ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಧ್ಯಂತರ ಚುನಾವಣೆ: ದೇವೇಗೌಡರಿಗೆ ಸಿದ್ದರಾಮಯ್ಯ ಟಾಂಗ್

|
Google Oneindia Kannada News

Recommended Video

ಮಧ್ಯಂತರ ಚುನಾವಣೆ: ದೇವೇಗೌಡರಿಗೆ ಸಿದ್ದರಾಮಯ್ಯ ಟಾಂಗ್/ ಸಿದ್ದರಾಮಯ್ಯ | Oneindia Kannada

ಬಾಗಲಕೋಟೆ, ಜೂನ್ 27: ಮಧ್ಯಂತರ ಚುನಾವಣೆ ಕುರಿತ ಚರ್ಚೆ ಇನ್ನೂ ಕೊನೆಗೊಂಡಿಲ್ಲ, ಇಂದು ಸಿದ್ದರಾಮಯ್ಯ ಅವರು ಮಧ್ಯಂತರ ಚುನಾವಣೆ ಬಗ್ಗೆ ನೀಡಿರುವ ಹೇಳಿಕೆ ಜೆಡಿಎಸ್ ವರಿಷ್ಠ ದೇವೇಗೌಡ ಅವರಿಗೆ ಟಾಂಗ್ ನೀಡಿದ ಮಾದರಿಯಲ್ಲಿದೆ.

ಬಾಗಲಕೋಟೆಗೆ ಭೇಟಿ ನೀಡುವ ಮುನ್ನಾ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಮಧ್ಯಂತರ ಚುನಾವಣೆ ಬಗ್ಗೆ ಕೆಲವರಿಗೆ ದಿವ್ಯ ಜ್ಞಾನದ ಬಗ್ಗೆ ಮಾಹಿತಿ ಸಿಕ್ಕಿದೆ, ಆದರೆ ನಮಗೆ ಆ ದಿವ್ಯ ಜ್ಞಾನ ಇಲ್ಲ ಎಂದರು.

ಏನ್ ಕೆಲ್ಸ ಮಾಡಿದ್ದಾರೆ ಅಂತ ಬಿಜೆಪಿಗೆ ವೋಟ್ ಹಾಕ್ತೀರಾ? ಸಿದ್ದರಾಮಯ್ಯಏನ್ ಕೆಲ್ಸ ಮಾಡಿದ್ದಾರೆ ಅಂತ ಬಿಜೆಪಿಗೆ ವೋಟ್ ಹಾಕ್ತೀರಾ? ಸಿದ್ದರಾಮಯ್ಯ

ದೇವೇಗೌಡ ಅವರು ಮಧ್ಯಂತರ ಚುನಾವಣೆ ಬಗ್ಗೆ ಮಾತನಾಡಿದ್ದರು, ಆ ನಂತರ ಅದು ಮೈತ್ರಿ ಪಕ್ಷಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಗಿತ್ತು, ಆ ನಂತರ ದೇವೇಗೌಡ ಅವರು ತಮ್ಮ ಹೇಳಿಕೆ ಬದಲಾಯಿಸಿದರು, ಆದರೂ ಆ ಚರ್ಚೆ ನಿಲ್ಲುವ ಸೂಚನೆ ಕಾಣುತ್ತಿಲ್ಲ.

ಡಿಸೆಂಬರ್ ಒಳಗೆ ಸಂಘಟನೆ ಮಾಡಿ ಎಂದಿಲ್ಲ: ಸಿದ್ದರಾಮಯ್ಯ

ಡಿಸೆಂಬರ್ ಒಳಗೆ ಸಂಘಟನೆ ಮಾಡಿ ಎಂದಿಲ್ಲ: ಸಿದ್ದರಾಮಯ್ಯ

ಮುಂದುವರೆದು ಮಾತನಾಡಿದ ಸಿದ್ದರಾಮಯ್ಯ, ಪಕ್ಷ ಸಂಘಟನೆಗೆ ಒತ್ತು ನೀಡುತ್ತಿದ್ದೇವೆ. ಬೂತ್‌ ಹಂತದ ಮೀಟಿಂಗ್ ನಿನ್ನೆಯಷ್ಟೆ ಮುಗಿಸಿದ್ದೇವೆ, ಡಿಸೆಂಬರ್ ಒಳಗೆ ಪಕ್ಷ ಸಂಘಟನೆ ಮಾಡಿ ಎಂದಿಲ್ಲ, ಸಂಘಟನೆ ಚುರುಕುಗೊಳಿಸಿ ಎಂದಷ್ಟೆ ಹೇಳಿದ್ದೇನೆ ಎಂದು ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದರು.

ಮೈತ್ರಿ ಮಾತ್ರ ಸೋಲಿಗೆ ಕಾರಣವಲ್ಲ: ಸಿದ್ದರಾಮಯ್ಯ

ಮೈತ್ರಿ ಮಾತ್ರ ಸೋಲಿಗೆ ಕಾರಣವಲ್ಲ: ಸಿದ್ದರಾಮಯ್ಯ

ಸೋತ ಕಾಂಗ್ರೆಸ್ ಅಭ್ಯರ್ಥಿಗಳ ಸಭೆಯಲ್ಲಿ ಕೆಲವರು ಅವರವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೈತ್ರಿ ಇಂದಲೇ ಸೋಲಾಗಿದೆ ಎಂಬುದು ಸುಳ್ಳು, ಸೋಲಿಗೂ ಮೈತ್ರಿಯೂ ಕಾರಣ ಇರಬಹುದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಷ್ಟೆ ಎಂದು ಅವರು ಹೇಳಿದರು.

ಯಡಿಯೂರಪ್ಪ ಹೇಳಿದ್ದು ಯಾವುದೂ ನಿಜವಾಗಿಲ್ಲ: ಸಿದ್ದರಾಮಯ್ಯಯಡಿಯೂರಪ್ಪ ಹೇಳಿದ್ದು ಯಾವುದೂ ನಿಜವಾಗಿಲ್ಲ: ಸಿದ್ದರಾಮಯ್ಯ

'ಕುಮಾರಸ್ವಾಮಿ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ'

'ಕುಮಾರಸ್ವಾಮಿ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ'

'ಮೋದಿಗೆ ಮತ ಹಾಕಿ ನನ್ನನ್ನು ಕೆಲಸ ಮಾಡಲು ಕೇಳುತ್ತೀರಾ' ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ತಿಳಿಯದು, ತಿಳಿಯದೇ ಪ್ರತಿಕ್ರಿಯಿಸಲಾರೆ ಎಂದು ನುಣುಚಿಕೊಂಡಿದ್ದಾರೆ.

ಬಾದಾಮಿಯಲ್ಲಿ ಕಾಮಗಾರಿಗಳಿಗೆ ಚಾಲನೆ

ಬಾದಾಮಿಯಲ್ಲಿ ಕಾಮಗಾರಿಗಳಿಗೆ ಚಾಲನೆ

ಸಿದ್ದರಾಮಯ್ಯ ಅವರು ಇಂದು ತಮ್ಮ ಕ್ಷೇತ್ರವಾದ ಬಾದಾಮಿಗೆ ಭೇಟಿ ನೀಡಿದ್ದರು, ಅಲ್ಲಿ ಜನ ಸಂಪರ್ಕ ಸಭೆ ನಡೆಸಿ, ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ, ಸಾರ್ವಜನಿಕ ಸಭೆಯನ್ನು ನಡೆಸಿದರು.

ಸಿದ್ದರಾಮಯ್ಯ ಇಷ್ಟೊಂದು ತಲೆಕೆಡಿಸಿಕೊಳ್ಳುತ್ತಿರುವುದಕ್ಕೆ ಇದಾ ಕಾರಣ? ಸಿದ್ದರಾಮಯ್ಯ ಇಷ್ಟೊಂದು ತಲೆಕೆಡಿಸಿಕೊಳ್ಳುತ್ತಿರುವುದಕ್ಕೆ ಇದಾ ಕಾರಣ?

English summary
Siddaramaiah said clear no to mid term election. He said some people have third eye so they can see mid term election, we can not.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X