ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ವಿಜಯನಗರ ಹೋರಾಟ' ಪ್ರಾರಂಭಿಸಿದ ಅನರ್ಹ ಶಾಸಕ ಆನಂದ್ ಸಿಂಗ್

|
Google Oneindia Kannada News

ವಿಜಯನಗರ, ಸೆಪ್ಟೆಂಬರ್ 16: ಅನರ್ಹ ಶಾಸಕ ಆನಂದ್ ಸಿಂಗ್ ಅವರು 'ವಿಜಯನಗರ ಹೋರಾಟ'ವನ್ನು ಇಂದು ಪ್ರಾರಂಭಿಸಿದ್ದಾರೆ.

ವಿಜಯನಗರ ಜಿಲ್ಲೆಯಾಗಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಅವರು ಇಂದಿನಿಂದ ಹೋರಾಟ ಪ್ರಾರಂಭಸಿಸದ್ದು, ಹಂಪಿಯ ವಿರೂಪಾಕ್ಷೇಶ್ವರ ಸ್ವಾಮಿ ದರ್ಶನ ಪಡೆದು ಹೋರಾಟ ಪ್ರಾರಂಭಿಸಿದರು..

ಶಾಸಕರನ್ನು ಹುಡುಕಿಕೊಡಿ: ಪೊಲೀಸ್ ಠಾಣೆಗೆ ಕಾರ್ಯಕರ್ತರ ದೂರುಶಾಸಕರನ್ನು ಹುಡುಕಿಕೊಡಿ: ಪೊಲೀಸ್ ಠಾಣೆಗೆ ಕಾರ್ಯಕರ್ತರ ದೂರು

ಕೆಲವು ಮಠಾಧೀಶರ ಬೆಂಬಲ ಸಹಕಾರ ಕೋರಿದ ಆನಂದ್ ಸಿಂಗ್, ವಿದ್ಯಾರಣ್ಯ ಭಾರತೀ ಸ್ವಾಮೀಜೀಗಳು, ಮಾತಂಗ ಮಠದ ಸ್ವಾಮೀಜಿ ಮತ್ತು ಸಂಸ್ಥಾನ‌ ಮಠದ ಮಠಾಧೀಶರಾದ ಡಾ. ಶ್ರೀ ಸಂಗನಗೌಡ ಮಹಾಸ್ವಾಮಿಗಳ ಆಶೀರ್ವಾದ ಅವರನ್ನು ಭೇಟಿ ಮಾಡಿ ಬೆಂಬಲ ಕೋರಿ ಆಶೀರ್ವಾದ ಪಡೆದುಕೊಂಡರು.

Anand Singh Demanding To Announce Vijayanagar As District

ಹೊಸಪೇಟೆಯನ್ನು 'ವಿಜಯನಗರ ಜಿಲ್ಲೆ'ಯನ್ನಾಗಿ ಘೋಷಿಸಲು ಬೆಂಬಲ‌ ಸಹಕಾರ ಕೋರಿದರು. ಇದಕ್ಕೆ ಸದಾ ತಮ್ಮ ಬೆಂಬಲ ಇರುವುದಾಗಿ ತಿಳಿಸಿ ಸರ್ಕಾರಕ್ಕೂ ಒತ್ತಡ ತರುವುದಾಗಿ ಹೇಳಿ ಈ‌ ಹೋರಾಟಕ್ಕೆ ಆನಂದ್ ಸಿಂಗ್ ರವರಿಗೆ ಸಾಥ್ ನೀಡುವುದಾಗಿ ಮಠಾಧೀಶರು ಭರವಸೆ ನೀಡಿದ್ದಾರೆ.

Anand Singh Demanding To Announce Vijayanagar As District

ರಾಜೀನಾಮೆ ನೀಡಿ ಕಾಣೆ ಆಗಿದ್ದ ಶಾಸಕ ಆನಂದ್ ಸಿಂಗ್ ದಿಢೀರ್ ಪ್ರತ್ಯಕ್ಷ!ರಾಜೀನಾಮೆ ನೀಡಿ ಕಾಣೆ ಆಗಿದ್ದ ಶಾಸಕ ಆನಂದ್ ಸಿಂಗ್ ದಿಢೀರ್ ಪ್ರತ್ಯಕ್ಷ!

ಆನಂದ್ ಸಿಂಗ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಇದೇ ವಿಷಯವನ್ನು ಕಾರಣವನ್ನಾಗಿ ನೀಡಿದ್ದರು. ವಿಜಯನಗರ ಜಿಲ್ಲೆಯನ್ನಾಗಿಸುವಂತೆ ಒತ್ತಾಯ ಮಾಡಿದ್ದೆ, ಅದು ಆಗಲಿಲ್ಲ ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ ಎಂದಿದ್ದರು.

English summary
Disqualified MLA Anand Singh started protest from today, that Government should announce Vijayangar as district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X