ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಂಡ ಕಂಡವರ ಮೇಲೆ ಮಂಗಗಳ ದಾಳಿ, ಭಯಗೊಂಡ ಕಮತಗಿ ಜನ

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ, ಆಗಸ್ಟ್ 10: ಮಲೆನಾಡು ಭಾಗದಲ್ಲಿ ಇತ್ತೀಚೆಗೆ ಕಾಡು ಕೋಣ, ಆನೆಗಳ ಹಾವಳಿ ಹೆಚ್ಚಾಗಿ ಜನ ರೋಸತ್ತಿ ಹೋಗಿದ್ದರೆ, ಇತ್ತ ಕಡೆ ಬಾಗಲಕೋಟೆಯಲ್ಲಿ ಜನರು ಮಂಗಗಳ ದಾಳಿಗೆ ಬೇಸತ್ತಿ ಹೋಗಿದ್ದಾರೆ.

ಅಷ್ಟೇ ಅಲ್ಲ, ಮಂಗಗಳ ಈ ಅವತಾರ ನೋಡಿ ಅಲ್ಲಿಯ ಜನ ಮಂಗಗಳನ್ನು ಅರಣ್ಯ ಪ್ರದೇಶಕ್ಕೆ ಬಿಟ್ಟು ಬರಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮಾಡಲೂ ನಿರ್ಧರಿಸಿದ್ದಾರೆ.

ಮರಿಯನ್ನು ರಕ್ಷಿಸಲು ಜೀವವನ್ನೂ ಲೆಕ್ಕಿಸಲಿಲ್ಲ ಈ ಕೋತಿ: ವೈರಲ್ ವಿಡಿಯೋಮರಿಯನ್ನು ರಕ್ಷಿಸಲು ಜೀವವನ್ನೂ ಲೆಕ್ಕಿಸಲಿಲ್ಲ ಈ ಕೋತಿ: ವೈರಲ್ ವಿಡಿಯೋ

ಹೌದು, ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದಲ್ಲಿ ಇಬ್ಬರು ವ್ಯಕ್ತಿಗಳ ಮೇಲೆ ಮಂಗಗಳು ದಾಳಿ ಮಾಡಿದ್ದು, ಇದರಿಂದ ಕಮತಗಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

Monkeys attacked two persons in Kamatagi town

ಕಮತಗಿಯ ಶ್ರೀ ಹುಚ್ಚೇಶ್ವರ ಪ್ರೌಢಶಾಲೆಯ ಕರಣಿಕ ಶಿವಾನಂದ ಇಟಗಿ ಅವರ ಎಡಭಾಗದ ಕೈಗೆ ಮಂಗ ಕಚ್ಚಿದ್ದರ ಪರಿಣಾಮದಿಂದ ತೀವ್ರ ರಕ್ತಸ್ರಾವವಾಗಿದೆ. ನಿನ್ನೆ ಬಸ್ ಕಂಡಕ್ಟರ್ ರಮೇಶ್ ಉಕ್ಕಲಿ ಎಂಬುವವರ ಮೇಲೆಯೂ ಮಂಗ ದಾಳಿ ಮಾಡಿದೆ.

ಒಂದೇ ಮಂಗ ಕಳೆದ ಮೂರ್ನಾಲ್ಕು ದಿನಗಳಿಂದ ಕಂಡ ಕಂಡವರ ಮೇಲೆ ದಾಳಿ ಮಾಡುತ್ತಿದ್ದು, ಕಮತಗಿಯ ಜನತೆ ಮಂಗ ದಾಳಿ ಮಾಡಿದ ಭಯದಲ್ಲೇ ದಿನದೂಡುತ್ತಿದ್ದಾರೆ. ಕಮತಗಿಯ ಹೊರ ವಲಯದ ವಾರಿ ಆಂಜನೇಯ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಮಂಗ ಹೆಚ್ಚಾಗಿ ಕಂಡು ಬರುತ್ತದೆ ಎಂದು ಸ್ಥಳೀಯರಾದ ಕೃಷ್ಣಾ ಹೊಸಮನಿ,ಚೇತನ್ ತಿಗಡಿ ಹೇಳಿದ್ದಾರೆ.

ದಿನ ಕಳೆದಂತೆ ಮಂಗನ ಹಾವಳಿ ಹೆಚ್ಚಾಗುತ್ತಿದ್ದು, ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮಂಗವನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟು ಬರುವ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಮಾಡಲಾಗುವುದು ಎಂದು ಒತ್ತಾಯಿಸಿದ್ಥಾರೆ.

English summary
Monkeys attacked two persons in Kamatagi town of the Hungund taluk. Monkeys found in the surrounding area of the Vari Anjaneya temple in the outer zone of Kamatagi People are scared of this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X