• search
 • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಳ್ಳಾರಿ, ಚಿಕ್ಕಮಗಳೂರು, ರಾಮನಗರ ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಸ್ಪೋಟ

By ಬಳ್ಳಾರಿ ಪ್ರತಿನಿಧಿ
|

ಬಳ್ಳಾರಿ, ಜುಲೈ 28: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು, ಇಂದು ಸಹ ಹೊಸದಾಗಿ 432 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

   Corona ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು | Oneindia Kannada

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ರಾಜ್ಯದಲ್ಲಿ ಒಂದೇ ದಿನ 5,536 ಮಂದಿಗೆ ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿವೆ. ಬಳ್ಳಾರಿ ಜಿಲ್ಲೆಯಲ್ಲಿ 432 ಕೊರೊನಾ ಕೇಸ್ ಪತ್ತೆಯಾಗಿವೆ. ಜಿಲ್ಲೆಯಲ್ಲಿ ಇಂದು ಕೊರೊನಾ ವೈರಸ್ ಗೆ ನಾಲ್ವರು ಸಾವನ್ನಪ್ಪಿದ್ದಾರೆ. ಇದರಿಂದ ಸಾವಿನ ಸಂಖ್ಯೆ 86 ಕ್ಕೆ ಏರಿಕೆ ಕಂಡಿದೆ.

   ಅರಣ್ಯ ಸಚಿವ ಅನಂದ್ ಸಿಂಗ್ ಅವರಿಗೂ ಕೊರೊನಾ ಸೋಂಕು ದೃಢ

   ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5,298 ಕ್ಕೆ ಏರಿಕೆಯಾಗಿದ್ದು, ಇದುವರೆಗೆ 2,219 ಸೋಂಕಿತರು ಗುಣಮುಖರಾಗಿದ್ದಾರೆ. ಅದೇ ರೀತಿ ಸಕ್ರಿಯ ಪ್ರಕರಣಗಳ ಸಂಖ್ಯೆ 2.993.

   ಇಂದು ಬಳ್ಳಾರಿಯಲ್ಲಿ 179, ಹೊಸಪೇಟೆ 152, ಸಂಡೂರು 45, ಸಿರುಗುಪ್ಪ 10, ಕೂಡ್ಲಿಗಿ 12, ಹಡಗಲಿ 27, ಹಗರಿಬೊಮ್ಮನಹಳ್ಳಿ 05, ಹರಪನಹಳ್ಳಿ 01, ಇತರ ಜಿಲ್ಲೆ 01 ಕೊರೊನಾ ಪ್ರಕರಣಗಳು ವರದಿಯಾಗಿವೆ.

   ಚಿಕ್ಕಮಗಳೂರಿನಲ್ಲಿ ಸೋಂಕಿತ ಸಾವು; ಆಂಬುಲೆನ್ಸ್ ಬರದೇ ಆದ ಎಡವಟ್ಟು

   ಚಿಕ್ಕಮಗಳೂರು ಜಿಲ್ಲೆಯಲ್ಲಿ 55 ಕೊರೊನಾ ಸೋಂಕು ಪ್ರಕರಣ ಪತ್ತೆ

   ಮಹಾಮಾರಿ ಕೊರೊನಾ ವೈರಸ್ ತನ್ನ ಕಬಂಧಬಾಹುವನ್ನು ದಿನದಿಂದ ದಿನಕ್ಕೆ ವಿಸ್ತರಿಸುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ಹೊಸ 55 ಕೊರೊನಾ ಸೋಂಕು ಪ್ರಕರಣಗಳ ಜೊತೆಗೆ ಓರ್ವ ವ್ಯಕ್ತಿಯನ್ನು ಬಲಿ ತೆಗೆದುಕೊಂಡಿದೆ.

   ಕೋವಿಡ್-೧೯ ಗೆ ಚಿಕ್ಕಮಗಳೂರು ನಗರದ ಉಪ್ಪಳ್ಳಿ ನಿವಾಸಿ 58 ವರ್ಷದ ಕೊರೊನಾ ಸೋಂಕಿತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಜಿಲ್ಲೆಯ 55 ಪ್ರಕರಣಗಳ ಪೈಕಿ ಚಿಕ್ಕಮಗಳೂರು 26, ತರೀಕೆರೆ 17, ಕಡೂರು 7, ಶೃಂಗೇರಿ 4, ಮೂಡಿಗೆರೆಯಲ್ಲಿ 1 ಪ್ರಕರಣ ವರದಿಯಾಗಿದೆ.

   ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದುವರೆಗೂ 384 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಒಟ್ಟು 20 ಮಂದಿ ಕೊರೊನಾ ವೈರಸ್ ಗೆ ಮೃತರಾಗಿದ್ದಾರೆ.

   ರಾಮನಗರ ಜಿಲ್ಲೆಯಲ್ಲಿ ಇಂದು 36 ಪಾಸಿಟಿವ್ ಪ್ರಕರಣ ಪತ್ತೆ

   ರಾಮನಗರ ಜಿಲ್ಲೆಯಲ್ಲಿ ಇಂದು 36 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಚನ್ನಪಟ್ಟಣ ತಾಲ್ಲೂಕಿನಲ್ಲಿ-10, ರಾಮನಗರ ತಾಲೂಕಿನಲ್ಲಿ-12, ಮಾಗಡಿ ತಾಲೂಕಿನಲ್ಲಿ-1, ಕನಕಪುರ ತಾಲೂಕಿನಲ್ಲಿ-13 ಕೊರೊನಾ ಪಾಸಿಟಿವ್ ಕೇಸ್ ವರದಿಯಾಗಿವೆ.

   ಎಲ್ಲ ಕೊರೊನಾ ಸೋಂಕಿತರನ್ನು ರಾಮನಗರ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇಂದಿನ 36 ಪ್ರಕರಣಗಳನ್ನು ಸೇರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 866 ಕ್ಕೆ ಏರಿಕೆಯಾಗಿದೆ.

   English summary
   Coronavirus Infection continues to spread in the Ballari district, today also, 432 new coronavirus infection cases of have been discovered.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X