ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್ ಅಭ್ಯರ್ಥಿ ಉಮಾಶ್ರೀ ವಿರುದ್ಧ ವಾಮಾಚಾರ

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ, ಮೇ 09 : ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಮಾಟ, ಮಂತ್ರ, ವಾಮಾಚಾರ ಹಾಗೂ ಅಕ್ರಮಗಳಿಗೆ ಮುಖಂಡರು ಮೊರೆ ಹೋಗುತ್ತಿದ್ದಾರೆ.
ವಾಮಚಾರ ಮೂಲಕ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ತಂತ್ರವನ್ನು ಕಾರ್ಯಕರ್ತರು ಅನುಸರಿಸುತ್ತಿದ್ದಾರೆ.

ಅಂದಹಾಗೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಮತ ಕೇಂದ್ರದ ಮುಂದೆ ವಾಮಚಾರ ಮಾಡುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಕಾಂಗ್ರೆಸ್ ಕಾರ್ಯಕರ್ತರು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರ ಕೈಗೆ ಒಪ್ಪಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಬಂಧಿತರು ಬಸಪ್ಪ ಮರಿಯಣ್ಣನವರ ಹಾಗೂ ಲಕ್ಕಪ್ಪ ಮಂಟೂರ. ತೇರದಾಳ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಹಿಪ್ಪರಗಿ ಗ್ರಾಮದ ವಾರ್ಡ ನಂ 1-5 ಭೂತದ ಸರ್ಕಾರಿ ಶಾಲೆಯ ಮತಗಟ್ಟಿ ಕೇಂದ್ರದ ಮುಂದೆ ವಾಮಚಾರ ಮಾಡುತ್ತಿದ್ದ ಸಮಯದಲ್ಲಿ ಭೂಪರು ಸಿಕ್ಕಿಬಿದ್ದಿದ್ದಾರೆ.

Witchcraft against Congress candidate Umashree in Hipparagi village

ಕಾಂಗ್ರೆಸ್ ಅಭ್ಯರ್ಥಿ,ನಟಿ ಉಮಾಶ್ರೀ ವಿರುದ್ಧ ವಾಮಾಚಾರ ಮಾಡಲಾಗಿತ್ತು ಎನ್ನಲಾಗಿದೆ. ತಾಮ್ರದ ಲೋಹದ ತಗಡಿನ ಮೇಲೆ ಉಮಾಶ್ರೀ ಸೇರಿದಂತೆ ಇತರ ಮುಖಂಡರ ಹೆಸರು ಬರೆದು, ಲಿಂಬೆ ಹಣ್ಣು ಕುಂಕಮ ಸೇರಿದಂತೆ ಇತರ ವಸ್ತುಗಳಿಂದ ವಾಮಾಚಾರ ನಡೆಸಲಾಗಿದೆ‌.

ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ತೇರದಾಳ ಕ್ಷೇತ್ರ ಹಾಲಿ ಶಾಸಕಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ. ಕ್ಷೇತ್ರದ ಶಾಸಕಿ ಮೇಲೆ ಯಾವುದೇ ಆರೋಪಗಳಿಲ್ಲ. ಆದರೆ, ತೇರದಾಳ ತಾಲೂಕು ಹೋರಾಟ ಸಮಿತಿ ಪಟ್ಟಣವನ್ನು ತಾಲೂಕು ಮಾಡಬೇಕು ಎಂದು ಇಂದಿಗೂ ಹೋರಾಟ ಮಾಡುತ್ತಿದೆ.

Witchcraft against Congress candidate Umashree in Hipparagi village

2013 ರ ಚುನಾವಣೆಯಲ್ಲಿ ಬಿಜೆಪಿಯಿಂದ ಮಾಜಿ ಶಾಸಕ ಸಿದ್ದು ಸವದಿ ಕಣಕ್ಕಿಳಿದಿದ್ದರು. ಉಮಾಶ್ರೀ ಅವರ ವಿರುದ್ಧ ಸೋತಿದ್ದರು. ಕ್ಷೇತ್ರದಲ್ಲಿ ನೇಕಾರ ಸಮುದಾಯದ ಮತಗಳು ನಿರ್ಣಾಯಕ.

English summary
Witchcraft against Congress candidate Umashree in Hipparagi village at Jamakhandi Taluk. According to sources BJP activists were engaging in Witchcraft.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X