ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಲಗಲಿ ಜಿಪಂ ಉಪಚುನಾವಣೆ: ಕೈ ಅಭ್ಯರ್ಥಿ ಮುಗಿಯಪ್ಪ ದೇವನಾಳಗೆ ಗೆಲುವು

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ, ಜೂನ್.17: ತೀವ್ರ ಕೂತಹಲ ಕೆರಳಿಸಿದ್ದ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಗಲಗಲಿ ಜಿಪಂ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುಗಿಯಪ್ಪ ದೇವನಾಳ ಗೆಲುವು ಸಾಧಿಸಿದ್ದಾರೆ.

ಗೆಲುವು ಸಾಧಿಸುತ್ತಿದ್ದಂತೆ ಕೈ ಕಾರ್ಯಕರ್ತರ ಸಂಭ್ರಮ ಜೋರಾಗಿತ್ತು. ಬೀಳಗಿ ಪಟ್ಟಣದಲ್ಲಿ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಬಣ್ಣ ಎರಚಿ, ಮುಗಿಯಪ್ಪ ದೇವನಾಳ ಗೆ ಜಯಮಾಲೆ ಹಾಕಿ ಹರ್ಷಪಟ್ಟರು.

ಜಿಪಂ ಸಭೆಯಲ್ಲಿ ಮರಾಠಿ ಮಾತನಾಡಿದ ಶಾಸಕನಿಗೆ ಮುಖಭಂಗ ಜಿಪಂ ಸಭೆಯಲ್ಲಿ ಮರಾಠಿ ಮಾತನಾಡಿದ ಶಾಸಕನಿಗೆ ಮುಖಭಂಗ

ಒಟ್ಟು 11,584 ಮತಗಳನ್ನು ಕಾಂಗ್ರೆಸ್ ಪಡೆದರೆ, ಬಿಜೆಪಿ ಅಭ್ಯರ್ಥಿ ಚೆನ್ನಪ್ಪ ಜಮಖಂಡಿ 10,336 ಮತ ಪಡೆದಿದ್ದಾರೆ. ಈ ಮೂಲಕ ಮುಗಿಯಪ್ಪ ದೇವನಾಳ 1248 ಮತಗಳ ಅಂತರದಿಂದ ಜಯಮಾಲೆ ಧರಿಸಿದ್ದಾರೆ. ಜಿಪಂ ಅಧ್ಯಕ್ಷ ಗಾದಿ ವಿಚಾರದಲ್ಲಿ ಚುನಾವಣೆ ಮಹತ್ವ ಪಡೆದುಕೊಂಡಿತ್ತು.

Mugiyappa Devanal has won the by-election in Galagali Zilla Panchayath

ಕಾಂಗ್ರೆಸ್ ಅಭ್ಯರ್ಥಿ ಗೆದ್ದಿರೋದರಿಂದ ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿ ಕಾಂಗ್ರೆಸ್ ನ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಖುರ್ಚಿ ಸದ್ಯ ಸೇಫ್ ಆಗಿದೆ. ಬೀಳಗಿ ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಕಾಂಗ್ರೆಸ್ ನ ಮಾಜಿ ಶಾಸಕ ಜೆಟಿ ಪಾಟಿಲ್ ಗೆ ಪ್ರತಿಷ್ಟೆಯ ಕ್ಷೇತ್ರ ಕಣವಾಗಿತ್ತು.

ಸದ್ಯ ಜೆ ಟಿ ಪಾಟಿಲ್ ಗೆ ಜಯ ಸಿಕ್ಕಂತಾಗಿದೆ. ಬೆಳಗ್ಗೆ ಎಂಟು ಗಂಟೆಯಿಂದ ಬೀಳಗಿ ಮಿನಿ ವಿಧಾನಸೌಧದಲ್ಲಿ ಮತ ಎಣಿಕೆ ನಡೆದು ಕೇವಲ ಒಂದು ಗಂಟೆಯಲ್ಲಿ ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್ ಜಿಪಂ ಸದಸ್ಯ ವೆಂಕನಗೌಡ ಪಾಟಿಲ್ ಸಾವಿನಿಂದ ಜಿಪಂ ಸ್ಥಾನ ತೆರವಾಗಿತ್ತು.

ಗಲಗಲಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ವೀಣಾ ಕಾಶಪ್ಪನವರ ಖುರ್ಚಿಗೆ ಕುತ್ತು ಬರಲಿತ್ತು. ಒಟ್ಟು 36 ಸ್ಥಾನಗಳಲ್ಲಿ ಕಳೆದ ಬಾರಿ ಬಿಜೆಪಿ 18 , ಕಾಂಗ್ರೆಸ್ 17 ಸ್ಥಾನದಲ್ಲಿ ಗೆದ್ದಿತ್ತು. ಆದರೆ ಕಾಂಗ್ರೆಸ್ ಓರ್ವ ರೈತಸಂಘದ ಸದಸ್ಯನ ಬೆಂಬಲ ಪಡೆದಿತ್ತು. ಜೊತೆಗೆ ಬಿಜೆಪಿ ಪಕ್ಷದ ಭಾಗ್ಯಶ್ರಿ ಜಂಬಗಿಯವರನ್ನು ಗೈರು ಮಾಡಿಸಿ ಹಿಂಬಾಗಿಲಿನಿಂದ ಕಾಂಗ್ರೆಸ್ ಅಧಿಕಾರ ಹಿಡಿದಿದೆ.

ಸದ್ಯ ಗಲಗಲಿ ಕ್ಷೇತ್ರ ಅಧ್ಯಕ್ಷ ಗಾದಿ ವಿಚಾರದಲ್ಲಿ ಹೆಚ್ಚು ಮಹತ್ವ ಪಡೆದುಕೊಂಡು ಎಲ್ಲರಲ್ಲೂ ಕುತೂಹಲ ಮೂಡಿಸಿತ್ತು. ಸದ್ಯ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ‌ ಮೂಲಕ ಜಿಪಂ ಅಧ್ಯಕ್ಷೆ ಗಾದಿ ಸೇಪ್ ಆಗಿದ್ದು, ಜನರ ಕುತೂಹಲಕ್ಕೆ ತೆರೆ ಬಿದ್ದಿದೆ.

English summary
Congress candidate Mugiyappa Devanal has won by-election in Galagali Zilla Panchayath. Congress activists celebrate triumph.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X