• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ವೈರಸ್; ಇಂದು ಒಂದೇ ದಿನ ದ್ವಿಶತಕ ಕಂಡ ಗಣಿನಾಡು

By ಬಳ್ಳಾರಿ ಪ್ರತಿನಿಧಿ
|

ಬಳ್ಳಾರಿ, ಜುಲೈ 20: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಇಂದು ಕೊರೊನಾ ಸ್ಫೋಟವಾಗಿದ್ದು, ಜಿಲ್ಲೆಯ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕಿದೆ.

ಇಂದು ಒಂದೇ ದಿನ ಸೋಂಕು ದ್ವಿಶತಕ ಬಾರಿಸಿದ್ದು, 216 ಕೊರೊನಾ ಸೋಂಕಿನ ಪ್ರಕರಣಗಳು ದೃಢವಾಗಿವೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2668ಕ್ಕೆ ಏರಿಕೆಯಾಗಿದೆ.

ಬಳ್ಳಾರಿ ಲಾಕ್ ಡೌನ್ ಮಾಡುವಂತೆ ಬರುತ್ತಿದೆ ಭಾರೀ ಒತ್ತಡ

ಜಿಲ್ಲೆಯಲ್ಲಿ ಸಾವಿನ ಸರಣಿಯೂ ಮುಂದುವರೆದಿದ್ದು, ಇಂದು ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 62ಕ್ಕೆ ಏರಿದೆ. ಹೊಸಪೇಟೆ ಮೂಲದ 43 ವರ್ಷದ ಮಹಿಳೆ ಹಾಗೂ ಬಳ್ಳಾರಿಯ 70 ವರ್ಷದ ವೃದ್ಧ ಸೋಂಕಿಗೆ ಬಲಿಯಾಗಿದ್ದಾರೆ. ಇಂದು 49 ಸೋಂಕಿತರು ಬಿಡುಗಡೆಯಾಗಿದ್ದು, ಸದ್ಯ ಜಿಲ್ಲೆಯಲ್ಲಿ 1230 ಸಕ್ರಿಯ ಪ್ರಕರಣಗಳು ಇವೆ. 1376 ಜನರು ಸೋಂಕಿನಿಂದ ಗುಣಮುಖ ಹೊಂದಿದ್ದಾರೆ‌ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಅವರು ಮಾಹಿತಿ ನೀಡಿದ್ದಾರೆ.

English summary
216 coronavirus cases and two deaths reported today at ballari district, two people died
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X