ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿ ಜಿಲ್ಲೆಯ ಉಪ್ಪಾರಹಳ್ಳಿಯಲ್ಲಿ ಮದ್ಯಪಾನ ನಿಷೇಧ: ಮಹಿಳೆಯರ ಸಂತಸ

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಸೆಪ್ಟೆಂಬರ್‌, 20: ಜಿಲ್ಲೆಯ ಕಂಪ್ಲಿ ಸಮೀಪದ ಮೇಟ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪ್ಪಾರಹಳ್ಳಿ ಗ್ರಾಮದಲ್ಲಿ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಮದ್ಯಪಾನ ನಿಷೇಧ ಮಾಡಿ ಎಂದು ನಾಮಫಲಕವನ್ನು ಹಾಕಲಾಗಿದೆ. ಮದ್ಯಪಾನ ಮುಕ್ತ ಗ್ರಾಮವೆಂದು ನಾಮಫಲಕ ಅನಾವರಣಗೊಳಿಸಲಾಯಿತು. ಜಿಲ್ಲೆಯ ಎಸ್‌ಪಿ ಸೈದುಲ್ ಅಡಾವತ್, ಎಎಸ್‌ಪಿ ನಟರಾಜ್, ಡಿವೈಎಸ್‌ಪಿ ಎಸ್.ಎಸ್.ಕಾಶಿ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಉಪ್ಪಾರ ಹಳ್ಳಿ ಗ್ರಾಮವನ್ನು ಮದ್ಯಮುಕ್ತ ಗ್ರಾಮವನ್ನಾಗಿ ಘೋಷಿಸಿದೆ.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಭೀಮಪ್ಪ, ಹನುಮನಗೌಡ ಮಾತನಾಡಿ, "ಪ್ರತಿನಿತ್ಯ ಕುಡಿತದಿಂದಲೇ ಜೀವನ ಕಳೆಯುತ್ತಿದ್ದಾರೆ. ಈ ಗ್ರಾಮದ ಹಲವಾರು ಯುವಕರು ಸಂಪೂರ್ಣ ಕುಡಿತದ ಚಟಕ್ಕೆ ಬಿದ್ದಿದ್ದಾರೆ. ಒಗ್ಗಟ್ಟಿನಿಂದ ಮುಂದೆ ಬಂದು ಮದ್ಯಮುಕ್ತ ಗ್ರಾಮವನ್ನಾಗಿಸಲು ನಾವು ನಿರ್ಧರಿಸಿದ್ದೇವೆ. ಅಲ್ಲದೇ ಗ್ರಾಮದಲ್ಲಿ ಮದ್ಯ ಮಾರಾಟ ಮಾಡಿದರೆ ಅಥವಾ ಕುಡಿದರೆ ಅಂತವರನ್ನು ಗ್ರಾಮದಿಂದ ಹೊರಹಾಕಲಾಗುವುದು," ಎಂದು ಎಚ್ಚರಿಕೆ ನೀಡಿದರು.

Breaking: ರಾಮನಗರ ಜಿಲ್ಲಾದ್ಯಂತ ಈ ಎರಡು ದಿನ ಮದ್ಯ ಮಾರಾಟ ನಿಷೇಧBreaking: ರಾಮನಗರ ಜಿಲ್ಲಾದ್ಯಂತ ಈ ಎರಡು ದಿನ ಮದ್ಯ ಮಾರಾಟ ನಿಷೇಧ

ಮದ್ಯ ಮಾರಾಟ ಮಾಡಿದ್ರೆ 112ಕ್ಕೆ ಕರೆ ಮಾಡಿ

ನಂತರ ಪಿಐ ಸುರೇಶ್‌ ತಳವಾರ ಮಾತನಾಡಿ, "ಬಳ್ಳಾರಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಉಪ್ಪಾರಳ್ಳಿ ಗ್ರಾಮವನ್ನು ಮದ್ಯಮುಕ್ತ ಗ್ರಾಮವೆಂದು ಜನರ ಸಹಕಾರದೊಂದಿಗೆ ಘೋಷಿಸಲಾಗಿದೆ. ಗ್ರಾಮದ ಜನರು ಮುಂದೆ ಬಂದು ತಮ್ಮ ಗ್ರಾಮದಲ್ಲಿ ಮದ್ಯವನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ. ಮುಂದಿನ ದಿನಗಳಲ್ಲಿ ಯಾರಾದರೂ ಅಕ್ರಮವಾಗಿ ಮದ್ಯ ಮಾರಾಟ ಮಾಡಿದರೆ 112 ನಂಬರ್‌ಗೆ ಕರೆ ಮಾಡಿ ತಿಳಿಸಬೇಕು. ನಂತರ ನಾವು ಕಾನೂನು ಕ್ರಮ ಕೈಗೊಳ್ಳುತ್ತೇವೆ," ಎಂದು ತಿಳಿಸಿದರು.

Alcohol ban in Upparahalli village of Bellary district

ಇದೇ ವೇಳೆ ಗಂಗಮ್ಮ ಎಂಬ ಗ್ರಾಮದ ಮಹಿಳೆಯೊಬ್ಬರು ಆಗಮಿಸಿ, "ಮದ್ಯಪಾನದಿಂದ ನಮ್ಮ ಕುಟುಂಬದ ಪರಿಸ್ಥಿತಿ ತೀರಾ ಹದಗೆಟ್ಟು ಹೋಗಿತ್ತು. ಮದ್ಯಪಾನ ಮಾಡುತ್ತಿದ್ದ ನನ್ನ ಪತಿಯಿಂದ ನಮಗೆಲ್ಲ ನೆಮ್ಮದಿ ಇಲ್ಲದಂತಾಗಿತ್ತು. ಮದ್ಯಪಾನ ಮುಕ್ತ ಗ್ರಾಮ ಮಾಡಿರುವುದು ತುಂಬಾ ಸಂತೋಷ ತಂದಿದೆ," ಎಂದು ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಉಪ್ಪಾರಹಳ್ಳಿ ಬೀಟ್‌ನ ಮುಖ್ಯ ಪೇದೆ ಆನಂರ್‌, ಪೇದೆ ಸುರೇಶ್‌, ಗ್ರಾಮ ಪಂಚಾಯತ್‌ ಸದಸ್ಯರಾದ ನಾಗರಾಜಪ್ಪ, ದೇವೇಂದ್ರಪ್ಪ, ತಿಮ್ಮಪ್ಪ, ಗ್ರಾಮಸ್ಥರಾದ ಮುನಿಯಪ್ಪ, ತಿಪ್ಪಣ್ಣ, ಅಂಜಿನಪ್ಪ, ಮಾಯಪ್ಪ, ವಿರುಪಣ್ಣ ಸೇರಿದಂತೆ ಗ್ರಾಮದ ಮುಖಂಡರು, ಮಹಿಳೆಯರು, ಯುವಕರು ಉಪಸ್ಥಿತರಿದ್ದರು.

ಸಾಮಾನ್ಯವಾಗಿ ಎಲ್ಲ ಹಳ್ಳಿಗಳಲ್ಲಿಯೂ ಮದ್ಯ ಮಾರಾಟವನ್ನು ನಿಷೇಧಿಸಬೇಕು ಎಂದು ಒತ್ತಾಯಗಳು ಕೇಳಿ ಬರುತ್ತಲೇ ಇರುತ್ತವೆ. ಅದರಲ್ಲೂ ಸರ್ಕಾರಕ್ಕೆ ಮುಖ್ಯವಾಗಿ ಆದಾಯ ಬರುವುದು ಈ ಬಾರ್‌ಗಳಿಂದಲೇ ಎನ್ನುವ ಮಾಹಿತಿಯೊಂದು ಯಾವಾಗಲೂ ಹರಿದಾಡುತ್ತಿರುತ್ತದೆ. ಹಳ್ಳಿಗಳಲ್ಲಿ ಮದ್ಯ ನಿಷೇಧಿಸಿದಂತೆ ನಗರ ಪ್ರದೇಶಗಳಲ್ಲೂ ಮದ್ಯ ಮಾರಾಟ ನಿಲ್ಲಿಸಿದರೆ ಯಾವುದೇ ಅನಾಹುತಗಳು ಆಗುವುದಿಲ್ಲ. ಸಾಮಾನ್ಯವಾಗಿ ನಗರ ಪ್ರದೇಶಗಳ ಬಾರ್‌ಗಳಿಂದಲೇ ಹಳ್ಳಿಗಳಿಗೂ ಮದ್ಯ ರವಾನೆ ಆಗುತ್ತಲೇ ಇರುತ್ತದೆ ಎನ್ನುವ ಆರೋಪಗಳು ಕೇಳಿಬರುತ್ತಲೇ ಇರುತ್ತವೆ.

Alcohol ban in Upparahalli village of Bellary district

ಆದ್ದರಿಂದ ನಗರಲ್ಲಿರುವ ಬಾರ್‌ಗಳನ್ನು ಮುಚ್ಚಿದರೆ ಇನ್ನೆಲ್ಲಿಂದ ಮದ್ಯ ಲಭ್ಯ ಆಗುತ್ತದೆ ಎನ್ನುವುದು ಜನರ ಅಭಿಪ್ರಾಯ ಆಗಿದೆ. ಉಪ್ಪಾರಹಳ್ಳಿ ಮದ್ಯ ನಿಷೇಧ ಮಾಡಿರುವುದು ಇಳ್ಳೆಯ ಕೆಲಸ ಆಗಿದ್ದು, ಆದರೂ ಮತ್ತೆ ಶುರುವಾಗುವುದಿಲ್ಲ ಅನ್ನುವುದಕ್ಕೆ ಏನು ಗ್ಯಾರೆಂಟಿ? ಆದ್ದರಿಂದ ಬಳ್ಳಾರಿ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಬಾರ್‌ಗಳನ್ನು ಮುಚ್ಚಿದರೆ ಅಲ್ಲಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ತಾನಾಗಿಯೇ ಮದ್ಯ ಸೇವನೆ ನಿಲ್ಲಿಸುತ್ತಾರೆ ಎನ್ನುವುದು ಜನರ ಅಭಿಪ್ರಾಯ ಆಗಿದೆ.

English summary
Alcohol consumption has banned leadership under of police department in Upparahalli village of Bellary district, Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X