ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅತ್ತ ರಾಮ ಮಂದಿರ ನಿರ್ಮಾಣ; ಇತ್ತ ಕಿಷ್ಕಿಂಧೆಯಲ್ಲಿ ಹನುಮ ಮಂದಿರ ನಿರ್ಮಾಣದ ಗುರಿ

By ಭೀಮರಾಜ ಯು
|
Google Oneindia Kannada News

ಹೊಸಪೇಟೆ, ಮಾರ್ಚ್ 17: ಇಡೀ ದೇಶ ತಿರುಗಿ ನೋಡುವಂಥ ರಾಮ ಮಂದಿರ ನಿರ್ಮಾಣದ ಕಾರ್ಯ ಅಯೋಧ್ಯೆಯಲ್ಲಿ ಭರದಿಂದ ಸಾಗುತ್ತಿದ್ದರೆ, ಇತ್ತ ಕಿಷ್ಕಿಂಧೆ ಬಳಿ ರಾಮ ಭಂಟ ಹನುಮ ಮಂದಿರ ನಿರ್ಮಾಣಕ್ಕೆ ಹಂಪಿಯ ಗೋವಿಂದಾನಂದ ಸರಸ್ವತಿ ಸ್ವಾಮೀಜಿಯವರು ಸತತ 12 ವರ್ಷಗಳ ಕಾಲ ದೇಶ ಸಂಚಾರ ಕೈಗೊಂಡಿದ್ದಾರೆ.

ಆಂಜನೇಯನ ಜನ್ಮಭೂಮಿ ಕಿಷ್ಕಿಂಧೆ ಬಳಿ ಹನುಮ ಮಂದಿರ ನಿರ್ಮಾಣ ಮಾಡಬೇಕೆಂದು ಗೋವಿಂದಾನಂದ ಸರಸ್ವತಿ ಸ್ವಾಮೀಜಿಯವರು ಶ್ರಮಿಸುತ್ತಿದ್ದಾರೆ.

ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ನಿವಾಸಕ್ಕಾಗಿ 10 ಕೋಟಿ ರು ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ನಿವಾಸಕ್ಕಾಗಿ 10 ಕೋಟಿ ರು

ದಕ್ಷಿಣ ಕಾಶಿ ಎಂದೇ ಕರೆಯುವ ಹಂಪಿಯಿಂದ ಆರಂಭವಾಗಿ 12 ವರ್ಷಗಳ ಬಳಿಕ ಅಯೋಧ್ಯೆಯ ಕುಂಭಮೇಳ ತಲುಪಲಿದೆ. ಇಡೀ ಭಾರತ ದೇಶಕ್ಕೆ ಆಂಜನೇಯನ ಜನ್ಮಭೂಮಿಯನ್ನು ಪರಿಚಯಿಸುವ ಈ ಮಹಾ ಸಂಕಲ್ಪವನ್ನು ಶ್ರೀ ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ಗೋವಿಂದಾನಂದ ಸರಸ್ವತಿ ಸ್ವಾಮೀಜಿಯ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.

ರಥದ ವಿಶೇಷತೆ ಮತ್ತು ವೆಚ್ಚ

ರಥದ ವಿಶೇಷತೆ ಮತ್ತು ವೆಚ್ಚ

ಅಯೋಧ್ಯೆಯಿಂದ 3 ಶ್ರೀರಾಮನ ಪಾದುಕೆಗಳನ್ನು ತರಲಾಗಿದ್ದು, ಒಂದನ್ನು ಶ್ರೀ ಹನುಮದ್ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಲ್ಲಿ ಇಟ್ಟು, ಇನ್ನೆರಡು ಪಾದುಕೆಗಳನ್ನು ರಥದಲ್ಲಿ ಇರಿಸಿ ಪೂಜಿಸಲಾಗುತ್ತಿದೆ. ಲಾರಿಯಲ್ಲಿ ಸಿದ್ಧಗೊಂಡಿರುವ ರಥಯಾತ್ರೆಯು ದಾರಿ ಉದ್ದಕ್ಕೂ ರಾಮನ ಮಹಿಮೆ ಮತ್ತು ಹನುಮ ಭಕ್ತಿಯನ್ನು ಸಾರುತ್ತದೆ.

ಉತ್ಸವ ಮೂರ್ತಿಗಳನ್ನು ಹೊತ್ತು ರಥ ಸಂಚರಿಸುತ್ತದೆ

ಉತ್ಸವ ಮೂರ್ತಿಗಳನ್ನು ಹೊತ್ತು ರಥ ಸಂಚರಿಸುತ್ತದೆ

ಇದರಲ್ಲಿ ರಾಮ, ಸೀತೆ, ಲಕ್ಷ್ಮಣ, ಹನುಮ, ವಾಲಿ, ಸುಗ್ರೀವ, ಶಿವ ಮುಂತಾದ ಉತ್ಸವ ಮೂರ್ತಿಗಳನ್ನು ಹೊತ್ತು ರಥ ಸಂಚರಿಸುತ್ತದೆ.

ಈ ರಥವನ್ನು ನಿರ್ಮಾಣ ಮಾಡುವುದಕ್ಕೆ ಬರೋಬ್ಬರಿ 40 ಲಕ್ಷ ರೂ. ವೆಚ್ಚ ತಗುಲಿದ್ದು, ಈ ರಥವನ್ನು ಹನುಮ ಮಂದಿರದ ನಿರ್ಮಾಣದ ಶೈಲಿಯಲ್ಲಿ ನಿರ್ಮಿಸಲಾಗಿದೆ. ರಾತ್ರಿ ಹೊತ್ತಲ್ಲಿ ವಿದ್ಯುತ್ ದೀಪಲಂಕಾರಗಳಿಂದ ಕಂಗೊಳಿಸುತ್ತಿರುತ್ತದೆ.

ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಮುಕ್ತಾಯ: ಒಟ್ಟು ಸಂಗ್ರಹವಾಗಿದ್ದು ಎಷ್ಟು?ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಮುಕ್ತಾಯ: ಒಟ್ಟು ಸಂಗ್ರಹವಾಗಿದ್ದು ಎಷ್ಟು?

ಯಾವ ರಾಜ್ಯಗಳಲ್ಲಿ ಸಂಚಾರ

ಯಾವ ರಾಜ್ಯಗಳಲ್ಲಿ ಸಂಚಾರ

ಕರ್ನಾಟಕದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಂದು ವರ್ಷಗಳ ಕಾಲ ಪರ್ಯಟನೆ ಮಾಡಲಿದ್ದು, ಅಲ್ಲದೆ ತಮಿಳುನಾಡು, ಆಂಧ್ರಪ್ರದೇಶದಲ್ಲಿ ತಲಾ ಒಂದು ವರ್ಷ ಮತ್ತು ಕೇರಳದಲ್ಲಿ 6 ತಿಂಗಳ ಕಾಲ ಸಂಚರಿಸಲಿದೆ. ಬಳಿಕ ಉತ್ತರ ಭಾರತಕ್ಕೆ ತಲುಪಲಿದ್ದು, ಅಯೋಧ್ಯೆಗೆ ತಲುಪುವ ಹೊತ್ತಿಗೆ 6 ವರ್ಷ ಕಳೆದಿರುತ್ತದೆ.

ಹನುಮ ಜನ್ಮಭೂಮಿ ಕಿಷ್ಕಿಂಧೆ

ಹನುಮ ಜನ್ಮಭೂಮಿ ಕಿಷ್ಕಿಂಧೆ

ಕುಂಭಮೇಳದಲ್ಲಿ ಭಾಗವಹಿಸುವ ನಾಗಸಾಧುಗಳಿಗೆ ಮತ್ತು ಭಕ್ತರಿಗೆ ಹನುಮ ಜನ್ಮಭೂಮಿಯ ಬಗ್ಗೆ ಪರಿಚಯಿಸಲಾಗುತ್ತದೆ. ಒಟ್ಟಾರೆಯಾಗಿ ಅಯ್ಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣ ಮಾಡುತ್ತಿದ್ದರೆ, ಅದೇ ರೀತಿ ಹನುಮ ಜನ್ಮಭೂಮಿಯಾದ ಕಿಷ್ಕಿಂಧೆಯಲ್ಲಿ ಶ್ರೀರಾಮನ ಭಂಟ ಹನುಮನ ಮಂದಿರವನ್ನು ನಿರ್ಮಾಣ ಮಾಡಲಿದೆ ಎಂಬುದು ಈ ರಥಯಾತ್ರೆಯ ಉದ್ದೇಶವಾಗಿದೆ.

English summary
Govindananda Saraswathi Swamiji of Hampi has will travelling for 12 consecutive years to build the Hanuman Mandir near Kishkindha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X