ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ರೋಗಿಯ ಅಂತ್ಯ ಸಂಸ್ಕಾರ ಮಾಡಿದರೆ 10 ಸಾವಿರ ಇನ್ಸೆಂಟಿವ್!

|
Google Oneindia Kannada News

ಬಾಗಲಕೋಟೆ, ಮೇ 05 : ಕೊರೊನಾ ಸೋಂಕಿನಿಂದ ಯಾರಾದರೂ ಮೃತಪಟ್ಟರೆ ಅವರ ಅಂತ್ಯ ಸಂಸ್ಕಾರ ನಡೆಸಲು ಮಾರ್ಗಸೂಚಿಗಳಿವೆ. ಸೋಂಕು ತಮಗೂ ಹರಡುವ ಭಯದಿಂದ ಅಂತ್ಯ ಸಂಸ್ಕಾರ ನಡೆಸಲು ಹಲವರು ಮುಂದೆ ಬರುವುದಿಲ್ಲ. ಕುಟುಂಬದವರು ಶವ ಪಡೆಯಲು ನಿರಾಕರಿಸಿದ ಘಟನೆ ನಮ್ಮ ಮುಂದಿದೆ.

Recommended Video

ಒಂದೂವರೆ ತಿಂಗಳಿಂದ ನೆಮ್ಮದಿಯಾಗಿ ಇದ್ವಿ - ಕುಡುಕನ ಪತ್ನಿ | Women | Oneindia Kannada

ಈ ಸಮಸ್ಯೆಯನ್ನು ಪರಿಹರಿಸಲು ಬಾಗಲಕೋಟೆ ಜಿಲ್ಲಾ ಆಸ್ಪತ್ರೆ ಮುಂದಾಗಿದೆ. ಕೊರೊನಾದಿಂದ ಮೃತಪಟ್ಟ ರೋಗಿಯ ಅಂತ್ಯ ಸಂಸ್ಕಾರ ನಡೆಸಿದರೆ ಅವರಿಗೆ 10 ಸಾವಿರ ರೂ. ಇನ್ಸೆಂಟಿವ್ ನೀಡಲಾಗುತ್ತದೆ. ಇದರ ಜೊತೆಗೆ ಅಂತ್ಯ ಸಂಸ್ಕಾರದ ಖರ್ಚು ಎಂದು 5 ಸಾವಿರ ರೂ. ಸಿಗಲಿದೆ.

ಕ್ವಾರಂಟೈನ್ ಲ್ಲಿದ್ದ ಬಾಗಲಕೋಟೆ 80 ಪೊಲೀಸರ ವರದಿ ನೆಗೆಟಿವ್ಕ್ವಾರಂಟೈನ್ ಲ್ಲಿದ್ದ ಬಾಗಲಕೋಟೆ 80 ಪೊಲೀಸರ ವರದಿ ನೆಗೆಟಿವ್

ಮಾರ್ಚ್ 31ರಂದು ಕೋವಿಡ್ -19 ಸೋಂಕಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಅವರ ಅಂತ್ಯ ಸಂಸ್ಕಾರ ನಡೆಸಲು ಜಿಲ್ಲಾ ಆಸ್ಪತ್ರೆ ಪರದಾಟ ನಡೆಸಿತ್ತು. ಆದ್ದರಿಂದ, ಅಂತ್ಯ ಸಂಸ್ಕಾರ ನಡೆಸಿದರೆ ಇನ್ಸೆಂಟಿವ್ ನೀಡುವ ತೀರ್ಮಾನ ಮಾಡಲಾಗಿದೆ.

ಕೊರೊನಾ ವೈರಸ್ ಸೋಂಕು ರಹಿತಗೊಳಿಸಲು ಬಂತು UV ಬ್ಲಾಸ್ಟರ್!ಕೊರೊನಾ ವೈರಸ್ ಸೋಂಕು ರಹಿತಗೊಳಿಸಲು ಬಂತು UV ಬ್ಲಾಸ್ಟರ್!

10 Thousand Incentive For Who Come Perform Last Rites Of Covid-19 Victims

ಕೊರೊನಾ ಸೋಂಕಿತ ವ್ಯಕ್ತಿ ಮೃತಪಟ್ಟಾಗ ಶವವನ್ನು ಪಡೆಯಲು ಕುಟುಂಬ ಸದಸ್ಯರು ನಿರಾಕರಿಸಿದರು. ಆಗ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಗಳೇ ಸೇರಿ ಅಂತ್ಯ ಸಂಸ್ಕಾರ ಮಾಡಬೇಕಾಯಿತು. ಇಳಕಲ್ ಮೂಲದ 66 ವರ್ಷದ ವ್ಯಕ್ತಿ ಕಳೆದ ವಾರ ಮೃತಪಟ್ಟಾಗಲೂ ಇದೇ ಪರಿಸ್ಥಿತಿ ಎದುರಾಗಿತ್ತು.

ಭಾರತದಲ್ಲಿ 24 ಗಂಟೆಗಳಲ್ಲಿ 3,900 ಕೊರೊನಾ ಹೊಸ ಪ್ರಕರಣ ಪತ್ತೆ ಭಾರತದಲ್ಲಿ 24 ಗಂಟೆಗಳಲ್ಲಿ 3,900 ಕೊರೊನಾ ಹೊಸ ಪ್ರಕರಣ ಪತ್ತೆ

ಆದರೆ, ಅಂತ್ಯ ಸಂಸ್ಕಾರವಾದ ಬಳಿಕ 66 ವರ್ಷದ ವ್ಯಕ್ತಿಯ ಗಂಟಲು ದ್ರವದ ಪರೀಕ್ಷೆ ವರದಿ ಬಂದಿತ್ತು. ಕೊರೊನಾ ಸೋಂಕು ಇಲ್ಲ ಎಂಬುದು ಖಚಿತವಾಗಿತ್ತು. ಈ ಬೆಳವಣಿಗೆಗಳ ಬಳಿಕ ಅಂತ್ಯ ಸಂಸ್ಕಾರ ನಡೆಸುವವರಿಗೆ 10 ಸಾವಿರ ರೂ. ನೀಡುವ ಘೋಷಣೆಯನ್ನು ಮಾಡಲಾಯಿತು.

ಜಿಲ್ಲಾ ಆಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ. ಪ್ರಕಾಶ್ ಬಿರಾದಾರ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಅಂತ್ಯ ಸಂಸ್ಕಾರ ಮಾಡುವಾಗ ಆದ ತೊಂದರೆ ಗಮನದಲ್ಲಿಟ್ಟುಕೊಂಡು ಇನ್ಸಿಂಟಿವ್ ಘೋಷಣೆ ಮಾಡಲಾಯಿತು. ಆರೋಗ್ಯ ರಕ್ಷಾ ಸಮಿತಿ ಅನುದಾನದ ಮೂಲಕ ಇನ್ಸೆಂಟಿವ್ ನೀಡಲಾಗುತ್ತದೆ" ಎಂದು ಹೇಳಿದ್ದಾರೆ.

ಅಂತ್ಯ ಸಂಸ್ಕಾರ ನಡೆಸುವ ವ್ಯಕ್ತಿ ಶವವನ್ನು ಸಾಗಿಸಲು ಸ್ವಂತ ವಾಹನ ತರಬೇಕಿದೆ. ಆಸ್ಪತ್ರೆ ವತಿಯಿಂದ ಅವರಿಗೆ ಪಿಪಿಇ ಕಿಟ್, ಗ್ಲೌಸ್, ಮಾಸ್ಕ್ ಸೇರಿದಂತೆ ಇತರ ಸುರಕ್ಷಾ ಸಾಧನಗಳನ್ನು ನೀಡಲಾಗುತ್ತದೆ. ಆಸ್ಪತ್ರೆ ಇನ್ಸೆಂಟಿವ್ ಘೋಷಣೆ ಮಾಡಿದ ಬಳಿಕ ಖಾಸಗಿ ಆಂಬ್ಯುಲೆನ್ಸ್ ಮಾಲೀಕರೊಬ್ಬರು ಅಂತ್ಯ ಸಂಸ್ಕಾರ ನಡೆಸಲು ಒಪ್ಪಿಕೊಂಡಿದ್ದಾರೆ.

English summary
Bagalkot district hospital announced Rs 10,000 incentive for those who come forward to perform the last rites of the Covid-19 victims. Many people not coming forward to cremate the patients, who have died of Covid-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X