ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಂಧ್ರ ದಂಪತಿಗಳ ವಿವಾಹ ಪೂರ್ವ ಶೂಟಿಂಗ್: ಹಂಪಿಯ ಪಾರಂಪರಿಕ ನಿಯಮ ಉಲ್ಲಂಘನೆ

|
Google Oneindia Kannada News

ಬಳ್ಳಾರಿ, ನವೆಂಬರ್ 24: ಹಂಪಿಯಲ್ಲಿ ನಡೆದ ವಿವಾಹ ಪೂರ್ವ ಫೋಟೋಶೂಟ್‌ಗೆ ಆಂಧ್ರಪ್ರದೇಶದಿಂದ ದಂಪತಿಗಳು ಬಂದಿದ್ದು, ಪಾರಂಪರಿಕ ತಾಣದ ನಿರ್ಬಂಧಿತ ಸ್ಥಳಗಳಲ್ಲಿ ನೂತನ ದಂಪತಿಗಳಿಗೆ ಹೇಗೆ ಚಿತ್ರೀಕರಣಕ್ಕೆ ಅವಕಾಶ ನೀಡಲಾಯಿತು ಎಂದು ಸ್ಥಳೀಯರು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ಹಂಪಿಯ ಪ್ರಸಿದ್ಧ ವಿಜಯ ವಿಠ್ಠಲ ದೇವಾಲಯ ಸಂಕೀರ್ಣ ಮತ್ತು ಕಮಲ್ ಮಹಲ್ ಸೇರಿದಂತೆ ಹಂಪಿಯ ವಿವಿಧ ಸ್ಥಳಗಳಲ್ಲಿ ಚಿತ್ರೀಕರಿಸಿದ ವಿವಾಹ ಪೂರ್ವ ವಿಡಿಯೋ ಹಾಡು ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.

ಐತಿಹಾಸಿಕ ಹಂಪಿಗೆ ಭೇಟಿ ನೀಡಿದ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ಐತಿಹಾಸಿಕ ಹಂಪಿಗೆ ಭೇಟಿ ನೀಡಿದ ಸಹಕಾರ ಸಚಿವ ಎಸ್.ಟಿ ಸೋಮಶೇಖರ್

ಈ ಎರಡೂ ಸ್ಮಾರಕಗಳು ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧಿಸಿವೆ. ಆದರೂ ಈ ದಂಪತಿಗಳು ಸಪ್ತಸ್ವರ ಮಂಟಪದ ಒಳಗೆ ಓಡಾಡುತ್ತಿರುವುದು ಕಂಡುಬಂದಿದೆ. ಅನೇಕರನ್ನು ಇದು ಕೆರಳಿಸಿದ್ದು, ವಿಡಿಯೋ ತಯಾರಕರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಹಂಪಿಯಲ್ಲಿ ಚಿತ್ರೀಕರಣ

ಹಂಪಿಯಲ್ಲಿ ಚಿತ್ರೀಕರಣ

"ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ ಮತ್ತು ನಂತರ ನಾವು ಹಂಪಿಯಲ್ಲಿ ಚಿತ್ರೀಕರಣ ನಡೆಯುತ್ತಿರುವುದರ ಬಗ್ಗೆ ತಿಳಿದುಕೊಂಡಿದ್ದೇವೆ. 2020ರ ಅಕ್ಟೋಬರ್ ಮೊದಲ ವಾರದಲ್ಲಿ ಬೇರೆ ಕಡೆ ಚಿತ್ರೀಕರಣ ಮಾಡಲಾಗಿದೆ.

ಹಂಪಿಯ ಅನೇಕ ತಾಣಗಳು ಪ್ರವಾಸಿಗರಿಗೆ ನಿಷೇಧಿಸಲಾಗಿದ್ದು, ಆದರೆ ಈ ಚಿತ್ರೀಕರಣ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿದೆ. ಈ ಚಿತ್ರೀಕರಣ ಮಾಡಿದವರ ವಿರುದ್ಧ ಪೊಲೀಸ್ ದೂರು ನೀಡಲು ನಾವು ಯೋಜಿಸುತ್ತಿದ್ದೇವೆ' ಎಂದು ಹಂಪಿಯ ಸಾಮಾಜಿಕ ಕಾರ್ಯಕರ್ತ ಹೇಳಿದ್ದಾರೆ.

ನಿಯಮಗಳನ್ನು ಮುರಿಯದಂತೆ ನೋಡಿಕೊಳ್ಳಬೇಕು

ನಿಯಮಗಳನ್ನು ಮುರಿಯದಂತೆ ನೋಡಿಕೊಳ್ಳಬೇಕು

"ಹಂಪಿ ಸ್ಮಾರಕಗಳ ಸುತ್ತಲೂ ಡ್ರೋನ್ ಕ್ಯಾಮೆರಾವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದರೂ, ವಿವಾಹ ಪೂರ್ವ ಶೂಟಿಂಗ್ ತಂಡವು ಡ್ರೋನ್ ಅನ್ನು ಬಳಸಿದೆ ಎಂದು ದೂರಿದರು. ಫಿಲ್ಮ್ ಶೂಟ್ ಅಥವಾ ಖಾಸಗಿ ಚಿತ್ರೀಕರಣ ನಡೆಯುವಾಗಲೆಲ್ಲಾ ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ (ಎಎಸ್ಐ) ಮತ್ತು ಹಂಪಿ ವರ್ಲ್ಡ್ ಹೆರಿಟೇಜ್ ಏರಿಯಾ ಮ್ಯಾನೇಜ್ಮೆಂಟ್ ಅಥಾರಿಟಿ (ಎಚ್‌ಡಬ್ಲ್ಯುಎಚ್‌ಎಎ) ಅಧಿಕಾರಿಗಳು ಚಲನಚಿತ್ರ ತಯಾರಕರು ಯಾವುದೇ ನಿಯಮಗಳನ್ನು ಮುರಿಯದಂತೆ ನೋಡಿಕೊಳ್ಳಬೇಕು. ಆದರೆ ಈ ಚಿತ್ರೀಕರಣದಲ್ಲಿ ಇದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ' ಎಂದು ಕಾರ್ಯಕರ್ತ ಆರೋಪಿಸಿದರು.

ಭದ್ರತಾ ವೈಫಲ್ಯ

ಭದ್ರತಾ ವೈಫಲ್ಯ

ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಎಚ್‌ಡಬ್ಲ್ಯುಎಚ್‌ಎಎ ಹಿರಿಯ ಅಧಿಕಾರಿಗಳು, ಚಿತ್ರೀಕರಣ ದಿನದಂದು ಹಾಜರಿದ್ದ ಸಿಬ್ಬಂದಿಯನ್ನು ವಿಚಾರಿಸುವುದಾಗಿ ಭರವಸೆ ನೀಡಿದ್ದಾರೆ. ವಿಡಿಯೋ ನಮ್ಮ ಗಮನಕ್ಕೆ ಬಂದಿದೆ ಮತ್ತು ಯಾವುದೇ ಭದ್ರತಾ ವೈಫಲ್ಯ ಕಂಡುಬಂದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿ ಹೇಳಿದರು.

ಅಧಿಕಾರಿಗಳೇ ಹೊಣೆ

ಅಧಿಕಾರಿಗಳೇ ಹೊಣೆ

ವಿಜಯನಗರ ರಾಜವಂಶದ ಕುಡಿ ಕೃಷ್ಣದೇವರಾಯ ಮಾತನಾಡಿ, ವಿವಾಹ ಪೂರ್ವ ಚಿತ್ರೀಕರಣವನ್ನು ತೀವ್ರವಾಗಿ ಟೀಕಿಸಿದರು. "ಇದನ್ನು ಎಂದಿಗೂ ಅನುಮತಿಸಬಾರದು. ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು' ಎಂದು ಹರಿಹಾಯ್ದರು.

English summary
The couple had come from Andhra Pradesh for the pre-wedding photoshoot in Hampi and locals questioned the authorities as to how the new couple was allowed to shoot in the heritage site.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X