ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಹಳಷ್ಟು ಜನರಿಗೆ ಮಕ್ಕಳಿಂದ ಮಮ್ಮಿ-ಡ್ಯಾಡಿ ಎಂದು ಕರೆಸಿಕೊಳ್ಳುವ ಆಸೆ

|
Google Oneindia Kannada News

ಬೆಂಗಳೂರು, ಜೂನ್ 30 : 'ಇಂಗ್ಲೀಷ್ ಭಾಷೆಯೂ ಸೇರಿದಂತೆ ಯಾವ ಭಾಷೆಯನ್ನಾದರೂ ಕಲಿಯಿರಿ,ಆದರೆ ಮಾತೃಭಾಷೆಯನ್ನು, ಪರಿಸರದ ಭಾಷೆಯನ್ನು ಅನಾದರಣೆ ಮಾಡಬೇಡಿ' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಭಾನುವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬಾಗಲಕೋಟೆಯ ಕಲಾಭವನದಲ್ಲಿ ಆಯೋಜಿಸಿದ್ದ ಕನ್ನಡ ಮಾಧ್ಯಮ‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ, ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಪಾಲ್ಗೊಂಡಿದ್ದರು.

ನಾನೇನೂ ಕಮ್ಮಿಯಿಲ್ಲ ಅಂತಿದೆ ಸಿಂಗಟಗೆರೆಯ ಕನ್ನಡ ಶಾಲೆನಾನೇನೂ ಕಮ್ಮಿಯಿಲ್ಲ ಅಂತಿದೆ ಸಿಂಗಟಗೆರೆಯ ಕನ್ನಡ ಶಾಲೆ

ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಈ ಬಾರಿಯ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಕನ್ನಡ ಮಾಧ್ಯಮದಲ್ಲಿ ಬರೆದು ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಕನ್ನಡ ಮಾಧ್ಯಮದಲ್ಲಿಯೇ ಪರೀಕ್ಷೆಗಳನ್ನು ಬರೆದ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ನನ್ನ ಅಭಿನಂದನೆಗಳು ಎಂದು ಹೇಳಿದರು.

ನಾಡಗೀತೆ ಹಾಡುವ ಅವಧಿ 2 ನಿಮಿಷ 30 ಸೆಕೆಂಡ್‌ಗೆ ನಿಗದಿನಾಡಗೀತೆ ಹಾಡುವ ಅವಧಿ 2 ನಿಮಿಷ 30 ಸೆಕೆಂಡ್‌ಗೆ ನಿಗದಿ

'ಇಂಗ್ಲೀಷ್ ಭಾಷೆಯ ವ್ಯಾಮೋಹದ ಗಾಳಿ ಎಲ್ಲೆಡೆ ಬೀಸುತ್ತಿರುವಾಗ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿಯೇ ವ್ಯಾಸಂಗ ಮಾಡಿಸಿದ ವಿದ್ಯಾರ್ಥಿಗಳ ತಂದೆ-ತಾಯಿಗಳಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ' ಎಂದರು.

ರಾಜ್ಯದ ಮೊದಲ ಕನ್ನಡ ವಿಜ್ಞಾನ ಕಾಲೇಜಿನತ್ತ ಪೋಷಕರ ನಿರಾಸಕ್ತಿರಾಜ್ಯದ ಮೊದಲ ಕನ್ನಡ ವಿಜ್ಞಾನ ಕಾಲೇಜಿನತ್ತ ಪೋಷಕರ ನಿರಾಸಕ್ತಿ

ಮಮ್ಮಿ-ಡ್ಯಾಡಿ ಎಂದು ಕರೆಸಿಕೊಳ್ಳುವ ಆಸೆ

ಮಮ್ಮಿ-ಡ್ಯಾಡಿ ಎಂದು ಕರೆಸಿಕೊಳ್ಳುವ ಆಸೆ

ಕನ್ನಡ ಮಾಧ್ಯಮ‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, 'ನಮ್ಮ ಬಹಳಷ್ಟು ತಂದೆ-ತಾಯಿಗಳಿಗೆ ತಮ್ಮ ಮಕ್ಕಳಿಂದ ಅಪ್ಪ-ಅಮ್ಮ ಎನ್ನುವುದಕ್ಕಿಂತ ಮಮ್ಮಿ-ಡ್ಯಾಡಿ ಎಂದು ಕರೆಸಿಕೊಳ್ಳುವ ಆಸೆ. ನಾನು ನನ್ನ ಮಕ್ಕಳಿಗೆ ಅಪ್ಪ-ಅಮ್ಮ‌ ಎಂದು ಕರೆಯಬೇಕೆಂದು ಹೇಳಿ ಕೊಟ್ಟಿದ್ದೆ,
ಈ ಬದ್ಧತೆ ನಮ್ಮೆಲ್ಲರಲ್ಲಿಯೂ ಇರಬೇಕು' ಎಂದು ಹೇಳಿದರು.

ಕಡ್ಡಾಯ ಮಾಡುವಂತಿಲ್ಲ

ಕಡ್ಡಾಯ ಮಾಡುವಂತಿಲ್ಲ

'ಭಾಷಾ ಮಾಧ್ಯಮವನ್ನು ಕಡ್ಡಾಯ ಮಾಡುವಂತಿಲ್ಲ. ಅದು ಮಕ್ಕಳ ಹೆತ್ತವರ ಆಯ್ಕೆ' ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿರುವ ಪರಿಶೀಲನಾ ಅರ್ಜಿ ಮತ್ತು ಮೇಲ್ಮನವಿಗಳೆರಡನ್ನೂ ಸುಪ್ರೀಂಕೋರ್ಟ್ ತಿರಸ್ಕರಿಸಿರುವುದು ನಮಗೆ ಹಿನ್ನಡೆಯಾಗಿದೆ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ಪ್ರಧಾನಿಗಳಿಗೆ ಪತ್ರ ಬರೆದಿದ್ದೆ

ಪ್ರಧಾನಿಗಳಿಗೆ ಪತ್ರ ಬರೆದಿದ್ದೆ

'ನಾನು ಮುಖ್ಯಮಂತ್ರಿಯಾಗಿದ್ದಾಗ ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ಅನ್ಯಾಯಕ್ಕೀಡಾಗಿರುವ ಪ್ರಾದೇಶಿಕ ಭಾಷೆಗಳ ರಕ್ಷಣೆಯ ಬಗ್ಗೆ ಚರ್ಚಿಸಲು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದೆ. ಅವರಿಂದ ಈ ವರೆಗೆ ಪ್ರತಿಕ್ರಿಯೆ ಬಂದಿಲ್ಲ' ಎಂದು ಸಿದ್ದರಾಮಯ್ಯ ಹೇಳಿದರು.

ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕು

ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕು

'ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ನಮ್ಮ ವಿದ್ಯಾರ್ಥಿಗಳ ಮೇಲೆ ಹಿಂದಿ ಭಾಷೆಯನ್ನು ಹೇರುವ ಹುನ್ನಾರವನ್ನು ನಮ್ಮ ರಾಜ್ಯ ಸರ್ಕಾರ ಕೂಡಾ ವಿರೋಧಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕು. ನಾನು ಇದನ್ನು ಪ್ರಾರಂಭದಲ್ಲಿಯೇ ವಿರೋಧಿಸಿದ್ದೇನೆ. ದಕ್ಷಿಣದ ಉಳಿದ ರಾಜ್ಯಗಳು ಈ ಹೇರಿಕೆಗೆ ಪ್ರತಿರೋಧವನ್ನು ದಾಖಲಿಸಿವೆ' ಎಂದು ಸಿದ್ದರಾಮಯ್ಯ ಹೇಳಿದರು.

English summary
Karnataka Former Chief Minister Siddaramaiah speech on Kannada and English language. Learn English but don't neglect Kannada said Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X