ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಧೋಳ ನಾಯಿಯಿಂದಾದರೂ ಕಾಂಗ್ರೆಸ್ ದೇಶಪ್ರೇಮ ಕಲಿಯಲಿ: ಮೋದಿ

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ, ಮೇ 06: ದೇಶವನ್ನು ತುಂಡು ತುಂಡು ಮಾಡುತ್ತೇವೆ ಎಂದು ಹೇಳಿದವರ ಬಳಿ ಕಾಂಗ್ರೆಸ್‌ ಗೆಳೆತನ ಮಾಡುತ್ತದೆ ಎಂದು ಆರೋಪಿಸಿದ ಮೋದಿ ಅವರು ದೇಶಭಕ್ತಿಯಲ್ಲಿಯೂ ಕೆಟ್ಟ ವಾಸನೆ ಹುಡುಕುವ ಕೀಳು ರಾಜಕಾರಣವನ್ನು ಕಾಂಗ್ರೆಸ್ ಮಾಡುತ್ತಿದೆ‌. ಬಾಗಲಕೋಟೆಯ ಮುಧೋಳ ನಾಯಿಗಳಿಂದಾದರೂ ಕಾಂಗ್ರೆಸ್‌ನವರು ದೇಶಪ್ರೇಮ ಕಲಿಯಬೇಕು ಎಂದರು.

ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಕ್ಕಾಗಿ ಜಾತಿಗಳ‌ ಮಧ್ಯೆ ಜಗಳ ಹಚ್ಚುವ ಕೆಲಸ ಮಾಡುವ ಕಾಂಗ್ರೆಸ್ ಕಾಲ ಮುಗಿಯಲು ಬಂದಿದೆ‌ ಎಂದರು.

ರಾಯಚೂರಿನಲ್ಲಿ ಮೋಡಿ ಮಾಡಿದ ಮೋದಿ, ಮೇರೆ ಮೀರಿದ ಕಾರ್ಯಕರ್ತರ ಉತ್ಸಾಹರಾಯಚೂರಿನಲ್ಲಿ ಮೋಡಿ ಮಾಡಿದ ಮೋದಿ, ಮೇರೆ ಮೀರಿದ ಕಾರ್ಯಕರ್ತರ ಉತ್ಸಾಹ

ಅಲ್ಲಲ್ಲಿ ಸಂದಿಗೊಂದಿಗೆ,ರಾತ್ರಿ ಹೋಗಿ ಒಂದೊಂದು ಸಮುದಾಯದ ಜನರೊಂದಿಗೆ ಚರ್ಚೆ ನಡೆಸಿ ಮತ ಪಡೆಯಲು ಕಸರತ್ತು ನಡೆಸಿದ್ದಾರೆ .ಆದರೆ ಅವರಿಗೆ ಎರಡೂ ಕ್ಷೇತ್ರದಲ್ಲಿ ಸೋಲು ಎದುರಾಗಲಿದೆ ಎಂದು ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ ಮೋದಿ. ರಾಜ್ಯದಲ್ಲಿ ಕಾಂಗ್ರೆಸ್ ಉಳಿಯಲ್ಲ ಎಂದರು.

karnataka elections: Narendra Modi rally in Bagalkote

ಬಿಜೆಪಿ ಸಮಾವೇಶಗಳಿಗೆ ಈ ರೀತಿ ಭಾರಿ ಸಂಖ್ಯೆಯಲ್ಲಿ ಜನ ಸೇರುತ್ತಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನಿದ್ರೆ ಬರುತ್ತಿಲ್ಲ. ಅವರನ್ನು ಮನೆಗೆ ಕಳಿಸಿ, ಅತಿ ಹೆಚ್ಚುತದಾನ ಮಾಡಿ ಬಿಜೆಪಿ ಗೆಲ್ಲಿಸಿ ಎಂದು ಕರೆ ನೀಡಿದರು.

ಅಧಿಕಾರಕ್ಕಾಗಿ ಕರ್ನಾಟಕ ವಿಭಜನೆ‌ ಮಾಡಲು ಹೊರಟ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯನ್ನು ಮನೆ ಮನೆಗೆ ಕಳುಹಿಸುವ ಕಾಲ ಸನ್ನಿಹಿತವಾಗಿದೆ. ಮೇ 15 ರಂದು ಸಂಪೂರ್ಣ ಬಹುಮತದೊಂದಿಗೆ ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದರು.

In Pics : ಕರ್ನಾಟಕದಾದ್ಯಂತ ಬಿಜೆಪಿಯಿಂದ ಭರ್ಜರಿ ಪ್ರಚಾರ

ನಾವು ಬಿಜೆಪಿಯವರು ಯಾವತ್ತಿದ್ದರೂ ಕರ್ನಾಟಕ ಅಜರಾಮರವಾಗಿ ಉಳಿಯುವಂತೆ ಮಾಡುತ್ತೇವೆ. ಐದು ವರ್ಷ ಆಡಳಿತ ನಡೆಸಿದವರಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನರ ಆಶೀರ್ವಾದ ದೊರೆಯದೇ ಬನಶಂಕರಿ ಕ್ಷೇತ್ರಕ್ಕೆ ಓಡಿ ಬಂದಿರುವ ಸಿಎಂಗೆ ಸೋಲು ಖಚಿತ ಎಂದು ವ್ಯಂಗ್ಯ ಮಾಡಿದರು.

ಬಾಗಲಕೋಟೆ-ಧರ್ಮ ಧರ್ಮಗಳ ಮಧ್ಯೆ, ಜಾತಿ-ಜಾತಿಗಳ ಮಧ್ಯೆ ಕಲಹ ತಂದಿಟ್ಟು ಚುನಾವಣೆ ಸಂದರ್ಭದಲ್ಲಿ ಮತಬ್ಯಾಂಕ್ ಮಾಡಿಕೊಳ್ಳಲು ಹೊರಟಿರುವ ಕಾಂಗ್ರೆಸ್ ನವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮೇ 12 ರಂದು ಪಾಠ ಕಲಿಸಲಿದ್ದಾರೆ ಎಂದು ಪ್ರಧಾನಿ ನರೇಂದ್ರ‌ಮೋದಿಯವರು ಹೇಳಿದರು.

English summary
Prime minister Narendra Modi address huge rally in Bagalkote. He lambasted on congress. He said Siddaramiah will loose in two constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X