• search
  • Live TV
ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಗಲಕೋಟೆ: ವಾಹನಗಳಿಗೆ 'ಪ್ರೆಸ್' ಸ್ಟಿಕರ್ ರದ್ದು, ಅಧಿಕೃತ ಪತ್ರಕರ್ತರಿಗೆ QR ಕೋಡ್ ಕಾರ್ಡ್‌!

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ, ಸೆಪ್ಟೆಂಬರ್‌, 16: ಅಧಿಕೃತ ಪತ್ರಕರ್ತರು ಸೇರಿದಂತೆ ಇನ್ಮುಂದೆ ಯಾವುದೇ ವಾಹನಗಳ ಮೇಲೆ 'ಪ್ರೆಸ್' ಎಂಬ ಪದ ಇರುವ ಸ್ಟಿಕರ್‌ಗಳನ್ನು ಬಳಸುವಂತಿಲ್ಲ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಪಿ.ಸುನೀಲ್‍ ಕುಮಾರ್‌ ತಿಳಿಸಿದ್ದಾರೆ.

ನವನಗರದ ಪತ್ರಿಕಾಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಈ ವಿಷಯ ತಿಳಿಸಿದ ಅವರು, ಜಿಲ್ಲೆಯಲ್ಲಿರುವ ಅಧಿಕೃತ ಪತ್ರಕರ್ತರಿಗೆ ಕ್ಯೂಆರ್ ಕೋಡ್ ಇರುವ ಗುರುತಿನ ಚೀಟಿಯನ್ನು ನೀಡಲಾಗುತ್ತಿದೆ. ಈ ಗುರುತಿನ ಚೀಟಿ ಹೊರತುಪಡಿಸಿ ವಾಹನಗಳ ಮೇಲೆ ಪ್ರೆಸ್ ಪದ ಬಳಕೆ ಮಾಡುವದನ್ನು ಜಿಲ್ಲೆಯಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪತ್ರಿಕೆಗಳನ್ನು ಸಾಗಿಸುವ ವಾಹನಗಳಿಗೆ ಪತ್ರಿಕೆ ಸಾಗಿಸುವ ವಾಹನ ಎಂದು ಬರೆಸಬೇಕು. ಈ ನಿಯಮ ನವೆಂಬರ್‌ 1ರಿಂದ ಜಾರಿಗೆ ಬರಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ರಾಮನಗರದಲ್ಲಿ ಕೊರೊನಾ ಭಯ; ಪತ್ರಕರ್ತರ ಪರೀಕ್ಷೆಗೆ ಎಸ್ಪಿ ಮನವಿರಾಮನಗರದಲ್ಲಿ ಕೊರೊನಾ ಭಯ; ಪತ್ರಕರ್ತರ ಪರೀಕ್ಷೆಗೆ ಎಸ್ಪಿ ಮನವಿ

ಅನಧಿಕೃತ ಪತ್ರಕರ್ತರಿಂದ ತೊಂದರೆ
ಅನಧಿಕೃತ ಪತ್ರಕರ್ತರಿಂದ ಅಧಿಕೃತ ಪತ್ರಕರ್ತರಿಗೆ, ಅಧಿಕಾರಿಗಳಿಗೆ ಆಗುತ್ತಿರುವ ತೊಂದರೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಾರ್ಯನಿರತ ಪತ್ರಕರ್ತರ ಸಂಘದಿಂದ ಅಧಿಕೃತ ಪತ್ರಕರ್ತರು ಇರುವದನ್ನು ಪರಿಶೀಲಿಸಲಾಗುವುದು. ನಂತರ ಶಿಫಾರಸ್ಸು ಪತ್ರದೊಂದಿಗೆ ವಾರ್ತಾ ಇಲಾಖೆಯ ಮೂಲಕ ಜಿಲ್ಲಾಡಳಿತಕ್ಕೆ ಪಟ್ಟಿಯನ್ನು ಸಲ್ಲಿಸಬೇಕು. ಪಟ್ಟಿಯನ್ನು ಸಲ್ಲಿಸಿದವರಿಗೆ ಮಾತ್ರ ಕ್ಯೂಆರ್ ಕೋಡ್ ಹೊಂದಿರುವ ಗುರುತಿನ ಚೀಟಿ ನೀಡಲಾಗುತ್ತದೆ ಎಂದು ತಿಳಿಸಿದರು.

ಅಭಿವೃದ್ದಿ ಹಾಗೂ ಜನರ ಸೇವೆಗೆ ಆದ್ಯತೆ
ಪತ್ರಕರ್ತರಿಗೆ ನಿಗದಿತ ಸಮಯದಲ್ಲಿ ಜಿಲ್ಲಾಡಳಿತದಿಂದ ಮಾಹಿತಿ ನೀಡಲು ಕ್ರಮ ವಹಿಸಲಾಗುತ್ತಿದೆ. 3 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿದ್ದು, ಅಭಿವೃದ್ದಿ ಹಾಗೂ ಜನರ ಸೇವೆಗೆ ಆದ್ಯತೆ ನೀಡಲಾಗುತ್ತದೆ. ಈ ನಿಟ್ಟಿಲ್ಲಿನಲ್ಲಿ ಪ್ರಾಮಾಣಿಕ ಕೆಲಸ ಮಾಡಲಾಗುವುದು. ಜಿಲ್ಲೆಯಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳಾಗಿವೆ. ಇನ್ನು ಆಗಬೇಕಿರುವ ಕೆಲಸಗಳ ಕಡೆಗೆ ಹೆಚ್ಚಿನ ಗಮನ ಹರಿಸಲಾಗುವುದು. ಜಿಲ್ಲೆಯು ಭೂಮಿ ವಿಭಾಗದಲ್ಲಿ ರಾಜ್ಯಕ್ಕೇ ಎರಡನೇ ಸ್ಥಾನ ಪಡೆದುಕೊಂಡಿದೆ. ಪ್ರತಿ ತಾಲೂಕಿನಲ್ಲಿರುವ ಕೋರ್ಟ್‌ ಪ್ರಕರಣಗಳು ಸೇರಿದಂತೆ ಇತರೆ ಕಡತಗಳ ವಿಲೇವಾರಿಗೆ ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು.

ಅಧಿಕೃತ ಪತ್ರಕರ್ತರಿಗೆ ಜಯಪ್ರಕಾಶ್‌ ನೀಡಿದ ಸೂಚನೆ
ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಯಪ್ರಕಾಶ್‌ ಮಾತನಾಡಿ, "ವಾಹನಗಳ ಮೇಲೆ ಇರುವ ಪ್ರೆಸ್‌ ಪದವನ್ನು ಮೊದಲು ಅಧಿಕೃತ ಪತ್ರಕರ್ತರು ಸ್ವಯಂ ಪ್ರೇರಿತವಾಗಿ ತೆಗೆದುಹಾಕಬೇಕು. ನಂತರದಲ್ಲಿ ಉಳಿದ ವಾಹನಗಳ ಮೇಲೆ ಇರುವ ಅದನ್ನು ಬಳಕೆ ಆಗದಂತೆ ಪೊಲೀಸ್ ಇಲಾಖೆಯಿಂದ ಕ್ರಮವಹಿಸಲಾಗುತ್ತದೆ. ಪತ್ರಕರ್ತರ ಸಮ್ಮುಖದಲ್ಲಿ ನಿರ್ಧರಿಸಿದಂತೆ ಎಲ್ಲರೂ ಪಾಲನೆ ಮಾಡಬೇಕು," ಎಂದರು.

Bagalkote: Press sticker ban for vehicles, QR code card for official journalists!

ಸಂವಾದ ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್‌ ಸುಳ್ಳೊಳ್ಳಿ, ವಾರ್ತಾ ಸಹಾಯಕರಾದ ಕಸ್ತೂರಿ ಪಾಟೀಲ್‌, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ್‌ ದಲಭಂಜನ, ಪ್ರಧಾನ ಕಾರ್ಯದರ್ಶಿ ಶಂಕರ ಕಲ್ಯಾಣಿ, ರಾಜ್ಯ ಕಾರ್ಯಕಾರಣಿ ಸಮಿತಿಯ ಸದಸ್ಯ ಮಹೇಶ್‌ ಅಂಗಡಿ, ಹಿರಿಯ ಪತ್ರಕರ್ತರಾದ ರಾಮ ಮನಗೂಳಿ, ಈಶ್ವರ ಶೆಟ್ಟರ್‌, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

English summary
Bagalkote: 'Press' sticker ban for vehicles, QR code card for official journalists. Bagalkot District Commissioner P Sunil Kumar launch cards. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X