• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಳ್ಳಾರಿ: ಕೇವಲ 7 ದಿನಗಳಲ್ಲಿ 36 ಸಾವು, 3935 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಆಗಸ್ಟ್ 13: ಸದ್ಯಕ್ಕೆ ಕೊರೊನಾ ವೈರಸ್ ಅಟ್ಟಹಾಸ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಅದರಲ್ಲಿಯೂ ಗಣಿನಾಡು ಬಳ್ಳಾರಿಯಲ್ಲಿ ಮಾತ್ರ ಕೊರೊನಾ ಮಹಾಮಾರಿ ತನ್ನ ರುದ್ರನರ್ತನ ಮುಂದುವರೆಸಿದೆ.

ಕೇವಲ ಒಂದೇ ವಾರದಲ್ಲಿ 3935 ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಬಳ್ಳಾರಿ ಜಿಲ್ಲೆಯ ಜನತೆಯನ್ನು ನಿದ್ದೆಗೆಡಿಸಿದೆ. ಕೊರೊನಾ ಸಂಖ್ಯೆಯನ್ನು ಕಡಿಮೆ ಮಾಡಲು ಜಿಲ್ಲಾಡಳಿತ ಹೆಚ್ಚು ಹೆಚ್ಚು ಪರೀಕ್ಷೆ ಮಾಡಲು ಮುಂದಾದರೆ ಸಾವಿನ ಸಂಖ್ಯೆ ಮಾತ್ರ ಕಡಿಮೆ ಆಗುತ್ತಿಲ್ಲ.

ಬಳ್ಳಾರಿಯಲ್ಲಿಂದು ಸೋಂಕಿಗೆ 9 ಸಾವು; ಕೃಷಿ ಇಲಾಖೆಯ 3 ನೌಕರರು ಬಲಿಬಳ್ಳಾರಿಯಲ್ಲಿಂದು ಸೋಂಕಿಗೆ 9 ಸಾವು; ಕೃಷಿ ಇಲಾಖೆಯ 3 ನೌಕರರು ಬಲಿ

ಗಣಿನಾಡು ಬಳ್ಳಾರಿಯಲ್ಲಿ ಕೊರೊನಾ ತನ್ನ ನಾಗಾಲೋಟ ಮುಂದುವರೆಸಿದ್ದು, ಬಳ್ಳಾರಿ ನಗರ ಕೊರೊನಾ ಹಾಟ್ ಸ್ಪಾಟ್ ಆಗಿ ನಿರ್ಮಾಣವಾಗಿದೆ. ಕೇವಲ ಒಂದೇ ವಾರದ ಅವಧಿಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಸುಮಾರು 3935 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಆದರೆ ಇದೇ ವಿಷಯವಾಗಿ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಅವರು ಕೊರೊನಾ ಕೇಸ್ ಗಳು ಹೆಚ್ಚಳಕ್ಕೆ ಕಾರಣ, ಜಿಲ್ಲೆಯಲ್ಲೆ ಹೆಚ್ಚು ಹೆಚ್ಚು ಪರೀಕ್ಷೆ ಮಾಡಿ ರೋಗ ಉಲ್ಬಣಗೊಳ್ಳುವ ಮೊದಲೇ ಪತ್ತೆ ಮಾಡಿ ಚಿಕಿತ್ಸೆ ನೀಡಿ ಸಾವಿನ ಸಂಖ್ಯೆ ಕಡಿಮೆ ಮಾಡುವುದಾಗಿ ಹೇಳಿದರು.

ಸೋಂಕಿತರ ಪರೀಕ್ಷೆ ಮಾಡುವಲ್ಲಿ ಬಳ್ಳಾರಿ ಜಿಲ್ಲೆ ಎರಡನೇ ಸ್ಥಾನ

ಸೋಂಕಿತರ ಪರೀಕ್ಷೆ ಮಾಡುವಲ್ಲಿ ಬಳ್ಳಾರಿ ಜಿಲ್ಲೆ ಎರಡನೇ ಸ್ಥಾನ

ಕಳೆದ ಏಳು ದಿನಗಳಲ್ಲಿ 36 ಜನರು ಕೊರೊನಾ ಮಾಹಾಮಾರಿ ಸೋಂಕಿಗೆ ಬಲಿಯಾಗಿದ್ದಾರೆ. ಬೆಂಗಳೂರು ಹೊರತುಪಡಿಸಿ ಉಳಿದ‌ ಜಿಲ್ಲೆಗೆ ಹೋಲಿಕೆ ಮಾಡಿಕೊಂಡರೆ ಬಳ್ಳಾರಿ ಅಗ್ರಸ್ಥಾನದಲ್ಲಿ ಇದೆ. ಜಿಲ್ಲೆಯಲ್ಲಿ ಈವರೆಗೂ ಒಟ್ಟು 12,527 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಇನ್ನು ಜಿಲ್ಲೆಯಲ್ಲಿ ಸೋಂಕಿತರ ಪರೀಕ್ಷೆ ಮಾಡುವಲ್ಲಿ ಸಹ ಜಿಲ್ಲೆ ಎರಡನೇ ಸ್ಥಾನದಲ್ಲಿ ಇದೆ.

ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಲ್ಲಿ ಮೂರು ಜನರ ಕೃಷಿ ಅಧಿಕಾರಿಗಳು ಸಹ ಸಾವಿಗೀಡಾಗಿದ್ದಾರೆ. ಪೊಲೀಸ್ ಸಿಬ್ಬಂದಿ ಸಹ ಕೊರೊನಾ ಮಹಾಮಾರಿಗೆ ಪ್ರಾಣ ಬಿಟ್ಟಿದ್ದಾರೆ. ಕಳೆದ ಒಂದು ವಾರದ ಲೆಕ್ಕಾಚಾರ ನೋಡಿದರೆ, ಕೇವಲ ಎರಡು ದಿನದಲ್ಲಿ 18 ಜನರ ಸಾವಾಗಿದೆ. ಹೀಗಾಗಿ ಜಿಲ್ಲಾಡಳಿತಕ್ಕೆ ಸೋಂಕು ಮತ್ತೊಂದು ಸವಾಲು ಹಾಕಿದೆ.

ಜನ ಮಾತ್ರ ಸಾಮಾಜಿಕ ಅಂತರ ಮರೆತಿದ್ದಾರೆ

ಜನ ಮಾತ್ರ ಸಾಮಾಜಿಕ ಅಂತರ ಮರೆತಿದ್ದಾರೆ

ಕೇವಲ ಜಿಲ್ಲೆಯಲ್ಲಿ ಮಾತ್ರ ಸೋಂಕು ಹೆಚ್ಚಳ ಆಗುತ್ತಿಲ್ಲ, ಬದಲಿಗೆ ಬಳ್ಳಾರಿ ನಗರದಲ್ಲಿಯೂ ಸಹ ಸೋಂಕು ತೀವ್ರವಾಗಿ ಹರಡುತ್ತಿದೆ. ಬಳ್ಳಾರಿ ನಗರದಲ್ಲಿ ಮಾತ್ರವೇ ಸೋಂಕಿತರ ಸಂಖ್ಯೆ 5429 ಜನರು ಸೋಂಕಿತರಾಗಿದ್ದಾರೆ. ಹೀಗಿದ್ದರೂ ಜನ ಮಾತ್ರ ಸಾಮಾಜಿಕ ಅಂತರ ಮರೆತು ವರ್ತನೆ ಮಾಡುತ್ತಿದ್ದಾರೆ.

ಕೊರೊನಾ ವೈರಸ್: ಬಳ್ಳಾರಿ 874, ರಾಮನಗರ 104, ಚಿತ್ರದುರ್ಗದಲ್ಲಿ 51 ಕೇಸ್ ಪತ್ತೆಕೊರೊನಾ ವೈರಸ್: ಬಳ್ಳಾರಿ 874, ರಾಮನಗರ 104, ಚಿತ್ರದುರ್ಗದಲ್ಲಿ 51 ಕೇಸ್ ಪತ್ತೆ

ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಲಿದೆ

ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಲಿದೆ

ಇನ್ನು ಬಳ್ಳಾರಿ ಹಾಗೂ ಹೊಸಪೇಟೆ ಈ ಎರಡು ಅವಳಿ ನಗರದಲ್ಲಿ ಸುಮಾರು 50ಕ್ಕೂ ಹೆಚ್ಚು ಜನ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ದೊಡ್ಡ ಆಘಾತಕಾರಿ ವಿಷಯ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಆದರೆ ಜನರಲ್ಲಿ ಮಾತ್ರ ಕೊರೊನಾ ಬಗೆಗಿನ ಗಂಭೀರತೆ ಮಾತ್ರ ಅರಿವಾಗಿಲ್ಲ. ಹೀಗೆ ಮುಂದುವರೆದಿದ್ದೆ ಆದರೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಲಿದೆ.

ಉಡುಪಿ ಜಿಲ್ಲೆಯಲ್ಲಿ 7 ಸಾವಿರ ದಾಟಿದ ಸೋಂಕಿತರ ಸಂಖ್ಯೆ!

ಉಡುಪಿ ಜಿಲ್ಲೆಯಲ್ಲಿ 7 ಸಾವಿರ ದಾಟಿದ ಸೋಂಕಿತರ ಸಂಖ್ಯೆ!

ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 7174 ಕ್ಕೆ ಏರಿಕೆಯಾಗಿದೆ.

ಇಂದು ಜಿಲ್ಲೆಯಲ್ಲಿ‌ ಕೋವಿಡ್ ಸೋಂಕಿನಿಂದ ಓರ್ವ ಸಾವನ್ನಪ್ಪಿದ್ದು, ಈವರೆಗೆ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 70ಕ್ಕೇರಿದೆ. ಇಂದು ಜಿಲ್ಲೆಯಲ್ಲಿ 290 ಮಂದಿ‌ ಅಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ‌4138 ಮಂದಿ ಗುಣಮುಖರಾಗಿದ್ದು, ಸದ್ಯ ಜಿಲ್ಲೆಯಲ್ಲಿ 2966 ಸಕ್ರಿಯ ಪ್ರಕರಣಗಳಿವೆ.

English summary
In just one week 3935 Coronavirus positive cases were discovered at Ballari district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X