ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಸಿಲ ಜಿಲ್ಲೆ ಬಾಗಲಕೋಟೆಗೆ ತಂಪೆರದ ಮಳೆ, ಕೆಲವೆಡೆ ಅಲ್ಪ ಹಾನಿ

|
Google Oneindia Kannada News

ಬಾಗಲಕೋಟೆ, ಏಪ್ರಿಲ್ 01: ಬೇಸಗೆಯ ಬಿಸಿಲ ಧಗೆಗೆ ಬೆಂದು ಹೋಗಿದ್ದ ಬಾಗಲಕೋಟೆ ಜಿಲ್ಲೆಯ ಜನರಿಗೆ ಸಂಜೆ ಬಂದಿರುವ ಮಳೆ ತಂಪೆರದಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸಂಜೆ ವೇಳೆಗೆ ಬಾಗಲಕೋಟೆಯ ಕೆಲ ಭಾಗಗಳಲ್ಲಿ ಮಳೆ ಆಗಿದ್ದು, ಕಾದ ಭೂಮಿ ತಂಪಾಗಿ, ಮಣ್ಣ ವಾಸನೆ ಕಂಪು ಹರಡಿದೆ. ನಿನ್ನೆ ರಾತ್ರಿಯೂ ಬಾಗಲಕೋಟೆಯಲ್ಲಿ ಮಳೆಯಾಗಿದೆ.

ಶಿವಮೊಗ್ಗ, ಗದಗ, ಬಳ್ಳಾರಿಯಲ್ಲಿ ಸುರಿದ ಆಲಿಕಲ್ಲು ಮಳೆ, 2 ದಿನ ಮಳೆ ಶಿವಮೊಗ್ಗ, ಗದಗ, ಬಳ್ಳಾರಿಯಲ್ಲಿ ಸುರಿದ ಆಲಿಕಲ್ಲು ಮಳೆ, 2 ದಿನ ಮಳೆ

ರಾತ್ರಿ ಅಲಿಕಲ್ಲುಗಳು ಸಹ ಉದುರಿದ್ದು, ಜೋರು ಗಾಳಿ ಸಹಿತ ಮಳೆಗೆ ಹಲವು ಕಡೆ ಬೆಳೆಗಳಿಗೆ ಹಾನಿಯಾಗಿದೆ. ಮನೆಗಳಿಗೂ ಕೆಲವು ಕಡೆ ಹಾನಿಯಾಗಿದೆ.

Rain in Bagalkote today and yesterday

ಜೋರಾದ ಗಾಳಿಗೆ ಕೆಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಕೆಲವೆಡೆ ಮನೆಗೆ, ಶೆಡ್‌ಗೆ ಹಾಕಿದ್ದ ಶೀಟುಗಳು ಹಾರಿಹೋಗಿವೆ. ಕೆಲವೆಡೆ ಸೂರ್ಯಕಾಂತಿ ಗಿಡಗಳಿಗೆ, ಬಾಳೆ ಗಿಡಗಳಿಗೆ ಹಾನಿಯಾಗಿದೆ. ಜೋರು ಗಾಳಿಗೆ ಮಾವಿನ ಗಿಡದ ಹೂವು ಉದುರಿದ್ದು ಭಾರಿ ನಷ್ಟವಾಗಿದೆ.

ವಿರಾಜಪೇಟೆ, ಬಂಡೀಪುರದಲ್ಲಿ ಮಳೆ, ರೈತರಲ್ಲಿ ಸಂತಸ ವಿರಾಜಪೇಟೆ, ಬಂಡೀಪುರದಲ್ಲಿ ಮಳೆ, ರೈತರಲ್ಲಿ ಸಂತಸ

ಮೊನ್ನೆಯಷ್ಟೆ ಗದಗ, ಬಳ್ಳಾರಿ, ಶಿವಮೊಗ್ಗಗಳಲ್ಲಿ ಆಲಿಕಲ್ಲು ಸಹಿತ ಮಳೆ ಆಗಿದೆ. ಉತ್ತರ ಹಾಗೂ ಮಧ್ಯ ಕರ್ನಾಟಕದಲ್ಲಿ ಮಳೆ ಆಗುತ್ತಿದ್ದು, ದಕ್ಷಿಣ ಕರ್ನಾಟಕದಲ್ಲಿ ಇನ್ನೂ ಮಳೆರಾಯ ಕರುಣೆ ತೋರಿಲ್ಲ.

English summary
Rain in Bagalkote districts some parts today and yesterday. Shimogga, Kalburagi, Bellary also seen rain past two days. South Karnataka waiting for rain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X