• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೊಸಪೇಟೆ; ಒಂದೇ ಗ್ರಾಮದ 57 ಜನರಿಗೆ ಕೋವಿಡ್ ಸೋಂಕು

By ವಿಜಯನಗರ ಪ್ರತಿನಿಧಿ
|

ಹೊಸಪೇಟೆ, ಏಪ್ರಿಲ್ 21; ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ರಾಜ್ಯ ಸರ್ಕಾರ ಕೋವಿಡ್ ಹರಡುವಿಕೆ ತಡೆಯಲು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಒಂದೇ ಗ್ರಾಮದಲ್ಲಿ 57 ಜನರಿಗೆ ಕೊರೊನಾ ಸೋಂಕು ಧೃಢಪಟ್ಟಿದೆ. ಮರಿಯಮ್ಮನಹಳ್ಳಿ ಹೋಬಳಿಯ ವೆಂಕಟಾಪುರ ಗ್ರಾಮದಲ್ಲಿ ಸೋಂಕು ಕಾಣಿಸಿಕೊಂಡಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಬಳ್ಳಾರಿಯಲ್ಲಿ ಕೋವಿಡ್ ಪರಿಸ್ಥಿತಿ; ತುರ್ತು ಸಭೆಯ ಮುಖ್ಯಾಂಶಗಳು ಬಳ್ಳಾರಿಯಲ್ಲಿ ಕೋವಿಡ್ ಪರಿಸ್ಥಿತಿ; ತುರ್ತು ಸಭೆಯ ಮುಖ್ಯಾಂಶಗಳು

ಈ ಹಿಂದೆ ಒಂದೇ ಕುಟುಂಬದ 11 ಜನರಿಗೆ ಕೊರೊನಾ ಸೋಂಕು ತಗುಲಿತ್ತು. ಇದರ ಭಾಗವಾಗಿ ಅವರ ಪ್ರಾಥಮಿಕ ಸೋಂಕಿತರಿಗೆ ಪರೀಕ್ಷೆ ಮಾಡಿಸಿದಾಗ ಮತ್ತಷ್ಟು ಜನರಿಗೆ ಸೋಂಕು ಧೃಢಪಟ್ಟಿದೆ.

 ಕೋವಿಡ್ ಬಾಧಿತ ರಾಜ್ಯಗಳಿಗೆ ರಿಲಯನ್ಸ್‌ನಿಂದ ಆಮ್ಲಜನಕ ಪೂರೈಕೆ ಕೋವಿಡ್ ಬಾಧಿತ ರಾಜ್ಯಗಳಿಗೆ ರಿಲಯನ್ಸ್‌ನಿಂದ ಆಮ್ಲಜನಕ ಪೂರೈಕೆ

ಆರೋಗ್ಯ ಇಲಾಖೆ ಅಧಿಕಾರಿಗಳು ವೆಂಕಟಾಪುರ‌ ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಇಡೀ‌ ಗ್ರಾಮದ ತುಂಬೆಲ್ಲ ಹೊರಗೂ, ಒಳಗೂ ಸ್ಯಾನಿಟೈಸ್ ಮಾಡಲಾಗುತ್ತಿದೆ. ಬ್ಲೀಚಿಂಗ್ ಪೌಡರ್ ಸಿಂಪಡಣೆ ಮಾಡುತ್ತಿದ್ದಾರೆ.

ವೆಂಕಟಾಪುರ ಗ್ರಾಮವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಸೀಲ್ ಡೌನ್ ಮಾಡಲಾಗಿದೆ. ಗ್ರಾಮಕ್ಕೆ ಯಾರೂ ಸಹ ಬರದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

English summary
57 people of the Venkatapura village of Hospet taluk, Vijayanagara district tested positive for COVID 19. Health department officials seal down the area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X