ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

15 ಎಕರೆ ತೋಟದಲ್ಲಿ ಕೊಳೆಯುತ್ತಿದೆ ಮಲ್ಲಿಗೆ, ಗುಲಾಬಿ, ಪಪ್ಪಾಯ

|
Google Oneindia Kannada News

ಬಳ್ಳಾರಿ, ಏಪ್ರಿಲ್ 04: ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರಕ್ಕೆ ಲಾಕ್‌ಡೌನ್ ಅನಿವಾರ್ಯ ಆಗಿದ್ದರೂ, ಅವರಿಂದ ಅನೇಕರಿಗೆ ತೊಂದರೆ ಆಗಿದೆ. ಅದರಲ್ಲಿಯೂ ರೈತರ ಪಾಡು ಕೇಳಿದರೆ ನಿಜಕ್ಕೂ ಬೇಸರ ಆಗುತ್ತದೆ.

ಕೊರೋನಾ ಮಹಾ ಮಾರಿಗೆ ರೈತರ ಬಾಳು ಬೀದಿಗೆ ಬಿದ್ದಿದೆ.‌ ಬೆಳೆದ ಬೆಳೆಯನ್ನು ಮಾರಾಟ ಮಾಡಲು ಆಗದೇ ರೈತರು ಕಂಗಾಲಾಗಿದ್ದಾರೆ. ರೈತರು ತಮ್ಮ ಬೆಳೆಯನ್ನು ತಾವೇ ನಾಳ ಮಾಡುತ್ತಿರುವ ಘಟನೆ ರಾಜ್ಯದಲ್ಲಿ ನಡೆಯುತ್ತಿದೆ. ಬಳ್ಳಾರಿ ಜಿಲ್ಲೆಯ ಹಂಗರಿ ಬೊಮ್ಮನಹಳ್ಳಿ ತಾಲೂಕಿನ ಶಿವಾನಂದಮಠ ಗ್ರಾಮದ ರೈತ ಶರಣಬಸಯ್ಯ ಕೂಡ ಈಗ ಕೆಟ್ಟ ಸ್ಥಿತಿಯಲ್ಲಿ ಇದ್ದಾರೆ.

A Bellary Farmer Sad That He Cant Sell His Flowers And Fruits

ಕಲ್ಲಂಗಡಿಯನ್ನು ನೇರ ಗ್ರಾಹಕರಿಗೆ ಮಾರಿದ ಉಡುಪಿ ಕೃಷಿಕಕಲ್ಲಂಗಡಿಯನ್ನು ನೇರ ಗ್ರಾಹಕರಿಗೆ ಮಾರಿದ ಉಡುಪಿ ಕೃಷಿಕ

ರೈತ ಶರಣಬಸಯ್ಯ 15 ಏಕರೆಯಲ್ಲಿ ಮಲ್ಲಿಗೆ ಹೂ, ಗುಲಾಬಿ ಹೂ, ಪಪ್ಪಾಯ ಹಣ್ಣುಗಳನ್ನು ಬೆಳೆದಿದ್ದರು. ಬೆಳೆ ತುಂಬ ಚೆನ್ನಾಗಿ ಬಂದಿತು. ಆದರೆ, ಈಗ ಅವರಿಗೆ ತಮ್ಮ ಬೆಳೆಯನ್ನು ಮಾರಾಟ ಮಾಡಲು ಆಗುತ್ತಿಲ್ಲ. ಲಾಕ್‌ಡೌನ್‌ನಿಂದ ಹೂವು ಹಣ್ಣುಗಳ ಬೇಡಿಕೆ ಕೂಡ ಕಡಿಮೆ ಆಗಿದೆ. ಅಲ್ಲದೆ ಮಾರಾಟಕ್ಕೆ ಸರಿಯಾದ ವ್ಯವಸ್ಥೆ ಸಿಗುತ್ತಿಲ್ಲ.

ಇದರಿಂದ ಹಣ್ಣು ಹಾಗೂ ಹೂವುಗಳು ತೋಟದಲ್ಲಿ ಕೊಳೆಯುವ ಸ್ಥಿತಿ ನಿರ್ಮಾಣವಾಗಿದೆ. ತಿಂಗಳುಗಳ ಕಾಲ ಕಷ್ಟಪಟ್ಟು ಬೆಳೆದ ಬೆಳೆ ತಮ್ಮ ಕಣ್ಣ ಮುಂದೆಯೇ ಹಾಳಾಗುತ್ತಿದೆ. ಏನು ಮಾಡುವುದು ತಿಕ್ಕು ತೊಚದ ಅವರು ಬೆಳೆದ ಬೆಳಯನ್ನು ದನಕರುಗಳಿಗೆ ಹಾಕುತಿದ್ದಾರೆ.

English summary
Sharana Basayya, A bellary farmer sad that he can't sell his flowers fruits because of lockdown .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X