ ಸಮರ್ಥನೆ

ಕೂಡ್ಲಿಗಿ ಡಿವೈಎಎಸ್ಪಿ ಅನುಪಮಾ ಶೆಣೈ ಅವರ ವರ್ಗಾವಣೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಮಿಕ ಸಚಿವ ಪರಮೇಶ್ವರ ನಾಯಕ್ ಅವರನ್ನು ಸಮರ್ಥಿಸಿಕೊಂಡಿದ್ದರು. 'ಈ ಬಗ್ಗೆ ನನಗೇನೂ ತಿಳಿದಿಲ್ಲ' ಎಂದು ಉಡಾಫೆ ಉತ್ತರ ನೀಡಿದ್ದು ಮಾಧ್ಯಮಗಳನ್ನು ಕೆರಳಿಸಿತ್ತು. ಇತ್ತ ಅನುಪಮಾ ಶೆಣೈ ಅವರಿಗೆ ರಜೆ ಮೇಲೆ ತೆರಳುವಂತೆ ಗೃಹ ಇಲಾಖೆ ಸೂಚನೆ ನೀಡಿತ್ತು. ಆದರೆ, ವಿಷಯ ಹೈಕಮಾಂಡ್ ತಲುಪಿತ್ತು.

ಅನುಪಮಾ ಶೆಣೈಗೆ ವರ್ಗಾವಣೆ ಖಚಿತ ಎಂದ ರಮ್ಯಾ

ಐಪಿಎಸ್ ಅಧಿಕಾರಿ ಅನುಪಮಾ ಅವರನ್ನು ಕೂಡ್ಲಿಗಿ ಉಪವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಎಂದು ಮಾಜಿ ಸಂಸದೆ ರಮ್ಯಾ ಅವರು ಟ್ವೀಟ್ ಮಾಡಿ ಖಚಿತಪಡಿಸಿದ್ದಾರೆ.

ರಾಷ್ಟ್ರಮಟ್ಟದ ಸುದ್ದಿಯಾದ ಪರಮೇಶ್ವರ್ ನಾಯಕ್ ಪ್ರಕರಣ

ಅನುಪಮಾ ಶೆಣೈ ಅವರು ಕಾರ್ಮಿಕ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್ ನಾಯಕ್ ಅವರ ಕರೆ ಸ್ವೀಕರಿಸದ್ದಕ್ಕೆ ವರ್ಗಾವಣೆ ಮಾಡಿದ್ದಾರೆ.ಸಚಿವರ ಬೆಂಬಲಿಗರ ಅಕ್ರಮ ಮರಳು ದಂಧೆಗೆ ಸಹಕರಿಸದಿದ್ದಕ್ಕೆ ಅನುಪಮಾ ಶೆಣೈ ಅವರನ್ನ ವರ್ಗಾವಣೆ' ಮಾಡಲಾಗಿದೆ ಎಂಬ ಕೂಗು ಎಲ್ಲೆಡೆ ಹಬ್ಬಿ ರಾಷ್ಟ್ರೀಯ ಸುದ್ದಿವಾಹಿನಿಗಳಿಗೂ ತಲುಪಿತು.

ರಾಷ್ಟ್ರಮಟ್ಟದ ಸುದ್ದಿಯಾದ ಪರಮೇಶ್ವರ್ ನಾಯಕ್ ಪ್ರಕರಣ

ರಮ್ಯಾ ಮೇಡಂ ನಮ್ಮ ಸಿಎಂ ಕ್ಯಾಂಡಿಡೇಟ್ ಎಂದು ಹಾಡಿ ಹೊಗಳಿದ ಅಭಿಮಾನಿಗಳು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Anupama Shenoy Reinstated as Kudligi Sub Division DySP. Earlier She was transferred to Indi for not receiving the Labour miniter Parameshwar Nayak's to phone call.Even CM Siddaramaiah also defended minister's act which was opposed by public. Former Mandya MP Ramya Tweeted about the transfer today(Feb.01).

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more