ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿಯಲ್ಲಿ ಒಂದೇ ತಿಂಗಳಿಗೆ 5 ಲಕ್ಷ ರುಪಾಯಿ ಕರೆಂಟ್ ಬಿಲ್

|
Google Oneindia Kannada News

ಬಳ್ಳಾರಿ, ಜನವರಿ.24: ತಿಂಗಳಿಗೆ ಅಬ್ಬಬ್ಬಾ ಎಂದರೆ 500 ರಿಂದ 1 ಸಾವಿರ ರುಪಾಯಿ ಕರೆಂಟ್ ಬಿಲ್ ಬರುತ್ತದೆ. ಆದರೆ, ಬಳ್ಳಾರಿಯಲ್ಲಿ ಒಂದೇ ಒಂದು ತಿಂಗಳಿಗೆ ಮನೆಗೆ ಲಕ್ಷ ಲಕ್ಷ ರುಪಾಯಿ ಕರೆಂಟ್ ಬಿಲ್ ನೀಡುವ ಮೂಲಕ ಜನರಿಗೆ ಜೆಸ್ಕಾಂ ಶಾಕ್ ನೀಡಿದೆ.

ಬಳ್ಳಾರಿ ಜಿಲ್ಲೆ ಶಿರಗುಪ್ಪ ಪಟ್ಟಣದ ಸತ್ಯನಾರಾಯಣ ಎಂಬುವವರಿಗೆ ಗುಲ್ಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ ಬರೋಬ್ಬರಿ 5 ಲಕ್ಷ 78 ಸಾವಿರ ರುಪಾಯಿ ಕರೆಂಟ್ ಬಿಲ್ ನೀಡಿದೆ. ಮೀಟರ್ ರೀಡಿಂಗ್ ನೋಡಿ ಬಿಲ್ ತೆಗೆದ ಸಿಬ್ಬಂದಿಯೇ ಇದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.

2022ರಿಂದ ಎಲೆಕ್ಟ್ರಿಕ್ ಬಸ್ ಖರೀದಿ ಮಾಡಲಿದೆ ಬಿಎಂಟಿಸಿ2022ರಿಂದ ಎಲೆಕ್ಟ್ರಿಕ್ ಬಸ್ ಖರೀದಿ ಮಾಡಲಿದೆ ಬಿಎಂಟಿಸಿ

ಸತ್ಯನಾರಾಯಣ ಮನೆಯಲ್ಲಿ ಮೂರು ಫ್ಯಾನ್, ಒಂದು ಟಿವಿ, ನಾಲ್ಕು ಲೈಟ್ ಬಳಸುತ್ತಿದ್ದು ಒಂದೇ ತಿಂಗಳಿಗೆ ಲಕ್ಷ ಲಕ್ಷ ರುಪಾಯಿ ಬಿಲ್ ನೋಡಿ ಕಂಗಾಲಾಗಿದ್ದಾರೆ. ಯಾಕ್ ಸ್ವಾಮಿ ಹೀಗೆ ಆಗಿದೆ ಎಂದು ಜೆಸ್ಕಾಂ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಚೆಕ್ ಮಾಡಿ ಹೇಳ್ತೀವಿ ಎಂದು ಸಾಕುತ್ತಾರೆ ಎಂಬ ಆರೋಪ ಕೇಳಿ ಬಂದಿದೆ.

1 Month Electricity Bill Is 5 Lacks Rupees For Single Home In Ballary

ಜೆಸ್ಕಾಂ ಅಧಿಕಾರಿಗಳ ಯಡವಟ್ಟು ಮೊದಲೇನಲ್ಲ:

ಮನೆಗಳಿಗೆ ಲಕ್ಷ ಲಕ್ಷ ರುಪಾಯಿ ಕರೆಂಟ್ ಬಿಲ್ ನೀಡುವ ಗುಲ್ಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ ಅಧಿಕಾರಿಗಳ ಯಡವಟ್ಟು ಇದೇ ಮೊದಲೇನಲ್ಲ. ಈ ಹಿಂದೆ ಜೆಸ್ಕಾಂ ವ್ಯಾಪ್ತಿಯಲ್ಲಿ ಇಂಥ ಹಲವಾರು ಪ್ರಕರಣಗಳು ನಡೆದಿದ್ದರು. ಜೆಸ್ಕಾಂ ನೀಡುವ ಕರೆಂಟ್ ಬಿಲ್ ಕಂಡು ಜನರು ಕಕ್ಕಾಬಿಕ್ಕಿ ಆಗಿದ್ದರು.

ಬಳ್ಳಾರಿ ತಾಲೂಕಿನ ರೂಪನಗುಡಿ ಗ್ರಾಮದಲ್ಲಿ ಮನೆಗಳಿಗೆ ಈ ಹಿಂದೆ ಲಕ್ಷ ಲಕ್ಷ ರುಪಾಯಿ ಬಿಲ್ ನೀಡಲಾಗಿತ್ತು. ಹೊಸ ಮೀಟರ್ ಅಳವಡಿಕೆ ಮಾಡಿದ್ದೇ ಇಂಥ ಅಚಾತುರ್ಯಕ್ಕೆ ಕಾರಣವಾಗಿದೆ. ಹೀಗಾಗಿ ಯಾರಿಗೆ ಅತಿಹೆಚ್ಚು ಕರೆಂಟ್ ಬಿಲ್ ಬಂದಿದೆಯೋ ಅಂಥವರು ಕಚೇರಿಗೆ ಬಂದು ಚೆಕ್ ಮಾಡಿಸಿಕೊಳ್ಳಿ ಎಂದು ಶಿರಗುಪ್ಪ ವ್ಯಾಪ್ತಿಯ ಎಕ್ಸಿಕ್ಯೂಟಿವ್ ಅಧಿಕಾರಿ ರಾಘವೇಂದ್ರ ತಿಳಿಸಿದ್ದಾರೆ.

English summary
Big Mistake From JESCOM Officers. 1 Month Electricity Bill Is 5 Lacks Rupees For Single Home In Ballary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X