ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಗಲಕೋಟೆ; ಮುಧೋಳ ತಹಶೀಲ್ದಾರ್ ಎಸ್. ಬಿ. ಬಾಡಗಿ ನಿಧನ

|
Google Oneindia Kannada News

ಬಾಗಲಕೋಟೆ, ಮಾರ್ಚ್ 18; ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ತಹಶೀಲ್ದಾರ್ ಎಸ್. ಬಿ. ಬಾಡಗಿ ವಿಧಿವಶರಾದರು. ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಸೇರಿದಂತೆ ಹಲವು ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

ಮುಧೋಳ ತಹಶೀಲ್ದಾರ್ ಎಸ್. ಬಿ. ಬಾಡಗಿ (38) ಶುಕ್ರವಾರ ಬೆಳಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮನೆಯಲ್ಲಿಯೇ ಅವರಿಗೆ ಹೃದಯಾಘಾತವಾಗಿದ್ದು, ಪುತ್ರಿ ಮತ್ತು ಪತ್ನಿಯನ್ನು ಅಗಲಿದ್ದಾರೆ.

ಬಾಗಲಕೋಟೆ ಸಹಕಾರ ಬ್ಯಾಂಕ್ ನೇಮಕಾತಿ; 110 ಹುದ್ದೆಗೆ ಅರ್ಜಿ ಹಾಕಿಬಾಗಲಕೋಟೆ ಸಹಕಾರ ಬ್ಯಾಂಕ್ ನೇಮಕಾತಿ; 110 ಹುದ್ದೆಗೆ ಅರ್ಜಿ ಹಾಕಿ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜನವಾಡ ಮೂಲದವರಾದ ಎಸ್. ಬಿ. ಬಾಡಗಿ ಕಳೆದ ಮೂರು ವರ್ಷಗಳಿಂದ ಮುಧೋಳ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು.

ಪೊಲೀಸ್ ಠಾಣೆಯಲ್ಲಿ ಕರು ಸಾಕುತ್ತಿದ್ದ ಕರುಪ್ರೇಮಿ ಇನ್‌ಸ್ಪೆಕ್ಟರ್ ಗೆ ಹೃದಯಾಘಾತ!ಪೊಲೀಸ್ ಠಾಣೆಯಲ್ಲಿ ಕರು ಸಾಕುತ್ತಿದ್ದ ಕರುಪ್ರೇಮಿ ಇನ್‌ಸ್ಪೆಕ್ಟರ್ ಗೆ ಹೃದಯಾಘಾತ!

Mudhol Tahsildar SB Badagi No More

ಎಸ್. ಬಿ. ಬಾಡಗಿ ನಿವಾಸಕ್ಕೆ ಎಸಿ ಸಿದ್ದು ಹುಲ್ಲಳ್ಳಿ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಗಂಡನ ಉಸಿರು ಗಟ್ಟಿ ಹತ್ಯೆ ಮಾಡಿ ಹೃದಯಾಘಾತ ಎಂದು ನಾಟಕವಾಡಿದ್ದ ಪತ್ನಿ ಗಂಡನ ಉಸಿರು ಗಟ್ಟಿ ಹತ್ಯೆ ಮಾಡಿ ಹೃದಯಾಘಾತ ಎಂದು ನಾಟಕವಾಡಿದ್ದ ಪತ್ನಿ

ತುಷಾರ್ ಗಿರಿನಾಥ್ ಸಂತಾಪ; ಕಂದಾಯ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಎಸ್. ಬಿ. ಬಾಡಗಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ಶ್ರೀ ಎಸ್. ಬಿ. ಬಾಡಗಿ ತಹಶೀಲ್ದಾರ್ ಮುಧೋಳ ತಾಲೂಕು ಬಾಗಲಕೋಟೆ ಜಿಲ್ಲೆ ಇವರು ಇಂದು ದಿನಾಂಕ 18/38/2022ರಂದು ಹೃದಯಾಘಾತದಿಂದ ನಿಧನ ಹೊಂದಿರುವ ವಿಷಯವನ್ನು ಕೇಳಿ ಮನಸ್ಸಿಗೆ ಅತೀವ ನೋವುಂಟಾಗಿದೆ.

ಇವರ ಅಗಲಿಕೆಯಿಂದ ಕಂದಾಯ ಇಲಾಖೆಯು ಒಬ್ಬ ದಕ್ಷ ಅಧಿಕಾರಿಯ ಸೇನೆಯನ್ನು ಕಳೆದುಕೊಂಡಂತಾಗಿದೆ. ಈ ಬಗ್ಗೆ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಾ ಮೃತರ ಆತ್ಮಕ್ಕೆ ಶಾಂತಿಯನ್ನು ಹಾಗೂ ಅವರ ಕುಟುಂಬ ವರ್ಗಕ್ಕೆ ಮೃತರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

English summary
Tahsildar of Mudhol S B Badagi died due to heart attack. Tushar Giri Nath Karnataka's principal secretary expressed condolences for death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X