• search
  • Live TV
ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುರಗೇಶ್ ನಿರಾಣಿ ರಾಜ್ಯದ ಮುಂದಿನ ಮುಖ್ಯಮಂತ್ರಿನಾ? ಆಪ್ತನಿಂದಲೇ ಬ್ಯಾನರ್ ವೈರಲ್

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ, ಆಗಸ್ಟ್ 17: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಷಯ ಗೊಂದಲ ಇರುವಾಗಲೇ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಮುಂದಿನ ಮುಖ್ಯಮಂತ್ರಿ ಎಂಬ ಫ್ಲೆಕ್ಸ್‌ಗಳನ್ನು ಅವರ ಅಭಿಮಾನಿಗಳು ಬಳಸಿರುವುದು ಮತ್ತಷ್ಟು ಗೊಂದಲಕ್ಕೀಡು ಮಾಡಿದೆ.

ಗುರುವಾರ ಮುರುಗೇಶ್ ನಿರಾಣಿ ಹುಟ್ಟುಹಬ್ಬವಿದ್ದು, ಅದಕ್ಕಾಗಿ ನಿರಾಣಿಗೆ ಶುಭಾಶಯ ತಿಳಿಸಲು ರೆಡಿ ಮಾಡಿದ್ದ ಬ್ಯಾನರ್ ನಲ್ಲಿ ಮುಂದಿನ ಮುಖ್ಯಮಂತ್ರಿ ಎಂದು ಮುದ್ರಿಸಲಾಗಿದೆ. ವಿಶೇಷವೆಂದರೆ ಮುರುಗೇಶ್ ನಿರಾಣಿಯ ಆಪ್ತ ಸಹಾಯಕ ಕಿರಣ ಬಡಿಗೇರ ಎಂಬುವರು ಹುಟ್ಟುಹಬ್ಬದ ಶುಭಾಶಯ ಕೋರಲು ಮಾಡಿಸಿರುವ ಬ್ಯಾನರ್‌ನಲ್ಲಿ ಮುಂದಿನ ಮುಖ್ಯಮಂತ್ರಿಗಳು ಮುರುಗೇಶ್ ನಿರಾಣಿ ಅವರಿಗೆ ಎಂದು ಬರೆಯಲಾಗಿದೆ.

ಹಿಂದು-ಮುಸ್ಲಿಂ ಸ್ನೇಹಿತರಿಂದ ಎಲೆಕ್ಟ್ರಿಕ್ ಬೈಕ್ ಆವಿಷ್ಕಾರ: 3 ಗಂಟೆ ಚಾರ್ಜ್‌ಗೆ 120 ಕಿ.ಮೀ ಪ್ರಯಾಣಹಿಂದು-ಮುಸ್ಲಿಂ ಸ್ನೇಹಿತರಿಂದ ಎಲೆಕ್ಟ್ರಿಕ್ ಬೈಕ್ ಆವಿಷ್ಕಾರ: 3 ಗಂಟೆ ಚಾರ್ಜ್‌ಗೆ 120 ಕಿ.ಮೀ ಪ್ರಯಾಣ

ಬ್ಯಾನರ್‌ನಲ್ಲಿ " ಮುಂದಿನ ಮುಖ್ಯಮಂತ್ರಿ, ಜಮಖಂಡಿ ಜಿಲ್ಲೆಯ ಕನಸು ನನಸು ಮಾಡುವ ನಾಯಕ, ಕರ್ನಾಟಕ ಸರ್ಕಾರದ ಬೃಹತ್ ಮತ್ತು ಕೈಗಾರಿಕಾ ಸಚಿವರಾದ ಮುರುಗೇಶ ನಿರಾಣಿ ಅವರಿಗೆ 57ನೇ ಜನ್ಮ ದಿನದ ಶುಭಾಶಯಗಳು " ಎಂದು ಮುದ್ರಿಸಲಾಗಿದೆ.4

ಈ ಬ್ಯಾನರ್ ಫೋಟೋವನ್ನು ಕಿರಣ ತಮ್ಮ ವ್ಯಾಟ್ಸಪ್ ಸ್ಟೇಟಸ್ ಗೆ ಇರಿಸಿದ್ದರು. ಆ ಬಳಿಕ ಅದನ್ನ ಡಿಲೀಟ್ ಮಾಡಿದ್ದು, ಹೊಸ ರೂಪದ ಬ್ಯಾನರ್ ಸಿದ್ಧಪಡಿಸಿ ವ್ಯಾಟ್ಸಪ್ ಸ್ಟೇಟಸ್ ಇರಿಸಿಕೊಂಡಿದ್ದಾರೆ. ಆದರೆ ನಿರಾಣಿ ಮುಂದಿನ ಸಿಎಂ ಹಾಗೂ ಜಮಖಂಡಿ ಭಾಗದಿಂದ ಸ್ಪರ್ಧಿಸುತ್ತಾರೆ ಎಂಬ ಪದಗಳು ಇರುವ ಬ್ಯಾನರ್ ಎಲ್ಲೆಡೆ ವೈರಲ್ ಆಗುತ್ತಿದೆ. ಹೀಗಾಗಿ ಮುರುಗೇಶ್ ನಿರಾಣಿ ಮುಂದಿನ ಸಿಎಂ ಇರಬಹುದು ಎಂಬ ಲೆಕ್ಕಾಚಾರಗಳು ಈಗ ಎಲ್ಲೆಡೆ ಓಡಾಡತೊಡಗಿವೆ. ಜೊತೆಗೆ ನಿರಾಣಿ ಬೀಳಗಿ ಕ್ಷೇತ್ರವನ್ನು ಬಿಟ್ಟು ಜಮಖಂಡಿ ಕಡೆ ಹೊರಟಿದ್ದಾರೆ ಎಂಬ ಅನುಮಾನವೂ ಮೂಡುತ್ತಿವೆ.

ಜಮಖಂಡಿ ಜಿಲ್ಲೆ ಕನಸು ನನಸು ಮಾಡುವ ನಾಯಕ ಅಂತಲೂ ಪದ ಬಳಕೆ ಮಾಡಲಾಗಿದ್ದು, ಪಂಚಮಸಾಲಿ ಸಮುದಾಯ ಹೆಚ್ಚಿರುವ ಜಮಖಂಡಿ ಕ್ಷೇತ್ರದ ಕಡೆ ನಿರಾಣಿ ಮುಖ ಮಾಡಿರಬಹುದಾ ಎಂಬ ಸಂಶಯಗಳು ಕಾಡುತ್ತಿವೆ. ಜೊತೆಗೆ ಫೆಬ್ರುವರಿಯಲ್ಲಿ ಜಮಖಂಡಿ ಸಮೀಪದ ಆಲಗೂರಿನಲ್ಲಿ ಪಂಚಮಸಾಲಿ 3ನೇ ಪೀಠವನ್ನು ನಿರಾಣಿ ಮುಂದಾಳತ್ವದಲ್ಲಿ ಸ್ಥಾಪನೆ ಮಾಡಲಾಗಿತ್ತು. ಪೀಠ ಸ್ಥಾಪನೆ ನೋಡಿದರೆ ನಿರಾಣಿ ಜಮಖಂಡಿ ಕ್ಷೇತ್ರದಲ್ಲಿ ನಿಲ್ಲೋದು ಪಕ್ಕಾನಾ? ಎನ್ನುವ ಅನುಮಾನ ಉದ್ಭವಿಸುತ್ತಿದೆ.

ಇನ್ನು ಈ ಕುರಿತು ಸ್ವತಃ ನಿರಾಣಿ ಪ್ರತಿಕ್ರಿಯಿಸಿದ್ದು, " ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಬಸವರಾಜ ಬೊಮ್ಮಾಯಿ ನಮ್ಮೆಲ್ಲರ ನೆಚ್ಚಿನ ಮುಖ್ಯಮಂತ್ರಿಗಳು. ಅವರ ಕಾರ್ಯ ವೈಖರಿಯಿಂದ ರಾಜ್ಯ ಅಭಿವೃದ್ಧಿಯತ್ತ ಸಾಗಿದೆ. ಬಿ.ಎಸ್.ಯಡಿಯೂರಪ್ಪ ಹಾಗೂ ಸಾಮೂಹಿಕ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ.
ಸಾಮಾಜಿಕ ಜಾಲತಾಣಗಳಲ್ಲಿ, ಪೋಸ್ಟರ್ ಹಾಗೂ ಬ್ಯಾನರ್‌ಗಳಲ್ಲಿ ಈ ರೀತಿ ಹಾಕಬಾರದು"ಎಂದು ಪ್ರಕಟಣೆ ಮೂಲಕ ಮುರುಗೇಶ ನಿರಾಣಿ ಮನವಿ ಮಾಡಿದ್ದಾರೆ.

English summary
Minister of Large and Medium Industries Murugesh Nirani turns 57th on Thursday. one of his followers posted Nirani was the next CM viral on social media,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X