ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ ಆಯುರ್ವೇದಿಕ್ ಔಷಧಿ ವಿತರಣೆ; ಒಪ್ಪಿಗೆ ನೀಡುವಂತೆ ಪತ್ರ

By ವಿಜಯನಗರ ಪ್ರತಿನಿಧಿ
|
Google Oneindia Kannada News

ವಿಜಯನಗರ, ಜೂನ್ 30; ಕೋವಿಡ್ ವಿರುದ್ಧದ ಆಯುರ್ವೇದಿಕ್ ಔಷಧಿಯನ್ನು ವಿತರಣೆ ಮಾಡದಂತೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಔಷಧಿ ವಿತರಣೆ ಮಾಡಲು ಒಪ್ಪಿಗೆ ನೀಡಬೇಕು ಎಂದು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.

ವಿಜಯನಗರ ಜಿಲ್ಲೆ ಹೊಸಪೇಟೆಯ ಕಮಲಾಪುರದಲ್ಲಿ ಹಂಪಿಯ ಹನುಮದ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಸಂಸ್ಥಾಪಕ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಜೂನ್ 27ರಂದು ಉಚಿತವಾಗಿ ಸಾರ್ವಜನಿಕರಿಗೆ ಔಷಧಿ ವಿತರಣೆ ಮಾಡಿದ್ದರು.

ಆಯುರ್ವೇದಿಕ್ ಔಷಧಿ ಸೇವಿಸಿ ಕೊರೊನಾ ವೈರಸ್ ಗೆದ್ದ ಸಚಿವ ಸಿ.ಟಿ ರವಿಆಯುರ್ವೇದಿಕ್ ಔಷಧಿ ಸೇವಿಸಿ ಕೊರೊನಾ ವೈರಸ್ ಗೆದ್ದ ಸಚಿವ ಸಿ.ಟಿ ರವಿ

ಆಂಧ್ರಪ್ರದೇಶದ ಆನಂದಯ್ಯ ಕಂಡುಹಿಡಿದಿರುವ ಔಷಧಿಯನ್ನು ಉಚಿತವಾಗಿ ವಿತರಣೆ ಮಾಡಲಾಗಿತ್ತು. ಆದರೆ ಔಷಧಿ ವಿತರಣೆಗೆ ಸರ್ಕಾರ ನಿರ್ಬಂಧ ಹೇರಿರುವುದರಿಂದ ವಿತರಣೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿದೆ.

ಉತ್ತರಾಖಂಡ: ತುರ್ತುಸ್ಥಿತಿಯಲ್ಲಿ ಅಲೋಪಥಿಕ್ ಔಷಧಿ ಶಿಫಾರಸ್ಸಿಗೆ ಆಯುರ್ವೇದ ವೈದ್ಯರಿಗೆ ಅನುಮತಿ ಉತ್ತರಾಖಂಡ: ತುರ್ತುಸ್ಥಿತಿಯಲ್ಲಿ ಅಲೋಪಥಿಕ್ ಔಷಧಿ ಶಿಫಾರಸ್ಸಿಗೆ ಆಯುರ್ವೇದ ವೈದ್ಯರಿಗೆ ಅನುಮತಿ

Allow To Distribution Of Ayurvedic Medicine By Anandaiah Letter To CM

ಈಗಾಗಲೇ ಔಷಧಿಯನ್ನು ವಿಜಯನಗರದ ಪಂಪಾಕ್ಷೇತ್ರದ ಕಮಲಾಪುರ, ಹಂಪಿ, ಕೊಪ್ಪಳದ ಆನೆಗುಂದಿ, ಗಂಗಾವತಿ, ಬಳ್ಳಾರಿ ಭಾಗದಲ್ಲಿ ಹಂಚಿಕೆ ಮಾಡಲಾಗಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ವಿಜಯನಗರ ಸುತ್ತಮುತ್ತಲೂ ಈ ಔಷಧಿ ಹಂಚಿಕೆಯಾಗಿದೆ.

ಕೊರೊನಾವೈರಸ್ ಔಷಧಿ: ಹೈದ್ರಾಬಾದ್ ಕಂಪನಿಯಲ್ಲಿ 2ನೇ ಹಂತದ ಪ್ರಯೋಗಕೊರೊನಾವೈರಸ್ ಔಷಧಿ: ಹೈದ್ರಾಬಾದ್ ಕಂಪನಿಯಲ್ಲಿ 2ನೇ ಹಂತದ ಪ್ರಯೋಗ

ಕರ್ನಾಟಕದಲ್ಲಿ ಔಷಧಿಯನ್ನು ವಿತರಿಸಲು ನಿರ್ಬಂಧ ವಿಧಿಸಿರುವ ಹಿನ್ನಲೆ ಸರ್ಕಾರ ಪರವಾನಗಿ ನೀಡುವವರೆಗೂ ಯಾವುದೇ ಕಾರಣಕ್ಕೂ ಔಷಧಿ‌ ವಿತರಣೆ ಮಾಡಬಾರದು ಎಂದು ಜಿಲ್ಲಾಡಳಿತ ಆದೇಶ ನೀಡಿದೆ. ಆದ್ದರಿಂದ ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಗಳಲ್ಲಿ ಔಷಧಿ ಹಂಚಿಕೆಗೆ ತಾತ್ಕಲಿಕ ತಡೆ ನೀಡಲಾಗಿದೆ.

ಈ ಹಿನ್ನಲೆಯಲ್ಲಿ ಔಷಧಿ ವಿತರಣೆಗೆ ಅವಕಾಶ ನೀಡುವಂತೆ ಕೋರಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಹಂಪಿಯ ಹನುಮದ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಸಂಸ್ಥಾಪಕ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಪತ್ರ ಬರೆದಿದ್ದಾರೆ.

ಈಗಾಗಲೇ 2500 ಕುಟುಂಬಗಳ 15 ಸಾವಿರ ಜನರಿಗೆ ಔಷಧ ಹಂಚಿಕೆ ಮಾಡಲಾಗಿದೆ. ಔಷಧ ಸ್ವೀಕಾರ ಮಾಡಿದವರ ಆಧಾರ್ ಕಾರ್ಡ್‌ ಸೇರಿ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿದ್ದೇವೆ. ಔಷಧಿಯಲ್ಲಿ ಯಾವುದೇ ಅಪಾಯಕಾರಿ ಪದಾರ್ಥಗಳು ಇಲ್ಲವೆಂದು ದೃಢೀಕರಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

English summary
Karnataka government not permitted the usage of ayurvedic medicine by B. Anandaiah. Hampi-based Hanumad Janmabhoomi Teertha Kshetra Trust write letter to Chief minister in this issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X