ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಪ್ರಕರಣ ಹೆಚ್ಚಳದಿಂದ ಹಂಪಿ ಕನ್ನಡ ವಿವಿಗೆ 5 ದಿನಗಳ ರಜೆ ಘೋಷಣೆ

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಆಗಸ್ಟ್‌ 03: ಹಂಪಿ ಕನ್ನಡ ವಿಶ್ವವಿದ್ಯಾಲಯದ ಸುತ್ತಮುತ್ತಲ ಪ್ರದೇಶಗಳಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ (ಆಗಸ್ಟ್ 3 ರಿಂದ 7ರವರೆಗೆ) ಸತತ ಐದು ದಿನಗಳ ಕಾಲ ವಿಶ್ವವಿದ್ಯಾಲಯಕ್ಕೆ ರಜೆ ಘೋಷಿಸಲಾಗಿದೆ ಎಂದು ಕುಲಸಚಿವ ಪ್ರೊ.ಎ.ಸುಬ್ಬಣ್ಣ ರೈ ತಿಳಿಸಿದ್ದಾರೆ.

ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಹಿತದೃಷ್ಟಿಯಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಈ ರಜಾ ಅವಧಿ ದಿನಗಳಲ್ಲಿ ಆಯಾ ಅಧ್ಯಯನ, ಆಡಳಿತ ವಿಭಾಗದ ಮುಖ್ಯಸ್ಥರು, ನಿರ್ದೇಶಕರು, ಸಂಯೋಜನಾಧಿಕಾರಿ, ನಿಲಯ ಪಾಲಕರು, ಆಸ್ಪತ್ರೆಯ ವೈದ್ಯರು, ಅಧಿಕಾರಿಗಳು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ದೂರವಾಣಿ ಮತ್ತು ಇ-ಮೇಲ್‌ಗಳ ಮೂಲಕ ಸಂಪರ್ಕಿಸಬೇಕು. ಆದರೆ, ಕೇಂದ್ರಸ್ಥಾನವನ್ನು ಬಿಡುವಂತಿಲ್ಲ. ಅಗತ್ಯವಿದ್ದಾಗ ವಿವಿಯಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

5 Days Holiday To Hampi University Due To Increasing Coronavirus Cases

 ಬಳ್ಳಾರಿ ಜಿಲ್ಲೆಯಲ್ಲಿ ಇಂದು 375 ಜನರಿಗೆ ಕೊರೊನಾ ಸೋಂಕು ದೃಢ, 4 ಜನ ಸಾವು ಬಳ್ಳಾರಿ ಜಿಲ್ಲೆಯಲ್ಲಿ ಇಂದು 375 ಜನರಿಗೆ ಕೊರೊನಾ ಸೋಂಕು ದೃಢ, 4 ಜನ ಸಾವು

ಅಧ್ಯಯನ ಮತ್ತು ಆಡಳಿತ ಸಿಬ್ಬಂದಿ ಮನೆಯಿಂದಲೇ ಕಾರ್ಯವನ್ನು ನಿರ್ವಹಿಸಬೇಕು. ಸಿಬ್ಬಂದಿಯ ಕರ್ತವ್ಯ ನಿರತ ರಜೆಯನ್ನು ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.

English summary
Holiday has been announced for five consecutive days as a precautionary measure (from August 3 to 7) as cases of coronavirus are increasing in the vicinity of Hampi Kannada University
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X