ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

BREAKING: ವೀರ ಯೋಧನ ಹಠಾತ್ ನಿಧನ‌ ತುಂಬಾಲಾರದ ನಷ್ಟ; ನಿರಾಣಿ

|
Google Oneindia Kannada News

ಬಾಗಲಕೋಟೆ, ಸೆ. 10: ಜಮ್ಮು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಹಾವು ಕಚ್ಚಿ ಸಾವನ್ನಪ್ಪಿದ ಹಲಕುರ್ಕಿ ಗ್ರಾಮದ ಯೋಧ ಚಿದಾನಂದ ಚನ್ನಬಸಪ್ಪ ಶಿರಸ್ತೇದಾರ (25) ಅವರ ನಿಧನಕ್ಕೆ ಬೃಹತ್ ಮತ್ತು ‌ಮಧ್ಯಮ ಕೈಗಾರಿಕಾ ‌ಸಚಿವ ಮುರುಗೇಶ್ ನಿರಾಣಿ ಅವರು ಕಂಬನಿ ಮಿಡಿದಿದ್ದಾರೆ.

ಬಾಗಲಕೋಟೆ ಪ್ರವಾಸದಲ್ಲಿದ್ದ ಅವರು, ವಿಷಯ ತಿಳಿಯುತ್ತಿದ್ದಂತೆ ತಮ್ಮ ಅಧಿಕೃತ ಕಾರ್ಯಗಳನ್ನು ಮುಂದೂಡಿ ಮೃತ ಯೋಧನ ಸ್ವಗ್ರಾಮ ಬೀಳಗಿ ತಾಲೂಕಿನ ಹಾಲಕುರ್ಕಿ ಗ್ರಾಮಕ್ಕೆ ತೆರಳಿದ್ದರು. ಯೋಧನ ತಂದೆ ಚನ್ನಬಸಪ್ಪ, ತಾಯ ರತ್ನಮ್ಮ ಸಹೋದರ ‌ಬಸವರಾಜ ಅವರನ್ನು ಭೇಟಿಯಾಗಿ ಸಚಿವ ಮುರುಗೇಶ್ ನಿರಾಣಿ ಸಾಂತ್ವನ ಹೇಳಿದರು.

Murugesh Nirani condolences to death of soldier Chidananda Shirastedar on duty in JK

ದೇಶ ಸೇವೆಯಲ್ಲಿ ತೊಡಗಿಕೊಂಡಿದ್ದ ವೀರ ಯೋಧನ ಹಠಾತ್ ನಿಧನ‌ ನಿಜಕ್ಕೂ ತುಂಬಾಲಾರದ ನಷ್ಟ ಎಂದು ನಷ್ಟ ಎಂದು ಕಂಬನಿ ಮಿಡಿದರು. ಕುಟುಂಬಕ್ಕೆ ಆಸರೆಯಾಗಿದ್ದ ಯೋಧನನ್ನು ಕಳೆದು ಕೊಂಡಿರುವುದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ನಿಮ್ಮ ದುಃಖದಲ್ಲಿ ನಾನು ಒಬ್ಬನಾಗಿದ್ದೆನೆಂದು ಕುಟುಂಬಸ್ಥರಿಗೆ ಸಚಿವ ಮುರುಗೇಶ ನಿರಾಣಿ ಹೇಳಿದರು.

Murugesh Nirani condolences to death of soldier Chidananda Shirastedar on duty in JK

ಗ್ರಾಮಸ್ಥರ ಒತ್ತಾಸೆಯಂತೆ ಇದೇ ಗ್ರಾಮದಲ್ಲಿ ಯೋಧನ‌ ಪುತ್ಥಳಿ ನಿರ್ಮಾಣ ಮಾಡಲು ತಾವೇ ವಿಶೇಷ ಆಸಕ್ತಿವಹಿಸಲಾಗುವುದು.‌ ಈ ಸಂಬಂಧ ಸಂಬಂಧಪಟ್ಟ ‌ಅಧಿಕಾರಿಗಳ ಜೊತೆ ಚರ್ಚೆಸಿ ಆದಷ್ಟು ಶೀಘ್ರ ಪ್ರತಿಮೆಯನ್ನು ನಿರ್ಮಾಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಆಶ್ವಾಸನೆ ನೀಡಿದರು.

ಯೋಧನ ಕುಟುಂಬಕ್ಕೆ ಕೇಂದ್ರದಿಂದ ಬರಬೇಕಾದ ಅಗತ್ಯ ನೆರವನ್ನು ಬಿಡುಗಡೆ ಮಾಡಿಕೊಡಿಸುವುದಾಗಿಯೂ ಹೇಳಿದರು. ಭಾರತೀಯ ಸೇನೆಯ ಮರಾಠಾ ರೆಜಿಮೆಂಟ್‌ನಲ್ಲಿ ಸೈನಿಕನಾಗಿ ಜಮ್ಮು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಾಹಿಸುತ್ತಿದ್ದ ಚಿದಾನಂದ ಚನ್ನಬಸಪ್ಪ ಶಿರಸ್ತೇದಾರ ಅವರಿಗೆ ಹಾವು ಕಚ್ಚಿ ಸಾವನ್ನಪ್ಪಿದ್ದರು. ಸ್ವಗ್ರಾಮದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಇಡೀ ಗ್ರಾಮವೇ ಶೋಕ‌ ಸಾಗರದಲ್ಲಿ ಮುಳುಗಿತ್ತು.

ಗಣೇಶ ಚತುರ್ಥಿ ನಿಮಿತ್ತ ಸಚಿವ ಮುರುಗೇಶ ನಿರಾಣಿ ದಂಪತಿ ವಿಶೇಷ ಪೂಜೆ:

ಶುಕ್ರವಾರ ಬೆಳಗ್ಗೆ ಬಿಳಗಿ ಬಿಜೆಪಿ ಕಾರ್ಯಾಲಯದಲ್ಲಿ ಗಣೇಶ ಚತುರ್ಥಿಯ ನಿಮಿತ್ಯವಾಗಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಗಣೇಶನ ಪೂಜೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ಆರ್ ನಿರಾಣಿ ದಂಪತಿಗಳು ವಿಶೇಷ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ನಾಡಿನ ಜನರು ಹಾಗೂ ತಮ್ಮ ಸ್ವಕ್ಷೇತ್ರದ ಜನತೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ಆರ್ ನಿರಾಣಿ ಗಣೇಶ ಚತುರ್ಥಿಯ ಶುಭ ಸಂದೇಶ ತಿಳಿಸಿದ್ದಾರೆ.

ಗೌರಿ-ಗಣೇಶ ಹಬ್ಬದ ಶುಭ ಸಂದರ್ಭದಲ್ಲಿ ಎಲ್ಲರಿಗೂ ಹಾರ್ದಿಕ ಶುಭಾಶಯಗಳು. ವಿಘ್ನ ನಿವಾರಕ ವಿನಾಯಕನು ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಪ್ರತಿಯೊಬ್ಬರಿಗೂ ಸುಖ,ಆರೋಗ್ಯಕರ ಹಾಗೂ ‌ನೆಮ್ಮದಿ ಜೀವನವನ್ನು ನಡೆಸಲು ಆರ್ಶೀವಾದಿಸಲಿ ಎಂದು ಪ್ರಾರ್ಥಿಸುವೆ. ಕಳೆದ ಎರಡು ವರ್ಷಗಳಲ್ಲಿ ಕೊರೊನಾ ವೈರಸ್‌ನಿಂದ ಬಹಳಷ್ಟು ಹಾನಿ ಅನುಭವಿಸಿದ್ದೇವೆ, ಜೀವಗಳನ್ನು ಕಳೆದುಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.

Recommended Video

Chahal ಅವರನ್ನು ಕೈಬಿಡುವ ಹಿಂದಿನ ಅಸಲಿ ಕಾರಣ | Oneindia Kannada

ಬರುವಂತಹ ವರ್ಷದಲ್ಲಿ ಗೌರಿ ಮತ್ತು ಗಣೇಶ ಈ ಸಂಕಷ್ಟದಿಂದ ಎಲ್ಲರನ್ನು ಪಾರು ಮಾಡಿ, ಎಲ್ಲರಿಗೂ ಒಳ್ಳೇಯ ಆಯುಷ್ಯ, ಆರೋಗ್ಯ, ಸಿರಿ ಸಂಪತ್ತನ್ನು ಕೊಡುವ ಮುಖಾಂತರ ಬರುವಂತಹ ಕಷ್ಟಗಳನ್ನು ದೂರ ಮಾಡಲಿ ಎಂದು ಈ ಸಮದರ್ಭದಲ್ಲಿ ಹಾರೈಸುತ್ತಿದ್ದೇನೆ. ರಾಜ್ಯದ ಆರೂವರೆ ಕೋಟಿ ಜನರು ಈ ಕೋವಿಡ್ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಜೊತೆಗೆ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಕೇಳಿಕೊಳ್ಳುತ್ತೇನೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

English summary
Minister Murugesh Nirani condolenced death of Chidananda Channabasappa Shirastedar (25), a soldier who died suddenly while on duty in Jammu and Kashmir. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X