• search
  • Live TV
ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾಜಿ ಸಿಎಂ ಒಬ್ರು ವಯನಾಡಿಗೆ ಹೋಗ್ತಿರೋದು ಸತ್ಯ: ರಾಜಶೇಖರ್ ಮುಲಾಲಿ ಸ್ಪೋಟಕ ಹೇಳಿಕೆ

|
Google Oneindia Kannada News

ಬಾಗಲಕೋಟೆ, ಮಾರ್ಚ್ 7: ಮಾಜಿ ಮುಖ್ಯಮಂತ್ರಿಯೊಬ್ಬರು ವಯನಾಡಿಗೆ ಹೋಗಿ ಬರುತ್ತಿರೋದು ಸತ್ಯ, ನನಗೆ ಖಚಿತ ಮಾಹಿತಿಯಿದೆ ಎಂದು ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿ ಬಾಗಲಕೋಟೆಯಲ್ಲಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ರಾಜಶೇಖರ್ ಮುಲಾಲಿ, ನನ್ನ ಹೇಳಿಕೆಗೆ ಅವರೊಬ್ಬರೇ ರಿಯಾಕ್ಟ್ ಮಾಡಿದ್ದಾರೆ. ಏಳು ಜನ ಮಾಜಿ ಸಿಎಂ ಬದುಕಿದ್ದಾರೆ, ಅವರ್ಯಾರೂ ರಿಯಾಕ್ಟ್ ಮಾಡಿಲ್ಲ. ಕುಂಬಳಕಾಯಿ ಕಳ್ಳ ಅಂದ್ರೆ, ಇವರು ಯಾಕೆ ಹೆಗಲು ಮುಟ್ಟಿಕೊಂಡು ನೋಡಿಕೊಳ್ಳಬೇಕು? ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೆಸರು ಹೇಳದೆ ಪ್ರಶ್ನಿಸಿದರು.

ಏರೋಪ್ಲೇನ್ ಏರಿಸಿ ಅಂದರೆ ಏನರ್ಥ

ಏರೋಪ್ಲೇನ್ ಏರಿಸಿ ಅಂದರೆ ಏನರ್ಥ

ಓರ್ವ ಮಾಜಿ ಸಿಎಂ ಮಾತನಾಡುವಾಗ ಗೌರವದಿಂದ ಮಾತನಾಡಬೇಕು, ಒದ್ದು ಒಳಗೆ ಹಾಕಿ, ಏರೋಪ್ಲೇನ್ ಏರಿಸಿ ಅಂದರೆ ಏನರ್ಥ? ಹೋರಾಟಗಾರರ ಬಗ್ಗೆ ಮಾತನಾಡೋವಾಗ ಸ್ವಲ್ಪ ಬಾಯಿ ಬಿಗಿ ಹಿಡಿದಿಟ್ಟು ಮಾತನಾಡಬೇಕು. ಇದು ಅವರ ಸಂಸ್ಕಾರ ತೋರಿಸುತ್ತದೆ ಎಂದು ಪ್ರತಿಕ್ರಿಯಿಸಿದರು.

ದೂರು ವಾಪಸ್ ಹಿಂದಿನ ಕಾರಣ ಬಿಚ್ಚಿಟ್ಟ ದಿನೇಶ್ ಪರ ವಕೀಲದೂರು ವಾಪಸ್ ಹಿಂದಿನ ಕಾರಣ ಬಿಚ್ಚಿಟ್ಟ ದಿನೇಶ್ ಪರ ವಕೀಲ

ನಮ್ಮದೆಯಾದ ಸ್ವಚ್ಛ ಇತಿಹಾಸವಿದೆ. ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆ ಎಂದರೆ ತಿಳಿದುಕೊಂಡು ಮಾತನಾಡ್ಬೇಕು. ಎಚ್ಡಿಕೆ ಸಿಡಿ ಇದೆಯಾ? ಎನ್ನುವ ಮಾಧ್ಯಮದ ಪ್ರಶ್ನೆಗೆ ರಾಜಶೇಖರ್ ಮುಲಾಲಿ ಅವರು ಗೊತ್ತಿಲ್ಲವೆಂದರು.

ನನ್ನ ಬಗ್ಗೆ ಅವರಿಗೆ ಗೊತ್ತಿಲ್ಲ

ನನ್ನ ಬಗ್ಗೆ ಅವರಿಗೆ ಗೊತ್ತಿಲ್ಲ

ಸಿಡಿ ವಿಚಾರವಾಗಿ ನೋಟಿಸ್ ಬಂದಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ರಾಜಶೇಖರ್ ಮುಲಾಲಿ, ಶನಿವಾರ ರಾತ್ರಿ ಬೀದರ್ ನಿಂದ ಬರಬೇಕಾದರೆ ಪೊಲೀಸ್ ಅಧಿಕಾರಿಗಳು ಫೋನ್ ಮಾಡಿದ್ದರು, ನನ್ನ ವಾಟ್ಸಾಪ್‌ಗೆ ನೋಟಿಸ್ ಕಳಿಸಿದ್ದಾರೆ. ಇಂದು ನನ್ನ ಫೇಸ್ ಬುಕ್‌ಗೂ ನಾನೇ ಶೇರ್ ಮಾಡಿದ್ದೇನೆ. ಸಹೋದರಿ ಇಂದಿರಾ ಅನ್ನುವವರು ದೂರು ಕೊಟ್ಟಿದ್ದಾರಂತೆ. ಅವರಿಗೂ ಈ ಪ್ರಕರಣಕ್ಕೂ ಏನು ಸಂಬಂಧ ಇದೆಯೋ ನನಗೆ ಗೊತ್ತಿಲ್ಲ. ಅವರ ಬಗ್ಗೆ ನನಗೆ ಗೊತ್ತಿಲ್ಲ, ನನ್ನ ಬಗ್ಗೆ ಅವರಿಗೆ ಗೊತ್ತಿಲ್ಲ. ನಾಳೆ ವಿಚಾರಣೆಗೆ ಹಾಜರಾಗಲು ನಮ್ಮ ವಕೀಲರಿಗೆ ಹೇಳಿದ್ದೀನಿ. ಅವರ ಜೊತೆ ಚರ್ಚೆ ಮಾಡಿ ನಂತರ ಹಾಜರಾಗುವ ಬಗ್ಗೆ ಹೇಳುತ್ತೇನೆ ಎಂದು ಮುಲಾಲಿ ತಿಳಿಸಿದರು.

ನಕಲಿ ಸಂತ್ರಸ್ಥರಿಗೆ ನ್ಯಾಯ ಸಿಗಲ್ಲ

ನಕಲಿ ಸಂತ್ರಸ್ಥರಿಗೆ ನ್ಯಾಯ ಸಿಗಲ್ಲ

ಸಿಡಿ ಕೇಸ್ ನಲ್ಲಿ ಸಂತ್ರಸ್ತೆಗೆ ನ್ಯಾಯ ಸಿಗುತ್ತಾ ಎನ್ನುವ ವಿಚಾರವಾಗಿ, ಶೇಕಡಾ ನೂರರಷ್ಟು ನಿಜವಾದ ಸಂತ್ರಸ್ಥರಿದ್ದರೆ ನ್ಯಾಯ ಸಿಗುತ್ತದೆ. ನಕಲಿ ಸಂತ್ರಸ್ಥರಿದ್ದರೆ ಸಿಗುವುದಿಲ್ಲ. ಈ ಹಿಂದೆ ಮಾಜಿ ಸಚಿವರೊಬ್ಬರ ಸಿಡಿ ಬಿಡುಗಡೆ, ನ್ಯಾಯ ಸಿಕ್ಕ ವಿಚಾರ ನನಗೆ ಗೊತ್ತಿಲ್ಲ. ಈ ಹಿಂದೆ ಮಾಜಿ ಸಚಿವರ ಸಿಡಿ ಬಿಡುಗಡೆ ನಾನು ಮಾಡಿಲ್ಲ. ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಷ್ಟೇ ಮಾಡಿದ್ದೆ. ಅದು ನನಗೆ ಸಂಬಂಧಿಸಿದಲ್ಲ, ಅದು ಮುಗಿದು ಹೋದ ಪ್ರಕರಣವೆಂದು ಹೇಳಿದರು.

ರಮೇಶ್ ಜಾರಕಿಹೊಳಿ ವಿರುದ್ಧ ನೀಡಿದ್ದ ದೂರು ವಾಪಸ್: ದಿನೇಶ್ ಕಲ್ಲಹಳ್ಳಿ ಪತ್ರದಲ್ಲಿ ಏನಿದೆ?ರಮೇಶ್ ಜಾರಕಿಹೊಳಿ ವಿರುದ್ಧ ನೀಡಿದ್ದ ದೂರು ವಾಪಸ್: ದಿನೇಶ್ ಕಲ್ಲಹಳ್ಳಿ ಪತ್ರದಲ್ಲಿ ಏನಿದೆ?

ತನಿಖೆ ಮಾಡಿ ಕ್ಲೀನ್ ಚಿಟ್ ಕೊಟ್ಟಿದ್ದಾರೆ

ತನಿಖೆ ಮಾಡಿ ಕ್ಲೀನ್ ಚಿಟ್ ಕೊಟ್ಟಿದ್ದಾರೆ

ಸಿಐಡಿಯವರು ತನಿಖೆ ಮಾಡಿದ್ದಾರೆ, ಒಂದು ವರ್ಷ ತನಿಖೆ ಮಾಡಿ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ 5 ಕೋಟಿ ರೂ. ಡೀಲ್ ಆಗಿದೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆರೋಪ ವಿಚಾರವಾಗಿಯೂ ನನಗೆ ಗೊತ್ತಿಲ್ಲ, ಕುಮಾರಸ್ವಾಮಿ ಅವರನ್ನೇ ಕೇಳಬೇಕು. ರಾಜಶೇಖರ್ ಮುಲಾಲಿ ಬಗ್ಗೆ ಆ ರೀತಿ ಮಾತನಾಡೋದು ಅಕ್ಷಮ್ಯ ಅಪರಾಧ. ಬೇರೆ ಹೋರಾಟಗಾರರ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ಯಾವ ಆಸೆ, ಆಮಿಷಗಳಿಗೆ ಬಲಿಯಾಗಲ್ಲ. ಹೆದರಿಕೆ, ಬೆದರಿಕೆಗಳಿಗೆ ಜಗ್ಗುವುದಿಲ್ಲ. ಆಮ್ ನಾಟ್ ಫಾರ್ ಸೇಲ್ ಎಂದು ಬಾಗಲಕೋಟೆಯಲ್ಲಿ ಸಾಮಾಜಿಕ ಕಾರ್ಯರ್ತ ರಾಜಶೇಖರ್ ಮುಲಾಲಿ ಹೇಳಿದರು.

ರಮೇಶ್ ಜಾರಕಿಹೊಳಿ ವಿರುದ್ಧ ನೀಡಿದ್ದ ದೂರು ವಾಪಸ್ ಪಡೆದ ದಿನೇಶ್ ಕಲ್ಲಹಳ್ಳಿ?ರಮೇಶ್ ಜಾರಕಿಹೊಳಿ ವಿರುದ್ಧ ನೀಡಿದ್ದ ದೂರು ವಾಪಸ್ ಪಡೆದ ದಿನೇಶ್ ಕಲ್ಲಹಳ್ಳಿ?

English summary
Bagalkot: Social activist Rajasekhar Mulali has said One shoudl investigat why former chief minister often visits Wayanad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X