ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಗಲಕೋಟೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ: ಚುರುಕುಗೊಂಡ ಬಿತ್ತನೆ ಕಾರ್ಯ

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ, ಜೂನ್.12: ಜಿಲ್ಲೆಯಲ್ಲಿ ಈ ಭಾರಿ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚು ರೋಹಿಣಿ ಮಳೆ ಸುರಿದಿದ್ದು, ರೈತರ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಕಾಲಕ್ಕೆ ತಕ್ಕಂತೆ
ಮಳೆಯಾಗಿದ್ದರಿಂದ ಜಿಲ್ಲೆಯ ರೈತರು ಸಂತಸಗೊಂಡು ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬೇಕಾಗುವ ಅಗತ್ಯ ರಸಗೊಬ್ಬರ, ಬೀಜಗಳನ್ನು ಪೂರೈಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಜಿಲ್ಲೆಯಲ್ಲಿ 18 ಕಡೆ ರೈತ ಸಂಪರ್ಕ ಕೇಂದ್ರಗಳನ್ನು ತೆರೆಯಲಾಗಿದೆ. ರೈತರ ಸಂಖ್ಯೆಗೆ ಅನುಗುಣವಾಗಿ ಮುಧೋಳ, ಜಮಖಂಡಿ, ಮುಧೋಳ ಕಡೆ ಬೀಜ ಹಾಗೂ ಗೊಬ್ಬರ ವಿತರಿಸುವ ರೈತ ಸಂಪರ್ಕ ಕೇಂದ್ರ ಹೆಚ್ಚುವರಿಯಾಗಿ ಆರಂಭಿಸಲಾಗಿದೆ.

ಎರಡು ದಿನಗಳ ಬಳಿಕ ವಿರಾಮಕ್ಕೆ ಜಾರಲಿದೆ ಮುಂಗಾರುಎರಡು ದಿನಗಳ ಬಳಿಕ ವಿರಾಮಕ್ಕೆ ಜಾರಲಿದೆ ಮುಂಗಾರು

 ಈ ಬಾರಿ ಉತ್ತಮ ಮಳೆ

ಈ ಬಾರಿ ಉತ್ತಮ ಮಳೆ

ಜಿಲ್ಲೆಯಲ್ಲಿ ವಾಡಿಕೆಯಂತೆ 122.6 ಮಿಲಿ ಮೀಟರ್ ಮಳೆಯಾಗಬೇಕಾಗಿತ್ತು. ಈಗ 134.4 ಮಿಲಿ ಮೀಟರ್ ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೆ ಬಾದಾಮಿಯಲ್ಲಿ 13 ಮಿಮೀ, ಬಾಗಲಕೋಟೆ 23 ಮಿಮೀ, ಬೀಳಗಿ 9 ಮಿಮೀ, ಹುನಗುಂದ 17 ಮಿಮೀ ಹಾಗೂ ಮುಧೋಳದಲ್ಲಿ 13 ಮಿಮೀ ರಷ್ಟು ಮಳೆಯಾಗಿದೆ.

ಈ ಬಾರಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ಕಳೆದ ಮೂರು ವರ್ಷಗಳ ರೋಹಿಣಿ ಮತ್ತು ಮೃಗಶಿರ ಮಳೆಗಳಿಗೆ ಹೋಲಿಸಿದರೆ, ಈ ಬಾರಿ ಅತೀ ಹೆಚ್ಚು ಮಳೆಯಾಗಿರುವುದು ಕಂಡುಬಂದಿದೆ.

 ಶೇಕಡವಾರು ಮಳೆ

ಶೇಕಡವಾರು ಮಳೆ

ಬಾದಾಮಿಯಲ್ಲಿ ಶೇ.141.3 ಮಿಮೀ, ಬಾಗಲಕೋಟೆ ಶೇ.113.3 ಮಿಮೀ, ಬೀಳಗಿ ಶೇ.104.4 ಮಿಮೀ, ಹುನಗುಂದ ಶೇ.106.1 ಮಿಮೀ, ಜಮಖಂಡಿ ಶೇ.125.3 ಮಿಮೀ ಹಾಗೂ ಮುಧೋಳದಲ್ಲಿ ಶೇ.117.7 ಮಿಮೀ ರಷ್ಟು ಮಳೆಯಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕ ರಮೇಶಕುಮಾರ 'ಒನ್ ಇಂಡಿಯಾ'ಕ್ಕೆ ಮಾಹಿತಿ ನೀಡಿದ್ದಾರೆ.

 ಶೇ.35 ರಷ್ಟು ಬಿತ್ತನೆ

ಶೇ.35 ರಷ್ಟು ಬಿತ್ತನೆ

ಈ ವರ್ಷ ಮುಂಗಾರು ಹಂಗಾಮಿಗೆ 2.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇಟ್ಟುಕೊಳ್ಳಲಾಗಿದ್ದು, ಈಗಾಗಲೇ ಶೇ.35 ರಷ್ಟು ಬಿತ್ತನೆಯಾಗಿದೆ. ರೋಹಿಣಿ ಮಳೆ ಉತ್ತಮವಾಗಿದ್ದು, ಹೆಚ್ಚಿನ ಬಿತ್ತನೆ ಪ್ರಮಾಣ ನಿರೀಕ್ಷಿಸಲಾಗುತ್ತಿದೆ.

ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಿಗೆ ಅನುಗುಣವಾಗಿ ಜಿಲ್ಲೆಗೆ 15,166 ಕ್ವಿಂಟಾಲ್ ಬಿತ್ತನೆ ಬೀಜ ಬೇಕಾಗಿದ್ದು, 11,623 ಕ್ವಿಂಟಾಲ್ ಬೇಡಿಕೆ ಇದೆ. ಈಗಾಗಲೇ 4,197 ಕ್ವಿಂಟಾಲ್ ಬಿತ್ತನೆ ಬೀಜ ಸರಬರಾಜು ಮಾಡಲಾಗಿದೆ.

ಅದರಲ್ಲಿ 1186 ಕ್ವಿಂಟಾಲ್ ಬೀಜ ವಿತರಿಸಲಾಗಿದೆ. ಜಿಲ್ಲೆಯ 18 ರೈತ ಸಂಪರ್ಕ ಕೆಂದ್ರಗಳ ಮೂಲಕ ವಿತರಿಸಲಾಗುತ್ತಿದ್ದು, 8 ಹೆಚ್ಚಿನ ಕೇಂದ್ರಗಳನ್ನು ತೆರೆಯಲಾಗಿದೆ. ರಸಗೊಬ್ಬರವನ್ನು 1,19,400 ಮೆ.ಟನ್ ಬೇಡಿಕೆ ಇದ್ದು, 66,268 ಮೆ.ಟನ್ ಸರಬರಾಜು ಆಗಿದ್ದು, ಅದರ ಪೈಕಿ 33,318 ಮೆ.ಟನ್ ರಸಗೊಬ್ಬರ ವಿತರಿಸಲಾಗಿದೆ.

 ತೋಟಗಾರಿಕೆ ಬೆಳೆ ಬಿತ್ತನೆ

ತೋಟಗಾರಿಕೆ ಬೆಳೆ ಬಿತ್ತನೆ

ಜಿಲ್ಲೆಯಲ್ಲಿ 52,874.61 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತಿದೆ. ಅದರಲ್ಲಿ 8,820.42 ಹೆಕ್ಟೇರ್ ಕ್ಷೇತ್ರದಲ್ಲಿ ಹಣ್ಣು, 38,737.33 ಹೆಕ್ಟೇರ್ ಕ್ಷೇತ್ರದಲ್ಲಿ ತರಕಾರಿ, 4,002.76 ಹೆಕ್ಟೇರ್ ನಲ್ಲಿ ಸಾಂಬಾರ ಬೆಳೆಗಳು, 1,049.30 ಹೆಕ್ಟೇರ್ ನಲ್ಲಿ ತೋಟದ ಬೆಳೆಗಳು ಹಾಗೂ 264.80 ಹೆಕ್ಟೇರ್ ಪ್ರದೇಶದಲ್ಲಿ ಹೂವಿನ ಬೆಳೆ ಬೆಳೆಯಲಾಗುತ್ತಿದೆ.

ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಈರುಳ್ಳಿ 22,000 ಹೆಕ್ಟೇರ್, ಟೊಮೆಟೋ 950 ಹೆಕ್ಟೇರ್ ಹಾಗೂ ಮೆಣಸಿನಕಾಯಿ 3200 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈರುಳ್ಳಿ 330 ಕ್ವಿಂಟಾಲ್, ಟೊಮೆಟೋ 0.25 ಕ್ವಿಂಟಾಲ್ ಹಾಗೂ ಮೆಣಸಿನಕಾಯಿ 1,827 ಕ್ವಿಂಟಾಲ್ ಬೀಜಗಳಿಗೆ ಬೇಡಿಕೆ ಇದೆ.

 ಮಿಶ್ರ ಬೆಳೆ ಬೆಳೆಯಲು ಮನವಿ

ಮಿಶ್ರ ಬೆಳೆ ಬೆಳೆಯಲು ಮನವಿ

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಉತ್ತಮ ಮಳೆಯಾಗಿದ್ದು, ರೈತರು ಒಂದೇ ತರಹದ ಬೆಳೆ ಬೆಳೆಯದೇ ಮಿಶ್ರ ಬೆಳೆ ಬೆಳೆಯುವಂತೆ ಮನವಿ ಮಾಡಿಕೊಂಡರು. ಒಂದೇ ತರಹದ ಬೆಳೆ ಬೆಳೆಯುವುದರಿಂದ ಮಾರುಕಟ್ಟೆಯಲ್ಲಿ ಅದರ ಬೆಲೆ ಕುಸಿಯುತ್ತದೆ.

ಮಿಶ್ರ ಬೆಳೆ ಬೆಳೆಯುವುದರಿಂದ ಉತ್ತಮ ಬೆಲೆ ಬರುತ್ತಿದ್ದು, ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಬೆಳೆಗಳ ಜೊತೆಗೆ ಲಾಭದಾಯಕ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಕೃಷಿ ಜಂಟಿ ನಿರ್ದೇಶಕರು ಸಲಹೆ ನೀಡಿದ್ದಾರೆ.

English summary
This time in Bagalkot district, heavy rainfall More than normal. Farmers' sowing work has been Stretched. District administration is prepared to supply necessary fertilizer and seeds to farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X