ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಗಲಕೋಟೆ: ಬೀದಿ ನಾಯಿಗಳ ನಿಯಂತ್ರಣಕ್ಕೆ ನಗರಸಭೆ ಹೊಸಪ್ಲಾನ್, ಇದಕ್ಕಾಗಿ 10ಲಕ್ಷ ಖರ್ಚು

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ, ಆಗಸ್ಟ್‌ 5: ನಗರದಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸಲು ನಗರಸಭೆ ಹೊಸ ಪ್ಲಾನ್ ಮಾಡಿದೆ. ಅದಕ್ಕಾಗಿಯೇ ಈಗಾಗಲೇ ಟೆಂಡರ್ ಸಹ ಕರೆಯಲಾಗಿದೆ. ಈ ಟೆಂಡರ್‌ ಮನುಷ್ಯರಂತೆ ಬೀದಿ ನಾಯಿಗಳಿಗೂ ಆರೋಗ್ಯ ತಪಾಸಣೆ ನಡೆಸಿ ಉಪಚಾರ ಮಾಡಲಾಗುತ್ತದೆ. ನಗರಸಭೆ ಈ ಯೋಜನೆಗಾಗಿ ಲಕ್ಷ ಲಕ್ಷ ಖರ್ಚು ಮಾಡಲು ಸಿದ್ಧವಾಗಿದೆ.

ಬಾಗಲಕೋಟೆ ನಗರದಲ್ಲಿ ಹಿಂಡು ಹಿಂಡಾಗಿ ಬೀದಿನಾಯಿಗಳು ದಾಂಗುಡಿ ಇಡುತ್ತಿದ್ದು, ವಾಹನಗಳಿಗೆ ಸಿಕ್ಕು ಸಾವನ್ನಪ್ಪುತ್ತಿದ್ದ ಬೀದಿ ನಾಯಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿವೆ. ಜೊತೆಗೆ ಚೀರಾಡಿ ಜನತೆಗೆ ಕಿರಿಕಿರಿ ಕೊಡುತ್ತಿದ್ದ ನಾಯಿಗಳ ಸಂಖ್ಯೆ ಕಡಿಮೆ ಮಾಡುವುದಕ್ಕಾಗಿ ಬಾಗಲಕೋಟೆ ನಗರಸಭೆ ನಿರ್ಧರಿಸಿದ್ದು, ಸಂತಾನ ಹರಣ ಶಸ್ತ್ರಚಿಕಿತ್ಸೆ ಮೂಲಕ ನಾಯಿಗಳ ಸಂತತಿ ನಿಯಂತ್ರಿಸುವ ಪ್ರಯತ್ನ ಮಾಡುತ್ತಿದೆ.

ಬೆಂಗಳೂರಿಗರಿಗೆ ಬೀದಿನಾಯಿ ಕಾಟ: ಎರಡು ವರ್ಷದಲ್ಲಿ 52,262 ಮಂದಿಗೆ ಕಡಿತ!ಬೆಂಗಳೂರಿಗರಿಗೆ ಬೀದಿನಾಯಿ ಕಾಟ: ಎರಡು ವರ್ಷದಲ್ಲಿ 52,262 ಮಂದಿಗೆ ಕಡಿತ!

ಈಗಾಗಲೇ ಟೆಂಡರ್ ಕರೆಯಲಾಗಿದ್ದು ಇದೇ ತಿಂಗಳು 28ರವರೆಗೆ ಟೆಂಡರ್ ‌ ಹಾಕುವುದಕ್ಕೆ ಕಾಲವಕಾಶ ನೀಡಲಾಗಿದೆ. ಇನ್ನು ಪ್ರಾಣಿ ಕಲ್ಯಾಣ ಮಂಡಳಿ ಪ್ರಕಾರ ಒಂದು ನಾಯಿಯ ಶಸ್ತ್ರಚಿಕಿತ್ಸೆಗೆ 1650 ರೂ ದರ ನಿಗದಿ ಮಾಡಲಾಗಿದೆ. ಮೊದಲ ಹಂತದಲ್ಲಿ ಸುಮಾರು 600 ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ 9 ಲಕ್ಷ 90 ಸಾವಿರ ರೂಗಳನ್ನ ನಗರಸಭೆ ಅನುದಾನದಿಂದಲೇ ಬಳಸಿಕೊಳ್ಳಲಾಗುತ್ತಿದೆ. ಆ ಮೂಲಕ ನರಸಭೆ ವ್ಯಾಪ್ತಿಯಲ್ಲಿ ನಾಯಿಗಳ ಸಂಖ್ಯೆ ಕಡಿಮೆ ಮಾಡುವ ಪ್ರಯತ್ನಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.

Bagalkot Municipal Plan to Control Street Dog Through vasectomy Treatment

ಈ ಮೊದಲು ಬೀದಿ ನಾಯಿಗಳ ನಿಯಂತ್ರಣಕ್ಕೆ ಕಟ್ಟು ನಿಟ್ಟಿ ನಿಯಮಗಳಿರಲಿಲ್ಲ. ವಾಹನಗಳಲ್ಲಿ ತುಂಬಿಕೊಂಡು ಬೇರೆ ಸ್ಥಳಗಳಿಗೆ ಬಿಡಲಾಗುತ್ತಿತ್ತು. ಅಲ್ಲದೇ ಅವುಗಳನ್ನ ವಿಷಕಾರಿ ಆಹಾರ ಕೊಟ್ಟು ಸಾಯಿಸುವ ಕಾರ್ಯವು ನಡೆಯುತ್ತಿತ್ತು. ಆದೆ ಪ್ರಾಣಿ ಕಲ್ಯಾಣ ಮಂಡಳಿ ಪ್ರಕಾರ ಸಾಯಿಸುವುದು ಅಪರಾಧ ಎಂದು ಪರಿಗಣಿಸಲ್ಪಡುತ್ತದೆ. ಹಾಗಾಗಿ ಬಾಗಲಕೋಟೆ ನಗರಸಭೆ ಅಧಿಕಾರಿಗಳು ಹೊಸ ಕಾರ್ಯದ ಮೂಲಕ ಶ್ವಾನಗಳ ನಿಯಂತ್ರಿಸುವ ಪ್ರಯತ್ನಕ್ಕೆ ಮುಂದಾಗಿದೆ.

ಇಲ್ಲಿದೆ ನಾಯಿಗಳಿಗಾಗಿ ಲೈಬ್ರರಿ: ಏನಿದರ ವಿಶೇಷತೆ?ಇಲ್ಲಿದೆ ನಾಯಿಗಳಿಗಾಗಿ ಲೈಬ್ರರಿ: ಏನಿದರ ವಿಶೇಷತೆ?

"ಈ ಹಿಂದೆ ಅನೇಕ ಸಲ ಟೆಂಡರ್ ಕರೆಯಲಾಗಿತ್ತಾದರೂ ಯಾವುದೇ ಎನ್‌ಜಿಒ ಮುಂದೆ ಬಂದಿರಲಿಲ್ಲ. ಕಾರಣ ಕಡಿಮೆ ದರ ನಿಗದಿ ಮಾಡಲಾಗಿತ್ತು. ಇದೀಗ ಒಂದು ನಾಯಿಗೆ 1650 ರೂ ಇರುವುದರಿಂದ ಯಾವುದಾದ್ರೂ ಎನ್‌ಜಿಒ ಮುಂದೆ ಬರಬಹುದು ಎಂಬ ನಿರೀಕ್ಷೆಯಲ್ಲಿ ನಗರಸಭೆ ಇದೆ. ನಗರ ಜನತೆ ಮನೆಯಲ್ಲಿ ಉಳಿದ ಆಹಾರ ಪದಾರ್ಥ ನೀಡುವುದರಿಂದ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಹಾಗಾಗಿ ಜನತೆ ಉಳಿದ ಆಹಾರವನ್ನು ಪ್ರಾಣಿಗಳಿಗೆ ಹಾಕದೇ ನಗರಸಭೆ ಕಸ ವಿಲೇವಾರಿ ವಾಹನಕ್ಕೆ ಹಾಕುವಂತೆ ನಗರಸಭೆ ಎಇಇ ಸತೀಶ ಖಜ್ಜಿಡೋಣಿ ಮನವಿ ಮಾಡಿದ್ದಾರೆ.

Bagalkot Municipal Plan to Control Street Dog Through vasectomy Treatment

ಇತ್ತ ನಗಸರಭೆಯ ಈ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಶ್ವಾನ ಪ್ರೇಮಿಗಳು ಸ್ವಾಗತ ಮಾಡಿದ್ದಲ್ಲದೇ, ಇದು ಕೇವಲ ಫೊಟೋ, ವಿಡಿಯೋಗಳ ಯೋಜನೆ ಆಗಬಾರದು. ಹಣ ಹೊಡೆಯುವ ಯೋಜನೆ ಆಗದೇ, ಸೂಕ್ತ ಅನುಷ್ಠಾನ ಗೊಳಿಸಬೇಕು. ಮನುಷ್ಯರಂತೆ ಶ್ವಾನಗಳಿಗೂ ಶಸ್ತ್ರಚಿಕಿತ್ಸೆಗೂ ಮೊದಲು ಆರೋಗ್ಯ ತಪಾಸಣೆ ನಡೆಸಬೇಕು. ನಂತರ ಶಸ್ತ್ರಚಿಕಿತ್ಸೆಗೆ ಒಳಪಡಿಸಬೇಕು. ಅಲ್ಲದೇ ಎರಡ್ಮೂರು ದಿನಗಳವರೆಗೆ ಶ್ವಾನ, ವೈದ್ಯರ ಆರೈಕೆಯಲ್ಲೇ ಇರಬೇಕು. ನಂತರ ಅವುಗಳನ್ನ ಬೀದಿಗೆ ಬಿಡುವ ಕಾರ್ಯ ಆಗಬೇಕು ಎಂದು ಸಮಾಜಿಕ ಹೋರಾಟಗಾರ ಘಣಶ್ಯಾಮ ಭಾಂಡಗೆ ಆಗ್ರಹಿಸಿದ್ದಾರೆ.

ಇಷ್ಟು ದಿನ ಬೀದಿ ನಾಯಿಗಳ ಕಾಟಕ್ಕೆ ಬೇಸತ್ತಿದ್ದ ನಗರ ವಾಸಿಗಳಿಗೆ ಈ ವಿಚಾರ ಕೊಂಚ ರಿಲೀಪ್ ನೀಡಿದೆ. ಆದರೆ ನಗರಸಭೆ ಅಧಿಕಾರಿಗಳ ಈ‌ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ಜೊತೆಗೆ ಹಣ ಹೊಡೆಯದಿರುವಂತೆ ಎಚ್ಚರಿಕೆ ಮಾತುಗಳೂ ಕೂಡ ಕೇಳಿಬಂದಿದೆ.

Recommended Video

ಮುಖ್ಯಮಂತ್ರಿ ಬೊಮ್ಮಾಯಿಗೆ ಕೊರೋನಾ ಮೋದಿ ಮೀಟಿಂಗ್ ಕ್ಯಾನ್ಸಲ್ | *Politics | OneIndia Kannada

English summary
Bagalkot City municipal council prepared a Plan To Control Street Dog Population through Vasectomy Treatment. CMC is spending 10 lakh rupees for this project,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X