ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲೋಕಸಭೆಗೆ ಸ್ಪರ್ಧೆ, ಸಿದ್ದರಾಮಯ್ಯ ಹೇಳಿದ್ದೇನು?

|
Google Oneindia Kannada News

ಬಾಗಲಕೋಟೆ, ಜನವರಿ 25: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಸಭೆಗೆ ಸ್ಪರ್ಧಿಸುತ್ತಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಸ್ವತಃ ಈ ಊಹಾಮೋಹಗಳಿಗೆ ಉತ್ತರ ನೀಡಿರುವ ಅವರು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದು ತಿಳಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಖುದ್ದು ಸಿದ್ದರಾಮಯ್ಯ ಈ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ. ಹೊಸಪೇಟೆ ಶಾಸಕ ಆನಂದ್ ಸಿಂಗ್ ಮತ್ತು ಕಂಪ್ಲಿ ಶಾಸಕ ಗಣೇಶ್ ನಡುವೆ ಜಗಳವಾಗಿರುವುದು ನಿಜ. ಶಾಸಕ ಗಣೇಶ್ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ. ಅವರನ್ನು ಯಾವುದೇ ಕಾರಣಕ್ಕೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಿದ್ದರಾಮಯ್ಯಗೆ ಲೋಕಸಭೆ ಟಿಕೆಟ್ ಕೊಡಿ: ಹೈಕಮಾಂಡ್‌ ಮೇಲೆ ಒತ್ತಡ ಸಿದ್ದರಾಮಯ್ಯಗೆ ಲೋಕಸಭೆ ಟಿಕೆಟ್ ಕೊಡಿ: ಹೈಕಮಾಂಡ್‌ ಮೇಲೆ ಒತ್ತಡ

ಆನಂದ್ ನೀಡುರುವ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಾರೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದರು. ಉಗ್ರರಿಗಿಂತ ಮಾಧ್ಯಮದವರು ಡೇಂಜರ್ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದು ಅವರ ಹೇಳಿಕೆ, ಅವರನ್ನೇ ಕೇಳಿ. ಅವರು ಯಾವ ಉದ್ದೇಶ ಇಟ್ಟುಕೊಂಡು ಹೇಳಿದ್ದಾರೋ? ಆ ಬಗ್ಗೆ ನನಗೆ ಗೊತ್ತಿಲ್ಲ. ಅವರು ಆ ರೀತಿ ಹೇಳಿದ್ದಾರೋ ಇಲ್ಲವೋ ಗೊತ್ತಿಲ್ಲ ಎಂದರು.

Siddaramaiah denies reports on contesting Loksabha poll

ಇದೇ ವೇಳೆ ಮಾಧ್ಯಮಗಳು ಟೆರರಿಸ್ಟ್ ಇದ್ದ ಹಾಗೆ ಎಂದು ಹೇಳಿದ್ದ ಪ್ರಿಯಾಂಕ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಿದ್ದರಾಮಯ್ಯ, ಈ ಕುರಿತು ಅವರನ್ನೇ ಕೇಳಿ ಎಂದು ಜಾರಿಕೊಂಡರು.

'ಬಿಜೆಪಿಯ ಹಿರಿಯ ನಾಯಕರುಗಳೇ ಮೋದಿ ವಿರುದ್ಧ ತಿರುಗಿ ಬಿದ್ದಿದ್ದಾರೆ''ಬಿಜೆಪಿಯ ಹಿರಿಯ ನಾಯಕರುಗಳೇ ಮೋದಿ ವಿರುದ್ಧ ತಿರುಗಿ ಬಿದ್ದಿದ್ದಾರೆ'

ಮಾಧ್ಯಮದವರಿಗೆ ಕಾಮನ್ ಸೆನ್ಸ್‌ ಇಲ್ಲ ಎಂಬ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆ ವಿಚಾರವಾಗಿ ಅದು ಮುಗಿದುಹೋದ ಅಧ್ಯಾಯ. ಮತ್ತೆ ಯಾಕ್ರಪ್ಪ ಕೇಳುತ್ತೀರಿ ಎಂದ ಅವರು, ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ವಿಚಾರವಾಗಿ ಇಲ್ಲ ನಾನು ಎಲ್ಲಿಯೂ ನಿಲ್ಲುವುದಿಲ್ಲ ಎಂದು ಹೇಳಿದರು.

English summary
Former chief minister Siddaramaiah clarified that he will not contesting in Parliamentary election and he will not intereste to be candidate of loksabha poll.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X