• search
  • Live TV
ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ: ಗೋವಿಂದ ಕಾರಜೋಳ

|

ಬಾಗಲಕೋಟೆ, ಮೇ 04: ಕೊರೊನಾ ಸೋಂಕಿನ ಆಧಾರದಲ್ಲಿ ಮೂರು ವಲಯಗಳನ್ನಾಗಿ ವಿಂಗಡಿಸಿ ದೇಶಾದ್ಯಂತ ಲಾಕ್‌ಡೌನ್ ಸಡಿಲಗೊಳಿಸಲಾಗಿದೆ. ಕೆಂಪು, ಕಿತ್ತಳೆ ಹಾಗೂ ಹಸಿರು ಹೀಗೆ ಮೂರು ವಲಗಳಲ್ಲಿ ಕೆಂಪು ವಲು ಬಿಟ್ಟು ಉಳಿದ ಎರಡು ವಲಯಗಳಲ್ಲಿಚಲಾಕ್‌ಡೌನ್ ಸಡಿಲಗೊಳಿಸಲಾಗಿದೆ. ಆದರೆ ಕೆಂಪು ವಲಯ ಹಾಗೂ ಹಾಟ್‌ಸ್ಪಾಟ್‌ಗಳಲ್ಲಿ ಲಾಕ್‌ಡೌನ್ ಸಡಿಲಗೊಳಿಸಲಾಗಿಲ್ಲ. ಜಿಲ್ಲೆಯಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಈಗಿದ್ದ ನಿಯಮವನ್ನೇ ಮೇ 17 ವರೆಗೆ ಲಾಕ್‌ಡೌನ್‌ ಮುಂದುವರೆಸಲಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 33 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಲಾಕ್‌ಡೌನ್‌ ಕೆಂಪು ವಲಯದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಿಲ್ಲೆಯಾದ್ಯಂತ ಜಾರಿಗೆ ತರಲು ತೀರ್ಮಾನಿಸಲಾಗಿದೆ. ಮಾಸ್ಕ್ ಧರಿಸದೆ ಮನೆಯಿಂದ ಹೊರಗೆ ಬರುವವರರಿಗೆ ಕಟ್ಟುನಿಟ್ಟಿನ ನಿಗಾ ಇಡುವುಂತೆ ಜಿಲ್ಲಾಡಳಿತ ಸೂಚಿಸಿದೆ.

ಕೊರೋನಾ ಸೋಂಕಿತರ ಸ್ಥಿತಿಗತಿ ತಿಳಿಯಲು ಟ್ಯಾಬ್ ಫೋನ್

ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸದಂತೆ ಅಧಿಕಾರಿಗಳ ಸಭೆ ನಡೆಸಿರುವ ಡಿಸಿಎಂ ಗೋವಿಂದ್ ಕಾರಜೋಳ ಜನರಿಗೆ ಸೋಂಕಿನ ಕುರಿತು ಜಾಗೃತರಾಗಿರುವಂತೆ ಸೂಚಿಸಿದ್ದಾರೆ. ಕಳೆದ ಮಾರ್ಚ 24 ರಿಂದ ಕೇಂದ್ರ ಮತ್ತು ರಾಜ್ಯ ಸರಕಾರ ಕೆಲವು ಕಠಿಣ ಕ್ರಮಕೈಗೊಂಡಿದೆ. ಕೋವಿಡ್ ಸೋಂಕನ್ನು ಇನ್ನಷ್ಟು ನಿಯಂತ್ರಣದಲ್ಲಿಡಲು ಕೆಂಪು, ನೆರಳೆ ಹಾಗೂ ಹಸಿರು ಎಂಬ ಮೂರು ವಲಯಗಳನ್ನಾಗಿ ಮಾಡಿ ಕೆಲವೊಂದು ಸಡಿಲಿಕೆ ಮಾಡುವ ಮೂಲಕ ಮೇ 17 ವರೆಗೆ ಲಾಕ್‍ಡೌನ್ ಮುಂದುವರಿಸಲಾಗಿದೆ.

ಮಾವಾ, ಗುಟ್ಕಾ ತಿಂದು ಉಗುಳುವಂತಿಲ್ಲ

ಮಾವಾ, ಗುಟ್ಕಾ ತಿಂದು ಉಗುಳುವಂತಿಲ್ಲ

ಸಾರ್ವಜನಿಕ ಸ್ಥಳಗಳಲ್ಲಿ ಸುಮಾರು 6 ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಎಲ್ಲಂದರಲ್ಲಿ ಗುಟುಕಾ, ಎಲೆ ಅಡಿಕೆ ತಿಂದು ಉಗುಳಬಾರದು ಎಂದು ಡಿಸಿಎಂ ಗೋವಿಂದ ಕಾರಜೋಳ ಮನವಿ ಮಾಡಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮಾವಾ ಹಾಗೂ ಗುಟ್ಕಾ ತಿಂದು ಉಗುಳುವವರಿಗೆ ದಂಡ ಹಾಕಲಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಜೊತೆಗೆ ಕಡ್ಡಾಯವಾಗಿ ಮಾಸ್ಕ ಧರಿಸದಿದ್ದರೆ 100 ರಿಂದ 500 ರೂ. ಗಳ ವರೆಗೆ ದಂಡ ವಿಧಿಸಲಾಗುತ್ತದೆ. ಸಾರ್ವಜನಿಕರು ಮಾಸ್ಕ್‍ಗಳನ್ನು ಕಡ್ಡಾಯವಾಗಿ ಧರಿಸಬೇಕು. ಧರಿಸದೇ ಇದ್ದಲ್ಲಿ 100 ರೂ. ಗಳ ದಂಡ ವಿಧಿಸಲಾಗುವುದು. 2ನೇ ಬಾರಿ ಮಾಸ್ಕ ಧರಿಸದೇ ಇರುವುದು ಕಂಡುಬಂದಲ್ಲಿ 500 ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ ಎಂದರು.

ಮನೆ ಬಾಗಿಲಿಗೆ ಬ್ಯಾಂಕ್‌ ಹಣ

ಮನೆ ಬಾಗಿಲಿಗೆ ಬ್ಯಾಂಕ್‌ ಹಣ

ಸಾರ್ವಜನಿಕರು ತಮ್ಮ ಬ್ಯಾಂಕ್ ಖಾತೆಯಲ್ಲಿನ ಹಣ ಪಡೆಯಲು ಬ್ಯಾಂಕ್‌ಗಳಿಗೆ ತೆರಳುವ ಬದಲು ಅಂಚೇ ಕಚೇರಿಗೆ ದೂರವಾಣಿ ಮೂಲಕ ಕರೆ ಮಾಡಿದಲ್ಲಿ, ಅಂಚೆ ಇಲಾಖೆಯವರು ಮನೆ ಬಾಗಿಲಿಗೆ ಬಂದು ಹಣ ಸಂದಾಯ ಮಾಡಲಿದ್ದಾರೆ. ಇದರ ಪ್ರಯೋಜ ಸಾರ್ವಜನಿಕರು ಜಿಲ್ಲೆಯಲ್ಲಿ ಪಡೆದುಕೊಳ್ಳಬಹುದಾಗಿದೆ.

ಜಿಲ್ಲೆಯ ಗಡಿಭಾಗಗಳು ಶೀಲ್

ಜಿಲ್ಲೆಯ ಗಡಿಭಾಗಗಳು ಶೀಲ್

ಜಿಲ್ಲೆಯ ಗಡಿಭಾಗಗಳನ್ನು ಶೀಲ್ ಮಾಡಲಾಗಿದೆ. ಕೇಂದ್ರ ಸರಕಾರದ ಆದೇಶದನ್ವಯ ಜಿಲ್ಲೆಯಾದ್ಯಂತ ಮೇ 4 ರಿಂದ 17 ವರೆಗೆ ಮದ್ಯರಾತ್ರಿವರೆಗೆ ಲಾಕ್‌ಡೌನ್‌ ಮುಂದುವರೆಯಲಿದೆ. ರಾತ್ರಿ 7 ರಿಂದ ಬೆಳಿಗ್ಗೆ 7 ವರೆಗೆ ಸಿ.ಆರ್.ಪಿ.ಸಿ ಕಲಂ 144 ವಿಧಿಸಲಾಗಿದೆ. ಜಿಲ್ಲೆಯಲ್ಲಿ ಜರಗುವ ಸಂಜೆ, ಜಾತ್ರೆ ಹಾಗೂ ಸಮಾರಂಭಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ಕೃಷಿ ಚಟುವಟಿಕೆಗಳು ನಡೆಯಲಿದ್ದು, ಬೀಜ ಮತ್ತು ರಸಗೊಬ್ಬರಗಳ ಕೊರತೆ ಇರುವದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆಯ ಕಾಮಗಾರಿಗಳು ಚಾಲ್ತಿಯಲ್ಲಿರುತ್ತವೆ. ಅವಶ್ಯಕ ಹಿಟ್ಟಿನ ಗಿರಣಿ, ಖಾರಾ ಕುಟ್ಟುವ ಯಂತ್ರ, ಅಗತ್ಯ ವಸ್ತುಗಳ ಘಟಕಗಳು, ಬೀಜೋತ್ಪಾದನಾ ಕೇಂದ್ರಗಳು, ಕೈಗಾರಿಕೆಗಳು ನಡೆಯಲಿವೆ ಎಂದರು.

ಒನ್-ವೇ ಪಾಸ್‌ಗೆ ಮಾತ್ರ ಅನುಮತಿ

ಒನ್-ವೇ ಪಾಸ್‌ಗೆ ಮಾತ್ರ ಅನುಮತಿ

ಜಿಲ್ಲೆಯ ಕಾರ್ಮಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಹಾಗೂ ಇತರೆ ವ್ಯಕ್ತಿಗಳು ಬೇರೆ ರಾಜ್ಯಕ್ಕೆ ತೆರಳಬೇಕಾದಲ್ಲಿ ಸೇವಾಸಿಂಧು ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿ ಪಾಸ್ ಪಡೆಯಬಹುದಾಗಿದೆ. ಜಿಲ್ಲೆಯಿಂದ ರಾಜ್ಯದ ಬೇರೆ ಜಿಲ್ಲೆಗೆ ಸ್ವಂತ ವಾಹನಗಳಲ್ಲಿ ಪ್ರಯಾಣಿಸುವವರು ಜಿಲ್ಲೆಯಲ್ಲಿ ಪ್ರಾರಂಭಿಸಿದ ತಂತ್ರಾಂಶದ ಮೂಲಕ ಒನ್-ಟೈಮ್, ಒನ್-ಡೇ, ಒನ್-ವೇ ಗೆ ಮಾತ್ರ ಪಾಸನ್ನು ಅರ್ಜಿ ಸಲ್ಲಿಸಿ ಸಂಬಂಧಿಸಿದ ತಹಶೀಲ್ದಾರರ ಮೂಲಕ ಪಡೆದುಕೊಳ್ಳಬಹುದಾಗಿದೆ.

60 ವರ್ಷ ಮೇಲ್ಪಟ್ಟ ನಾಗರಿಕರ ಸರ್ವೆ

60 ವರ್ಷ ಮೇಲ್ಪಟ್ಟ ನಾಗರಿಕರ ಸರ್ವೆ

ಸರಕಾರದ ಆದೇಶದಂತೆ ಎಲ್ಲ ಕುಟುಂಬಗಳ 60 ವರ್ಷ ಮೇಲ್ಪಟ್ಟ ಬಿಪಿ, ಸಕ್ಕರೆ ಕಾಯಿಲೆ, ಹೃದಯ ರೋಗ, ಗರ್ಭೀಣಿ ಸ್ತ್ರೀಯರ ಆರೋಗ್ಯ ಮಾಹಿತಿ ಸಂಗ್ರಹಿಸಲು ಬಿ.ಎಲ್.ಓ ಹಾಗೂ ಒಬ್ಬ ಹೆಚ್ಚುವರಿ ಶಿಕ್ಷಕರ ತಂಡ ರಚಿಸಿ ಸಮೀಕ್ಷೆ ಕಾರ್ಯ ಪ್ರಾರಂಭಿಸಲಾಗುತ್ತದೆ. ಎಂದಿನಂತೆ ಖಾಸಗಿ ಆಸ್ಪತ್ರೆಗಳು, ಮೆಡಿಕಲ್ ಶಾಪ್ ತೆರೆದಿರುತ್ತವೆ.

ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್

ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್

ಜಿಲ್ಲೆಯ ಬಾಗಲಕೋಟೆ, ಮುಧೋಳ, ಜಮಖಂಡಿ ನಗರ ಮತ್ತು ಮುಗಳಖೋಡ ಗ್ರಾಮದಲ್ಲಿ ಕೋವಿಡ್ ಪ್ರಕರಣಗಳು ಕಂಡುಬಂದಿದ್ದು, ಅಲ್ಲಿ ಈಗಾಗಲೇ ಕಂಟೈನ್‍ಮೆಂಟ್ ಝೋನ್‌ ನಿರ್ಬಂಧ ಹೇರಲಾಗಿದೆ. ಪ್ರತಿಯೊಂದು ಝೋನ್‌ಗಳಿಗೆ ಇನ್ಸಿಡೆಂಟ್ ಕಮಾಂಡರನ್ನು ನೇಮಿಸಲಾಗಿದೆ. ಕಂಟೈನ್‍ಮೆಂಟ್ ಝೋನ್ ನಿರ್ಬಂಧ ಹಿಂಪಡೆಯಲು ಆ ಪ್ರದೇಶದ ಕೊನೆಯ ಪ್ರಕರಣ ದಾಖಲಾದ ದಿನಾಂಕದಿಂದ 28 ದಿನಗಳಲ್ಲಿ ಯಾವುದೇ ಹೊಸ ಪ್ರಕರಣಗಳು ದಾಖಲಾಗದಿದ್ದಲ್ಲಿ ಅವಕಾಶವಿರುತ್ತದೆ. ಬಾಗಲಕೋಟೆ ನಗರದಲ್ಲಿ ಏಪ್ರೀಲ್ 15, ಮುಗಳಖೋಡದಲ್ಲಿ ಏಪ್ರೀಲ್ 12, ಜಮಖಂಡಿ ನಗರದಲ್ಲಿ ಮೇ 2 ಹಾಗೂ ಮುಧೋಳದಲ್ಲಿ ಮೇ 3 ರಂದು ಪ್ರಕರಣಗಳು ದಾಖಲಾಗಿರುತ್ತವೆ.

English summary
The lockdown has been continued until May 17, since Covid cases in the Bagalkot district has increased DCM Govind Karajol said the lockdown would continue till May 17 throughout the Bagalkot district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more