ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿ; ಕೊರೊನಾ ಗೆದ್ದ 93 ವರ್ಷದ ವೃದ್ಧೆ

|
Google Oneindia Kannada News

ಬಳ್ಳಾರಿ, ಜುಲೈ 23 : ಕೋವಿಡ್ -19 ಸೋಂಕಿನ ಬಗ್ಗೆ ಜನರು ಆತಂಕಪಡುವ ಅಗತ್ಯವಿಲ್ಲ. ಬಳ್ಳಾರಿ ಜಿಲ್ಲೆಯಲ್ಲಿ 93 ವರ್ಷದ ವೃದ್ಧೆರೊಬ್ಬರು ಸೋಂಕಿನಿಂದ ಗುಣಮುಖಗೊಂಡು ಮನೆಗೆ ಮರಳಿದ್ದಾರೆ.

ಬಳ್ಳಾರಿ ಕೋವಿಡ್ ಆಸ್ಪತ್ರೆಗೆ 12 ದಿನಗಳ ಹಿಂದೆ ದಾಖಲಾಗಿದ್ದ 93 ವರ್ಷ ವಯಸ್ಸಿನ ವೃದ್ಧೆಯೊಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಗಳು ಅವರನ್ನು ಆತ್ಮೀಯವಾಗಿ ಬೀಳ್ಕೊಟ್ಟರು.

ಕೊರೊನಾ ಸೋಂಕಿತರಿಗೆ ಯೋಗಭ್ಯಾಸ ಮಾದರಿಯಾದ ಚಾಂದಪಾಶಾ! ಕೊರೊನಾ ಸೋಂಕಿತರಿಗೆ ಯೋಗಭ್ಯಾಸ ಮಾದರಿಯಾದ ಚಾಂದಪಾಶಾ!

ರೋಗ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಅವರ ಸ್ವ್ಯಾಬ್ ತೆಗೆದು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ವರದಿ ಪಾಸಿಟಿವ್ ಎಂದು ಬಂದ ಹಿನ್ನೆಲೆಯಲ್ಲಿ ಅವರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ; ತಾಯಿ, ಮಗು ಸುರಕ್ಷಿತ ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ; ತಾಯಿ, ಮಗು ಸುರಕ್ಷಿತ

Women

ಡಾ. ಬಸರೆಡ್ಡಿ, ಡಾ. ವಿಶ್ವನಾಥ ಮತ್ತು ಡಾ. ಚಂದ್ರಶೇಖರ ನೇತೃತ್ವದ ವೈದ್ಯರ ತಂಡ ವೃದ್ಧೆಗೆ ವಿಶೇಷ ಚಿಕಿತ್ಸೆ ನೀಡಿತ್ತು. ಈಗ ಸೋಂಕಿನಿಂದ ಅವರು ಗುಣಮುಖರಾಗಿದ್ದು ಡಿಸ್ಚಾರ್ಜ್ ಮಾಡಲಾಗಿದೆ.

 ಕೆಲಸದ ಸಿಬ್ಬಂದಿಗೆ ಸೋಂಕು; ಕ್ವಾರಂಟೈನ್ ಆದ ಬಳ್ಳಾರಿ ಡಿಸಿ ಕೆಲಸದ ಸಿಬ್ಬಂದಿಗೆ ಸೋಂಕು; ಕ್ವಾರಂಟೈನ್ ಆದ ಬಳ್ಳಾರಿ ಡಿಸಿ

ಆಸ್ಪತ್ರೆಯಲ್ಲಿ ಮೂರು ಹೆರಿಗೆ : ಬಳ್ಳಾರಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಾಗಿ ಚಿಕಿತ್ಸೆಗೆ ದಾಖಲಾಗಿದ್ದ ಮೂವರು ಗರ್ಭಿಣಿಯರಿಗೆ ಹೆರಿಗೆ ಮಾಡಿಸಲಾಗಿದೆ. ತಾಯಿ ಮತ್ತು ಮಕ್ಕಳು ಕ್ಷೇಮವಾಗಿದ್ದಾರೆ. ಇದುವರೆಗೆ ಕೋವಿಡ್ ಆಸ್ಪತ್ರೆಯಲ್ಲಿ 13 ಕೋವಿಡ್ ಸೋಂಕಿತ ಗರ್ಭಿಣಿಯರಿಗೆಗ ಹೆರಿಗೆ ಮಾಡಿಸಲಾಗಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಬುಧವಾರ 134 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 2989ಕ್ಕೆ ಏರಿಕೆಯಾಗಿದೆ.

English summary
A 93-year-old Ballari woman has fully recovered from the novel Coronavirus. After 12 days of treatment patient beat the deadly virus and discharged from hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X