• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಂಧ್ರದಲ್ಲಿ ಸೆರೆಸಿಕ್ಕ ವೆಪನ್ ಡೀಲರ್ ಗಳಿಗೆ ಬಳ್ಳಾರಿ ನಂಟು

By ವಿಕಾಸ್ ನಂಜಪ್ಪ
|

ಬಳ್ಳಾರಿ, ಆಗಸ್ಟ್, 13 : ಅಕ್ರಮ ಶಸ್ತ್ರಾಸ್ತ್ರ ಸಾಗಾಟದಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳನ್ನು ಆಂಧ್ರ ಪೊಲೀಸರು ಅನಂತಪುರ ರೈಲ್ವೇ ನಿಲ್ದಾಣದಲ್ಲಿ ಬುಧವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಸ್ತ್ರಾಸ್ತ್ರ ದಂಧೆಯಲ್ಲಿ ಪಾಲ್ಗೊಂಡ ಆರೋಪಿಗಳು ಪೊಳ್ಳಾರೆಡ್ಡಿ, ಭಾಸ್ಕರಾಚಾರಿ, ಸೂರ್ಯನಾರಾಯಣ ಮತ್ತು ಕಲ್ಯಾಣ ಕುಮಾರ್ ಎಂದು ತಿಳಿದು ಬಂದಿದೆ. ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶೋಧ ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ.[ಭಾರತದ ಕರೆನ್ಸಿ ಮೌಲ್ಯ ಹೆಚ್ಚಿಸಲಿದೆ ಹಂಪಿ ಕಲ್ಲಿನ ರಥ]

ಆರೋಪಿಗಳನ್ನು ಕೂಲಂಕಷವಾಗಿ ವಿಚಾರಿಸಿದಾಗ, ಜರ್ಮನಿ ಹಾಗೂ ಇನ್ನಿತರ ರಾಷ್ಟ್ರಗಳಲ್ಲಿ ತಯಾರಾದ ಸ್ವಯಂಚಾಲಿತ ಪಿಸ್ತೂಲ್ ಗಳ ಮಾರಾಟ ಮಾಡುತ್ತಿರುವುದು ಹಾಗೂ ಒಂದು ಪಿಸ್ತೂಲ್ ಗೆ ಸುಮಾರು 1 ರಿಂದ 3 ಲಕ್ಷದ ವರೆಗೂ ಹಣ ನಿಗದಿಪಡಿಸುತ್ತಿದ್ದರು ತಿಳಿದು ಬಂದಿದೆ.

ಈ ವಿಚಾರವಾಗಿ ಬಂಧಿತ ನಾಲ್ವರನ್ನು ತನಿಖೆ ಒಳಪಡಿಸಿದಾಗ, ಇವರು ಆಂಧ್ರ ಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಅಧಿಕ ಗ್ರಾಹಕರು ಇರುವುದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೇ ಈ ಕೃತ್ಯದಲ್ಲಿ ಭಾಗಿಯಾದ ಬಿಜೆಪಿ ಶಾಸಕರ ಅವ್ಯವಹಾರ ಕುರಿತಾಗಿ ಮಾಹಿತಿ ನೀಡಿದ್ದಾರೆ.

ವಿಚಾರಣೆ ವೇಳೆಯಲ್ಲಿ ಇದು ಅಂತರ ರಾಜ್ಯಗಳಿಗೆ ಸಂಬಂಧಿಸಿದ ದಂಧೆ ಎಂದು ತಿಳಿದುಕೊಂಡ ಪೊಲೀಸರು ಇದರಲ್ಲಿ ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳ ನಡುವಿನ ಸಂಬಂಧ ಗಾಡವಾಗಿರುವ ಮಾಹಿತಿ ಬೆಳಕಿಗೆ ಬಂದಿದೆ. ಜೊತೆಗೆ ತಮಿಳುನಾಡು ಹಾಗೂ ಕೇರಳ ರಾಜ್ಯಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

English summary
A major inter-state arms smuggling racket has been busted in Ananthpur, Andhra Pradesh and the probe has led to Karnataka as well. A gang of four were arrested in Ananthpur Railway station and during the preliminary investigations it was found that they had a major clientel in Bellary, Karnataka as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X