• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶವ ಹಸ್ತಾಂತರ: ಬಳ್ಳಾರಿ ಜಿಲ್ಲಾ ಕೋವಿಡ್ ವೈದ್ಯರಿಂದ ಮತ್ತೊಂದು ಎಡವಟ್ಟು

|

ಬಳ್ಳಾರಿ, ಜುಲೈ 21: ಸ್ವ್ಯಾಬ್ ರಿಪೋರ್ಟ್ ಬರುವ ಮುನ್ನವೇ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಿರುವ ಬಳ್ಳಾರಿ ಜಿಲ್ಲಾ ಕೋವಿಡ್ ವೈದ್ಯರಿಂದ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ವ್ಯಕ್ತಿ ಸತ್ತ ಮೂರು ದಿನಗಳ ನಂತರ ಸ್ವ್ಯಾಬ್ ವರದಿಯಲ್ಲಿ ಕೊರೊನಾ ಸೋಂಕು ಪಾಸಿಟಿವ್ ಆಗಿದೆ. ಈಗ ಮೃತನ ಅಂತ್ಯಸಂಸ್ಕಾರದಲ್ಲಿ ಭಾಗಿಯಾದವರಿಗೆ ಕೊರೊನಾ ವೈರಸ್ ಆತಂಕ ಶುರುವಾಗಿದೆ.

ಕೊರೊನಾ ವೈರಸ್; ಇಂದು ಒಂದೇ ದಿನ ದ್ವಿಶತಕ ಕಂಡ ಗಣಿನಾಡು

ಮೃತನ ಅಂತ್ಯಸಂಸ್ಕಾರದಲ್ಲಿ ಭಾಗಿಯಾದವರನ್ನು ಜಿಲ್ಲಾ ಕೋವಿಡ್ ಟಾಸ್ಕ್ ಫೋರ್ಸ್ ಹುಡುಕಾಟ ನಡೆಸಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಜಿಂದಾಲ್ ಕಾರ್ಖಾನೆ ನೌಕರನನ್ನು ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ವಿಮ್ಸ್ ಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಜಿಂದಾಲ್ ಶಂಕರಗುಡ್ಡ ಕಾಲೋನಿ ನಿವಾಸಿ ಹಾಗೂ ಜಿಂದಾಲ್ ನೌಕರ (50) ಸಾವನ್ನಪ್ಪಿದ್ದಾನೆ.

ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಗೆ ಕೊರೊನಾ ವೈರಸ್ ಶಾಕ್

ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಯ 14 ಸಿಬ್ಬಂದಿಗೆ ಕೊರೊನಾ ವೈರಸ್ ಪತ್ತೆಯಾಗಿದೆ. ಸೋಮವಾರ 11, ಭಾನುವಾರ 3 ಸೇರಿ ಒಟ್ಟು 14 ಕಚೇರಿ ಸಿಬ್ಬಂದಿಗೆ ಕೊರೊನಾ ವೈರಸ್ ದೃಢಪಟ್ಟಿದೆ.

ಬಳ್ಳಾರಿ ಲಾಕ್ ಡೌನ್ ಮಾಡುವಂತೆ ಬರುತ್ತಿದೆ ಭಾರೀ ಒತ್ತಡ

ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಮಾಹಿತಿ ನೀಡಿ, ನಾನೂ ಕೂಡಾ ಭಾನುವಾರ ಕೊರೊನಾ ಟೆಸ್ಟ್ ಗೆ ಒಳಗಾದಾಗ ನೆಗೆಟಿವ್ ರಿಪೋರ್ಟ್ ಬಂದಿದೆ ಎಂದಿದ್ದಾರೆ.

ಸಿಬ್ಬಂದಿಗೆ ಕೊರೊನಾ ಸೋಂಕು ದೃಢವಾಗಿದ್ದರಿಂದ ಕಚೇರಿಗೆ ಸ್ಯಾನಿಟೈಸ್ ಮಾಡಿಸಿ ತೆರೆಯಲು ಜಿಲ್ಲಾಧಿಕಾರಿ ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಎಲ್ಲರೂ ಹಗಲಿರುಳು ಕೆಲಸ ಮಾಡಬೇಕಿದೆ. ಈ ಸಮಯದಲ್ಲಿ ಜಿಲ್ಲೆಯ ಜನಕ್ಕೆ ನಮ್ಮ ಸೇವೆ ಅತೀ ಅವಶ್ಯವಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

English summary
Coronavirus detected in 14 staff of Ballary DC Office, Coronavirus has been confirmed for a total of 14 DC office workers, including Monday 11 and Sunday 3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X