• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೊಸ ವರ್ಷಕ್ಕೆ ನಿವೇಶನ ಕೊಳ್ಳುವವರಿಗೆ ಸಿಹಿ ಸುದ್ದಿ

|

ಬಳ್ಳಾರಿ, ಡಿಸೆಂಬರ್ 25: ಹೊಸ ವರ್ಷದಲ್ಲಿ ನಿವೇಶನ ಕೊಳ್ಳಲು ಯೋಜನೆ ರೂಪಿಸುತ್ತಿರುವ ಜನರಿಗೆ ಸಿಹಿ ಸುದ್ದಿ. ಜನವರಿ 11ರಂದು ನಿವೇಶನಗಳ ಬಹಿರಂಗ ಹರಾಜು ನಡೆಸಲು ಬುಡಾ ತೀರ್ಮಾನಿಸಿದೆ. ಒಟ್ಟು 52 ಸೈಟುಗಳನ್ನು ಹರಾಜು ಮೂಲಕ ಮಾರಾಟ ಮಾಡಲಾಗುತ್ತದೆ.

"ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ವ್ಯಾಪ್ತಿಯಲ್ಲಿ ಬರುವ 52 ನಿವೇಶನಗಳನ್ನು ಜನವರಿ 11ರಂದು ಬಹಿರಂಗ ಹರಾಜು ಮಾಡಲು ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದೆ" ಎಂದು ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಹೇಳಿದ್ದಾರೆ.

ಬಳ್ಳಾರಿ; ಬುಡಾದಿಂದ 101 ಎಕರೆ ನಿವೇಶನ ಯೋಜನೆಗೆ ಒಪ್ಪಿಗೆ

ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ವಿವಿಧ ಬಡಾವಣೆಗಳಲ್ಲಿ ಲಭ್ಯವಿರುವ 52 ವಾಸಯೋಗ್ಯ ಮೂಲೆ/ ಬಿಡಿ ನಿವೇಶನಗಳು, ವರ್ಕ್ ಶಾಪ್ ವಾಣಿಜ್ಯ ನಿವೇಶನಗಳು ಹಾಗೂ ಖಾಲಿ ಜಾಗಗಳನ್ನು ಬಹಿರಂಗ ಹರಾಜಿನ ಮೂಲಕ ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗುತ್ತದೆ.

ನಿವೇಶನ ಪಡೆದವರಿಗೆ ಎಚ್ಚರಿಕೆ ಕೊಟ್ಟ ಬಿಡಿಎ

ರಾಘವೇಂದ್ರ ಕಾಲೋನಿ 2ನೇ ಹಂತದ 26 ವಾಸಯೋಗ್ಯ ನಿವೇಶನ, ಶ್ರೀ ಕನಕದುರ್ಗಮ್ಮ ಬಡಾವಣೆಯಲ್ಲಿರುವ 1, ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯ 7, ವಾಣಿಜ್ಯ ನಿವೇಶನ 1, ಡಾ. ಸರ್. ಎಂ. ವಿ. ಲಾರಿ ತಂಗುದಾಣ ವರ್ಕ್ ಶಾಪ್ ವಾಣಿಜ್ಯ ನಿವೇಶನ 11, ಕುವೆಂಪು ನಗರ 3 ವಾಸಯೋಗ್ಯ ನಿವೇಶನ, ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ವಾಣಿಜ್ಯ ಸಂಕೀರ್ಣದಲ್ಲಿ 3 ಖಾಲಿ ಜಾಗಗಳನ್ನು ಹರಾಜು ಹಾಕಲಾಗುತ್ತದೆ.

ಮುಡಾ ಭೂಮಿ ಅತಿಕ್ರಮಣ ತೆರವು; 10 ಕೋಟಿ ರೂ.ಮೌಲ್ಯದ ನಿವೇಶನ ವಶಕ್ಕೆ

ಈ ಹರಾಜು ಮಾತ್ರವಲ್ಲ ಬಿ. ಗೋನಾಳ್ ಗ್ರಾಮದಲ್ಲಿ ಪ್ರಾಧಿಕಾರ ಮತ್ತು ರೈತರ ಸಹಭಾಗಿತ್ವದಲ್ಲಿ 101.98 ಎಕರೆ ಜಮೀನಿನಲ್ಲಿ 50:50 ಅನುಪಾತದಂತೆ ಪ್ರಾಧಿಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ವಸತಿ ಬಡಾವಣೆಯನ್ನು ನಿರ್ಮಿಸಲು ಇ-ಟೆಂಡರ್ ಪ್ರಾಕ್ಯೂಮೆಂಟ್ ಮುಖಾಂತರ ಟೆಂಡರ್ ಆಹ್ವಾನಿಸಲು ಅನುಮೋದನೆ ನೀಡಲಾಗಿದೆ.

ಕೈಗಾರಿಕೆ ಬಹುನಿವೇಶನ ವಿನ್ಯಾಸ ನಕ್ಷೆ ಅನುಮೋದನೆ, ಖಾಸಗಿ ವಸತಿ ವಿನ್ಯಾಸ ನಕ್ಷೆ ಅನುಮೋದನೆ ನೀಡಲು, ಜಮೀನುಗಳಿಗೆ ಭೂ-ಉಪಯೋಗ ಬದಲಾವಣೆಗೆ ಅನುಮೋದನೆ ನೀಡುವ ಬಗ್ಗೆ, ವಸತಿ ವಿನ್ಯಾಸ ನಕ್ಷೆ ಮಂಜೂರಾತಿ ಕೋರಿರುವ ಅರ್ಜಿಗಳ ಬಗ್ಗೆಯೂ ಬುಡಾ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

English summary
Ballari Urban Development Authority (BUDA) decided to sale 52 site by auction on January 11, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X