ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ಒಂದೇ ವೇದಿಕೆಯಲ್ಲಿ ಸಿದ್ದರಾಮಯ್ಯ, ಬೊಮ್ಮಾಯಿ!

|
Google Oneindia Kannada News

ಬಾಗಲಕೋಟೆ, ಏಪ್ರಿಲ್ 22; ರಾಜಕೀಯವಾಗಿ ಸದಾ ಟೀಕಾ ಪ್ರಹಾರ ನಡೆಸುವ ಹಾಲಿ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗಳು ಒಂದೇ ವೇದಿಕೆಯಲ್ಲಿ ಶುಕ್ರವಾರ ಕಾಣಿಸಿಕೊಂಡರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮ ಈ ಕ್ಷಣಕ್ಕೆ ಸಾಕ್ಷಿಯಾಯಿತು.

ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒಂದೇ ವೇದಿಕೆ ಹಂಚಿಕೊಂಡರು. ಬಾದಾಮಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಮಹತ್ವದ ಏತ ನೀರಾವರಿ ಯೋಜನೆಗೆ ಉಭಯ ನಾಯಕರು ಒಟ್ಟಾಗಿ ಚಾಲನೆ ನೀಡಿದರು.

ಬಿಜೆಪಿ ಜೊತೆ ಮೈತ್ರಿ ಇಲ್ಲ ಎಂದು ದೇವೇಗೌಡರ ಮೇಲೆ ಆಣೆ ಮಾಡುತ್ತೀರಾ ಕುಮಾರಸ್ವಾಮಿ?: ಸಿದ್ದರಾಮಯ್ಯಬಿಜೆಪಿ ಜೊತೆ ಮೈತ್ರಿ ಇಲ್ಲ ಎಂದು ದೇವೇಗೌಡರ ಮೇಲೆ ಆಣೆ ಮಾಡುತ್ತೀರಾ ಕುಮಾರಸ್ವಾಮಿ?: ಸಿದ್ದರಾಮಯ್ಯ

ಬಾದಾಮಿಯ ಉಗಲವಾಟ ಗ್ರಾಮದಲ್ಲಿ 29 ಹಳ್ಳಿಗಳ 16,000 ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸುವ 530 ಕೋಟಿ ರೂಪಾಯಿ ವೆಚ್ಚದ ಮಹತ್ವಾಕಾಂಕ್ಷೆಯ ಕೆರೂರು ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿಗಳ ಜೊತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದರು.

ನಾನು ಮೌನವಾಗಿಲ್ಲ; ನಮ್ಮ ಕ್ರಮಗಳೇ ಮಾತನಾಡುತ್ತಿವೆ: ಸಿಎಂ ಬಸವರಾಜ ಬೊಮ್ಮಾಯಿನಾನು ಮೌನವಾಗಿಲ್ಲ; ನಮ್ಮ ಕ್ರಮಗಳೇ ಮಾತನಾಡುತ್ತಿವೆ: ಸಿಎಂ ಬಸವರಾಜ ಬೊಮ್ಮಾಯಿ

Siddaramaiah Basavaraj Bommai Shared Same Stage

ಈ ಕಾರ್ಯಕ್ರಮದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ, ಶಾಸಕರಾದ ಹನುಮಂತ ನಿರಾಣಿ, ಪ್ರಕಾಶ್ ರಾಥೋಡ್, ಸಂಸದ ಪಿ. ಸಿ. ಗದ್ದಿಗೌಡರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸಿದ್ದರಾಮಯ್ಯಗೆ ಗಲಿಬಿಲಿ ಯಾಕೆ?; ಬಸವರಾಜ ಬೊಮ್ಮಾಯಿ ಸಿದ್ದರಾಮಯ್ಯಗೆ ಗಲಿಬಿಲಿ ಯಾಕೆ?; ಬಸವರಾಜ ಬೊಮ್ಮಾಯಿ

ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿ ಸದಾ ಸರ್ಕಾರವನ್ನು ಟೀಕಿಸುತ್ತಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸುತ್ತಿರುತ್ತಾರೆ. ಮೂರು ದಿನಗಳ ಹಿಂದೆ, "ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ನನ್ನ ಬಳಿ ಸಾಕ್ಷಿಯಿದೆ ಎಂದು ಖಾಲಿ ಬುಟ್ಟಿಯ ಮುಂದೆ ನಿಂತು ಪುಂಗಿ ಊದಬೇಡಿ, ದಾಖಲೆಗಳನ್ನು ಬಿಡುಗಡೆ ಮಾಡಿ‌ ಮಾತನಾಡಿ" ಎಂದು ಸವಾಲು ಹಾಕಿದ್ದರು.

Recommended Video

Rishabh Pant ಪಂದ್ಯ ಮುಗಿದಾಗ ಬಹಳ ಕೋಪದಲ್ಲಿ ಕಂಡುಬಂದರು | Oneindia Kannada

"ಬುಟ್ಟಿಯ ಒಳಗಿರುವುದು ನಾಗರ ಹಾವೋ, ಹಾವಿನಪುರದ ಹಾವೋ ನೋಡಿಯೇ ಬಿಡೋಣ. ಧರ್ಮ ರಕ್ಷಕರು ಎಂದು ತಮ್ಮನ್ನು ಕರೆದುಕೊಳ್ಳುವ ಬಿಜೆಪಿಯವರು ಮಠ, ಮಂದಿರಗಳ ಅನುದಾನವನ್ನೂ ಬಿಡದೆ 30 ಪರ್ಸೆಂಟ್ ಕಮಿಷನ್ ತಿಂದು ತೇಗುತ್ತಿರುವುದು ನಾಚಿಕೆಗೇಡು. 10 ಪರ್ಸೆಂಟ್ ಡಿಸ್ಕೌಂಟ್ ಯಾಕೆ? ಅದನ್ನು ತಿಂದು ಬಿಡಿ. ದೇವರಿಂದಲೂ ಕಮಿಷನ್ ಕೇಳುವ ನಿಮ್ಮದು ಯಾವ ರೀತಿಯ ಧರ್ಮ ರಕ್ಷಣೆ?" ಎಂದು ಹೇಳಿದ್ದರು.

English summary
Leader of opposition Siddaramaiah and chief minister of Karnataka Basavaraj Bommai shared the same stage in the function at Bagalkot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X