ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

28 ವರ್ಷ ಸೇವೆ ಸಲ್ಲಿಸಿದ ಜಮಖಂಡಿ ಯೋಧನಿಗೆ ಗ್ರಾಮಸ್ಥರಿಂದ ಮೆರವಣಿಗೆ

By ಜಮಖಂಡಿ ಪ್ರತಿನಿಧಿ
|
Google Oneindia Kannada News

ಜಮಖಂಡಿ, ಮಾರ್ಚ್ 06 : ಇಡೀ ದೇಶದ ಜನತೆಯನ್ನು ಉಗ್ರರಿಂದ ಕಾಪಾಡುತ್ತಿರುವ ಮತ್ತು ಸಂಕಷ್ಟಗಳೆದುರಾದಾಗ ಸಹಾಯಕ್ಕೆ ಬರುವ ಯೋಧನನ್ನು ಎಷ್ಟು ಹೊಗಳಿದರೂ ಕಡಿಮೆಯೆ. ಆತ ದೇಶಸೇವೆಗಾಗಿ ಹೊರಟು ನಿಂತಾಗ ಮನೆಮಂದಿಯ ಮಾತ್ರವಲ್ಲ ಇಡೀ ಗ್ರಾಮದ ಜನರ ಕಣ್ಣುಗಳು ನೀರಾಗಿರುತ್ತವೆ.

ಆತ ಮರಳಿ ಮನೆಗೆ ರಜಾ ಹಾಕಿಕೊಂಡು ಮನೆಗೆ ಬಂದಾಗ ಪುನರ್ ಜನ್ಮ ಪಡೆದಷ್ಟು ಸಂತೋಷವಾಗಿರುತ್ತದೆ. ಮತ್ತೆ ಹೊರಟುನಿಂತಾಗ ಮತ್ತೆ ಎಂದು ಬರುವನೋ ಎಂಬ ದುಗುಡ ಮನೆಯವರಲ್ಲಿ ಮನೆಮಾಡಿರುತ್ತದೆ. ಇಂತಹ ಯೋಧ ಸತತ 28 ವರ್ಷಗಳ ಕಾಲ ದೇಶಸೇವೆ ಮಾಡಿ ಮನೆಗೆ ಮರಳಿದರೆ ಹೇಗಿರುತ್ತದೆ?

"ನಿಮ್ಮ ಪತಿ ಹುತಾತ್ಮರಾದರು ಎಂಬ ಸುದ್ದಿ ಕೇಳಿಯೂ ನನ್ನ ಕಣ್ಣು ಹನಿಗೂಡಲಿಲ್ಲ!"

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮೈಗೂರ ಗ್ರಾಮದ ಜನರು, 28 ವರ್ಷಗಳ ಕಾಲ ದೇಶದ ಸೇವೆ ಸಲ್ಲಿಸಿ ತಮ್ಮೂರಿಗೆ ವಾಪಸ್ ಬಂದ ಯೋಧನಿಗೆ ಆರತಿ ಮಾಡಿ ಸ್ವಾಗತಿಸಿದರು. ಇಡೀ ಊರಿನ ತುಂಬ ಭವ್ಯ ಮೆರವಣಿಗೆ ಮಾಡುವುದರ ಮೂಲಕ ನಿವೃತ್ತ ಯೋಧನಿಗೆ ವಿಶಿಷ್ಟವಾಗಿ ಗೌರವ ಸಲ್ಲಿಸಿದರು.

ಕಾರ್ಗಿಲ್ ಯುದ್ಧದಲ್ಲಿ ಗಿರಿಮಲ್ಲಪ್ಪ ಭಾಗಿ

ಕಾರ್ಗಿಲ್ ಯುದ್ಧದಲ್ಲಿ ಗಿರಿಮಲ್ಲಪ್ಪ ಭಾಗಿ

ಸಾಮಾನ್ಯ ರೈತ ಕುಟುಂಬಕ್ಕೆ ಸೇರಿದ ಗಿರಮಲ್ಲಪ್ಪ ತೇಲಿ ಅವರು ದೇಶಸೇವೆ ಮಾಡುವ ಉದ್ದೇಶದಿಂದ ಸೇನೆ ಸೇರಿ ಹಲವಾರು ಪ್ರಮುಖ ಯುದ್ಧಗಳಲ್ಲಿ, ಉಗ್ರರ ನಿಗ್ರಹ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಅವುಗಳಲ್ಲಿ ಪ್ರಮುಖವೆಂದರೆ, 1999ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಕಾರ್ಗಿಲ್ ಯುದ್ದ, 2008ರಲ್ಲಿ ನವೆಂಬರ್ 26ರಂದು ಮುಂಬಯಿ ತಾಜ್ ಹೋಟೆಲ್ ಮೇಲೆ ಪಾಕಿಸ್ತಾನದಿಂದ ಆಗಮಿಸಿದ್ದ ಉಗ್ರರು ದಾಳಿ ನಡೆಸಿದ ಸಂದರ್ಭದಲ್ಲಿ ಗಿರಿಮಲ್ಲಪ್ಪ ತೇಲಿ ಅವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಊರಿಗೆ ಊರೇ ತೇಲಿಗಾಗಿ ಕಾಯುತ್ತಿತ್ತು

ಊರಿಗೆ ಊರೇ ತೇಲಿಗಾಗಿ ಕಾಯುತ್ತಿತ್ತು

2010ರಲ್ಲಿ ಕಾಂಗೊ ಸೇನೆಯಲ್ಲಿ ಸೇರಿದಂತೆ ವಿವಿಧ ತಂಡದಲ್ಲಿ ಸೇವೆ ಸಲ್ಲಿಸಿ, ಭಾರತಕ್ಕಾಗಿ ಹೋರಾಡಿದ ಯೋಧ ಸೇನೆಯಲ್ಲಿ 28 ವರ್ಷ ಅಮೋಘ ಸೇವೆ ಸಲ್ಲಿಸಿದ್ದಾರೆ. ಮದ್ರಾಸ್‌ನಲ್ಲಿ ಸುಬೇದಾರ ಹುದ್ದೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿ ಗ್ರಾಮಕ್ಕೆ ಆಗಮಿಸಿದರು. ಅವರು ಊರಿಗೆ ಬರುತ್ತಿದ್ದಾರೆಂದು ತಿಳಿಯುತ್ತಿದ್ದಂತೆ ಇಡೀ ಊರಿಗೆ ಊರೇ ಕಾಯುತ್ತಿತ್ತು. ಯೋಧನಿಗೆ ಜನರ ಪ್ರೀತಿಗಿಂತ ಇನ್ನೇನು ಬೇಕು? ಈ ಪ್ರೀತಿ ನೋಡಿ ಅವರ ಕಣ್ಣಲ್ಲಿ ಇದ್ದದ್ದು ಧನ್ಯತಾಭಾವ ಮತ್ತು ಆನಂದಭಾಷ್ಪ.

ಹುತಾತ್ಮ ಪೈಲಟ್ ಶವದೆದುರು ಕಲ್ಲಿನಂತೆ ನಿಂತ ಪತ್ನಿ, ಚಿತ್ರ ವೈರಲ್ಹುತಾತ್ಮ ಪೈಲಟ್ ಶವದೆದುರು ಕಲ್ಲಿನಂತೆ ನಿಂತ ಪತ್ನಿ, ಚಿತ್ರ ವೈರಲ್

ಊರತುಂಬ ಸಂಭ್ರಮದ ಮೆರವಣಿಗೆ

ಊರತುಂಬ ಸಂಭ್ರಮದ ಮೆರವಣಿಗೆ

ಸಮವಸ್ತ್ರದಲ್ಲಿಯೇ ತನ್ನೂರು ಮೈಗೂರಿಗೆ ಆಗಮಿಸಿದ ಸೈನಿಕನಿಗೆ ಗ್ರಾಮಸ್ಥರು ಬಾಜಾ ಬಜಂತ್ರಿ, ನಗಾರಿ ಸಕಲ ವಾದ್ಯ ಮೆಳದೊಂದಿಗೆ ಊರತುಂಬ ಮೆರವಣಿಗೆ ನಡೆಸಿ, ಮೆರವಣಿಗೆಯುದ್ದಕ್ಕೂ ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಗಳನ್ನು ಕೂಗಿ ಅರ್ಥಪೂರ್ಣವಾಗಿ ಗೌರವ ಸಲ್ಲಿಸಿದರು. ಮೆರವಣಿಗೆಯಲ್ಲಿ ಪುಟ್ಟ ಮಕ್ಕಳಿಂದ ಹಿರಿಯವರೆಗೆ ಎಲ್ಲರೂ ಭಾಗವಹಿಸಿದ್ದರು.

ಓಣಿಓಣಿಯಲ್ಲೂ ಮಹಿಳೆಯರಿಂದ ಆರತಿ

ಓಣಿಓಣಿಯಲ್ಲೂ ಮಹಿಳೆಯರಿಂದ ಆರತಿ

ಗ್ರಾಮಕ್ಕೆ ಆಗಮಿಸಿದ ನಿವೃತ್ತ ಯೋಧನಿಗೆ ಗ್ರಾಮದ ಬಸ್ ನಿಲ್ದಾಣ ಬಳಿ ಮಹಿಳೆಯರು ಆರತಿ ಮಾಡಿ ಸ್ವಾಗತಿಸಿದರು. ಗ್ರಾಮದ ಬಸವೇಶ್ವರ ದೇವಸ್ಥಾನ, ಹನುಮಾನ ದೇವಸ್ಥಾನದವರೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಿದರು. ಗ್ರಾಮದ ಪ್ರಮುಖ ಓಣಿಗಳ ಪ್ರತಿಯೊಬ್ಬ ಮಹಿಳೆಯರೂ ಆರತಿ ಮಾಡಿ ಸ್ವಾಗತಿಸಿದ್ದು ವಿಶೇಷವಾಗಿತ್ತು. ಈ ಗೌರವವನ್ನು ಗಿರಿಮಲ್ಲಪ್ಪ ಕೂಡ ಅಷ್ಟೇ ಧನ್ಯತೆಯಿಂದ ಸ್ವೀಕರಿಸಿದರು.

ಹುತಾತ್ಮನಾದಾಗ ನನ್ನ ಹೀರೋ ಎನ್ನಿರಿ ಎಂದಿದ್ದ ಮಂಡ್ಯದ ವೀರಯೋಧ ಗುರುಹುತಾತ್ಮನಾದಾಗ ನನ್ನ ಹೀರೋ ಎನ್ನಿರಿ ಎಂದಿದ್ದ ಮಂಡ್ಯದ ವೀರಯೋಧ ಗುರು

ಯೋಧನಿಗಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಯೋಧನಿಗಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಈ ಸಂದರ್ಭದಲ್ಲಿ ಗ್ರಾಮದ ಹೊರಭಾಗದಲ್ಲಿರುವ ಹನುಮಾನ ದೇವಸ್ಥಾನ, ಜೈನ ಬಸದಿಯಲ್ಲಿ, ಬಸವಣ್ಣನ ಗುಡಿ, ಶಿವಾನಂದ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ನಂತರ ಶಿವಾನಂದ ಮಠದ ಆವರಣದಲ್ಲಿನ ವೇದಿಕೆಯಲ್ಲಿ ಗ್ರಾಮದ ನೌಕರರ ಸಂಘದ ಪದಾಧಿಕಾರಿಗಳು, ಗ್ರಾಮದ ಪ್ರಮುಖರು ನಿವೃತ್ತ ಯೋಧ ಗಿರಮಲ್ಲಪ್ಪ ತೇಲಿ ಅವರಿಗೆ ಮೈಸೂರು ಪೇಟ ತೊಡಿಸಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು.

English summary
A soldier who spent 28 years serving India, gets grand welcome by villagers in Jamakhandi. He was welcomed by women with arati and was taken on procession all over the places in Maigur village in Jamakhandi taluk in Bagalkot district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X