ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತೀಯ ಸೇನೆ ಸೇರಲು ಸಜ್ಜಾದ ದೇಸಿ ತಳಿ ನಾಯಿ 'ಮುಧೋಳ ಹೌಂಡ್'

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ನವೆಂಬರ್ 02: ಅಪ್ಪಟ ದೇಸಿ ತಳಿ ಬಾಗಲಕೋಟೆಯ 'ಮುಧೋಳ ನಾಯಿ'ಗಳು (ಮುಧೋಳ ಹೌಂಡ್‌) ಭಾರತೀಯ ಸೇನೆಗೆ ಅಧಿಕೃತವಾಗಿ ಡಿಸೆಂಬರ್ ತಿಂಗಳಿನಲ್ಲಿ ಸೇರ್ಪಡೆಗೊಳ್ಳಲಿದೆ.

ಈ ಮೂಲಕ ಭಾರತೀಯ ಸೇನೆಗೆ ಸೇರಿದ ಮೊದಲ ದೇಶಿ ನಾಯಿಗಳು ಎಂಬ ಕೀರ್ತಿಗೆ ಮುಧೋಳ ಬೇಟೆ ನಾಯಿಗಳು ಪಾತ್ರವಾಗಿವೆ. 2016ರಲ್ಲಿ ಬೆಂಗಳೂರಿನ ಹೆಬ್ಬಾಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಗೆ 6 ನಾಯಿಗಳನ್ನು ಹಸ್ತಾಂತರಮಾಡಲಾಗಿತ್ತು.

Karnataka’s Mudhol Hound becomes first ‘desi’ dog to join Indian Army
ಉತ್ತರಪ್ರದೇಶದ ಮೀರತ್ ನಲ್ಲಿರುವ ಯುದ್ಧ ಶ್ವಾನಗಳ ತರಬೇತಿ ಘಟಕ(Army's Remount and Veterinary Corps (RVC)) ದಲ್ಲಿ ಆರು ಮುಧೋಳ ನಾಯಿಗಳಿಗೆ ವಿಶೇಷ ತರಬೇತಿ ನೀಡಲಾಗಿದ್ದು, ಸೇನೆಯ ಸೇವೆಗೆ ಸಿದ್ಧವಾಗಿವೆ.

ಮೀರತ್ ನಲ್ಲಿ ನಾಯಿಗಳಿಗೆ ತರಬೇತಿ ನೀಡಿದ ಬಳಿಕ ಸೇನೆಯಲ್ಲಿ ಅಧಿಕೃತವಾಗಿ ಬಳಸಿಕೊಳ್ಳಲಾಗುವುದು. ಬಾಂಬ್ ಪತ್ತೆಹಚ್ಚುವಿಕೆ, ಪತ್ತೇದಾರಿ ಚಟುವಟಿಕೆ ಹಾಗೂ ರಕ್ಷಣಾ ಚಟುವಟಿಕೆ ಕುರಿತು ಇವುಗಳಿಗೆ ತರಬೇತಿ ನೀಡಲಾಗುತ್ತದೆ' ಎಂದು ಲೆಫ್ಟಿನೆಂಟ್ ಕರ್ನಲ್ ಎನ್.ಪ್ರಕಾಶ್ ಹೇಳಿದ್ದಾರೆ.

'ಮುಧೋಳ ಶ್ವಾನಗಳನ್ನು ಕ್ಷೇತ್ರ ಮಟ್ಟದಲ್ಲಿ ಪರೀಕ್ಷಿಸಿದ್ದು, ಸೇನೆಯಲ್ಲಿ ಕಾರ್ಯ ನಿರ್ವಹಿಸಲು ಈ ನಾಯಿಗಳು ಅರ್ಹತೆ ಗಳಿಸಿವೆ. ತರಬೇತಿ ಪಡೆದ ಶ್ವಾನಗಳನ್ನು ಅಪರಾಧಿ ಪತ್ತೆ ಹಚ್ಚುವಿಕೆ, ಭಯೋತ್ಪಾದನೆ ಚಟುವಟಿಕೆಗಳ ಮೇಲೆ ನಿಗಾ ಇಡಲು, ವಿವಿಧ ಸೈನಿಕ ಚಟುವಟಿಕೆಗಳಲ್ಲಿ ಬಳಸಲಾಗುತ್ತದೆ' ಎಂದು ಸೇನೆಯ ಪಶುವೈದ್ಯ ಕರ್ನಲ್ ಸುರಿಂದರ್‌ ಸೈನಿ ಹೇಳಿದ್ದಾರೆ.

ಇಲ್ಲಿ ತನಕ ಭಾರತೀಯ ಸೇನೆಯಲ್ಲಿ ಜರ್ಮನ್ ಶೆಪರ್ಡ್ಸ್, ಗ್ರೇಟ್ ಸ್ವಿಸ್ ಮೌಂಟೇನ್, ಲಾಬ್ರಡಾರ್ಸ್ ತಳಿಗಳನ್ನು ಮಾತ್ರ ಸೇವೆಗೆ ಬಳಸಲಾಗುತ್ತಿತ್ತು. ಈಗ ಈ ಸಾಲಿಗೆ ದೇಶಿ ತಳಿ ಕರ್ನಾಟಕದ ಮುಧೋಳ್ ಹೌಂಡ್ ಸೇರ್ಪಡೆಗೊಂಡಿದೆ.

English summary
The Mudhol Hound from Karnataka will be the first desi dog to make it to the Indian Army. The Indian Army which uses German Shepherds, Great Swiss Mountain dog and Labradors is all set to induct the desi Mudhol Hound.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X