ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಮಖಂಡಿ ಕ್ಷೇತ್ರದ ಕೈ ಅಭ್ಯರ್ಥಿ ಆಸ್ತಿ, ಆದಾಯ, ಶಿಕ್ಷಣ, ಪ್ರಕರಣಗಳ ಮಾಹಿತಿ

|
Google Oneindia Kannada News

Recommended Video

Jamakhandi By-elections 2018 : ಆನಂದ್ ನ್ಯಾಮಗೌಡರ ಒಟ್ಟಾರೆ ಆಸ್ತಿ ವಿವರ | Oneindia Kannada

ಜಮಖಂಡಿ, ಅಕ್ಟೋಬರ್ 16: ರಾಜಕಾರಣಿಗಳ ಮೇಲೆ ಪ್ರಕರಣಗಳು ಬಹು ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಕೇಸುಗಳಿರದ ರಾಜಕಾರಣಿಗಳು ಬಲು ಅಪರೂಪ ಅಂತಹಾ ಅಪರೂಪದ ಪಟ್ಟಿಗೆ ಸೇರಿದ್ದಾ ಜಮಖಂಡಿ ಕ್ಷೇತ್ರದ ಕೈ ಅಭ್ಯರ್ಥಿ ಆನಂದ್‌ ನ್ಯಾಮಗೌಡ.

ಜಮಖಂಡಿ ಕ್ಷೇತ್ರ ಉಪಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅವರು ನಾಂಪತ್ರದ ಜೊತೆಗೆ ಆಸ್ತಿ ವಿವರ ಸಲ್ಲಿಸಿದ್ದು. ಅದರನ್ವಯ ಅವರ ಮೇಲೆ ಯಾವುದೇ ರೀತಿಯ ಸಿವಿಲ್ ಹಾಗೂ ಕ್ರಿಮಿನಲ್ ಮೊಕದ್ದಮೆಗಳಿಲ್ಲ.

ಮೈಸೂರು ದಸರಾ - ವಿಶೇಷ ಪುರವಣಿ

ಮಾಜಿ ಶಾಸಕ ಸಿದ್ದು ನ್ಯಾಮಗೌಡ ಅವರ ಪುತ್ರರಾಗಿರುವ ಆನಂದ್‌ ನ್ಯಾಮಗೌಡ ಅವರಿಗೆ ಉಪಚುನಾವಣೆಯಲ್ಲಿ ಕೈ ಟಿಕೆಟ್ ನೀಡಲಾಗಿದ್ದು, ಅವರು ಈಗಾಗಲೇ ನಾಮಪತ್ರ ಸಲ್ಲಿಸಿ, ಪ್ರಚಾರ ಆರಂಭಿಸಿದ್ದಾರೆ.

ಶಿವಮೊಗ್ಗ : ಮಾಜಿ ಸಂಸದ ಬಿವೈ ರಾಘವೇಂದ್ರ ಆಸ್ತಿ ದ್ವಿಗುಣವಾಗಿದೆ!ಶಿವಮೊಗ್ಗ : ಮಾಜಿ ಸಂಸದ ಬಿವೈ ರಾಘವೇಂದ್ರ ಆಸ್ತಿ ದ್ವಿಗುಣವಾಗಿದೆ!

ಆನಂದ್‌ ನ್ಯಾಮಗೌಡ ಸಲ್ಲಿಸಿರುವ ಆಸ್ತಿ ವಿವರದ ಪೂರ್ಣ ಮಾಹಿತಿ ಇಲ್ಲಿದೆ...

ಒಟ್ಟು ಆಸ್ತಿ ಮೌಲ್ಯ ಎಷ್ಟು?

ಒಟ್ಟು ಆಸ್ತಿ ಮೌಲ್ಯ ಎಷ್ಟು?

* ಆನಂದ್‌ ನ್ಯಾಮಗೌಡ ಅವರ ಒಟ್ಟು ಸ್ಥಿರ ಹಾಗೂ ಚರಾಸ್ಥಿ ಮೌಲ್ಯ ರೂ.5,24,24,266. ಅವರ ಮಡದಿ ಕೀರ್ತಿ ಆನಂದ್‌ ನ್ಯಾಂಗೌಡ ಅವರ ಒಟ್ಟು ಆಸ್ತಿ ರೂ.10,10,000 ಇದೆ.

* ಆನಂದ್‌ ನ್ಯಾಮಗೌಡ ಅವರ ಮೇಲೆ ಯಾವುದೇ ವಿಧವಾದ ಪ್ರಕರಣಗಳು ದಾಖಲಾಗಿಲ್ಲ. ಅವರು ಬೆಂಗಳೂರು ವಿವಿಯಲ್ಲಿ 2005 ರಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.

* ಆನಂದ್ ನ್ಯಾಮಗೌಡ ಅವರ ಬಳಿ ರೂ. 1 ಲಕ್ಷ ನಗದು ಇದೆ. ಅವರ ಮಡದಿ ಬಳಿ 25000 ನಗದಿದೆ. ಜೊತೆಗೆ ಆನಂದ್‌ ಅವರ ವಿವಿಧ ಬ್ಯಾಂಕ್‌ ಖಾತೆಗಳಲ್ಲಿ 16,99,186 ರೂಪಾಯಿಗಳನ್ನು ಹೊಂದಿದ್ದಾರೆ. ಅವರ ಪತ್ನಿಯವರ ಖಾತೆಯಲ್ಲಿ ಹಣವೇ ಇಲ್ಲ.

ಚಿನ್ನಾಭರಣಗಳ ಒಟ್ಟು ಮೌಲ್ಯ ಎಷ್ಟು

ಚಿನ್ನಾಭರಣಗಳ ಒಟ್ಟು ಮೌಲ್ಯ ಎಷ್ಟು

* ಆನಂದ್‌ ನ್ಯಾಮಗೌಡ ಅವರು ಜಮಖಂಡಿ ಶುಗರ್‌ ಕೇರ್‌ ಎಂಬ ಸಂಸ್ಥೆ ಅಥವಾ ಕಾರ್ಖಾನೆಯಲ್ಲಿ 35,07,080 ಬಂಡವಾಳ ಹೂಡಿದ್ದಾರೆ ಹಾಗೂ ಸೆಕ್ಯುರಿಟಿ ಆಂಡ್ ಫೈನಾನ್ಸ್‌ ಎಂಬ ಕಂಪೆನಿಯಲ್ಲಿ 14,40,000 ಬಂಡವಾಳ ಹೂಡಿದ್ದಾರೆ. ಒಟ್ಟು 49,47,080 ಬಂಡವಾಳ ಹೂಡಿಕೆ ಮೇಲೆ ಆನಂದ್‌ ಅವರ ಮಾಲೀಕತ್ವ ಇದೆ.

* ಇದಲ್ಲದೆ ಜೀವ ವಿಮೆ, ಪೋಸ್ಟ್‌ ಆಫೀಸ್‌ ಉಳಿತಾಯ ಖಾತೆ, ಎನ್‌ಎಸ್‌ಎಸ್‌ ಇನ್ನಿತರೆ ಸರ್ಕಾರಿ ಉಳಿತಾಯ ಹಾಗೂ ಹೂಡಿಕೆಯಲ್ಲಿ ಒಟ್ಟು 24,00,000 ರೂಪಾಯಿಗಳನ್ನು ಆನಂದ್‌ ವಿನಿಯೋಗಿಸಿದ್ದಾರೆ.

* ಆನಂದ್‌ ನ್ಯಾಮಗೌಡ ಅವರ ಬಳಿ ಒಟ್ಟು 5,40,000 ರೂಪಾಯಿ ಮೌಲ್ಯದ ಚಿನ್ನದ ಆಭರಣ ಇದೆ. 48,000 ರೂಪಾಯಿ ಮೌಲ್ಯದ ಬೆಳ್ಳಿ ಸಾಮಗ್ರಿಗಳಿವೆ. ಆನಂದ್ ಅವರ ಪತ್ನಿ ಬಳಿ 9,60,000 ರೂಪಾಯಿ ಮೌಲ್ಯದ ಚಿನ್ನ ಇದ್ದರೆ 20,000 ಮೌಲ್ಯದ ಬೆಳ್ಳಿ ಇದೆ.

ರಾಮನಗರ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ 100 ಕೋಟಿ ರೂ. ಆಸ್ತಿ ಒಡತಿ ರಾಮನಗರ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ 100 ಕೋಟಿ ರೂ. ಆಸ್ತಿ ಒಡತಿ

ಆನಂದ್ ನ್ಯಾಮಗೌಡ ಅವರ ಜಮೀನೆಷ್ಟಿದೆ?

ಆನಂದ್ ನ್ಯಾಮಗೌಡ ಅವರ ಜಮೀನೆಷ್ಟಿದೆ?

* ಆನಂದ್ ಅವರ ಹೆಸರಿನಲ್ಲಿ ಒಟ್ಟು 69 ಎಕರೆ ಕೃಷಿ ಭೂಮಿ ಇದೆ. ಇದರ ಒಟ್ಟು ಮೌಲ್ಯ 3,86,40,000 ರೂಪಾಯಿ ಆಗಿದೆ. ಇದರ ಜೊತೆಗೆ 28,95,676 ರೂಪಾಯಿ ಮೌಲ್ಯದ ಕೃಷಿ ಅಲ್ಲದ ಜಮೀನಿನನ್ನು ಆನಂದ್‌ ಹೊಂದಿದ್ದಾರೆ. ಮಡದಿ ಹೆಸರಲ್ಲಿ ಯಾವುದೇ ಜಮೀನಿಲ್ಲ.

* ಜಮೀನಿನ ಹೊರತಾಗಿ ರಿಯಲ್‌ ಎಸ್ಟೇಟ್‌ ಅಥವಾ ನಿರ್ಮಾಣ ಹಂತದ ಸ್ವತ್ತು 40,00,000 ಮೌಲ್ಯದ್ದಾಗಿದೆ. ಒಟ್ಟ ಎಲ್ಲ ಸ್ಥಿರಾಸ್ತಿಯ ಮೌಲ್ಯ 4,26,49,000 ರೂಪಾಯಿ ಆಗಿದೆ. ಮಡದಿ ಹೆಸರಲ್ಲಿ ಯಾವುದೇ ಸ್ಥಿರಾಸ್ತಿ ಇಲ್ಲ.

ಆನಂದ್‌ ಅವರಿಗೆ ಸಾಲವೂ ಇದೆ

ಆನಂದ್‌ ಅವರಿಗೆ ಸಾಲವೂ ಇದೆ

* ಆನಂದ್‌ ನ್ಯಾಮಗೌಡ ಅವರು ಎರಡು ಬ್ಯಾಂಕುಗಳಿಂದ ಒಟ್ಟು 27,00,000 ಸಾಲ ಪಡೆದಿದ್ದಾರೆ. ಮಡದಿ ಕೀರ್ತಿ ಅವರ ಹೆಸರಲ್ಲಿ ಯಾವುದೇ ಸಾಲ ಇಲ್ಲ. ಆನಂದ್‌ ಹಾಗೂ ಅವರ ಅವಲಂಬಿತರು ಯಾವುದೇ ತೆರಿಗೆ ಬಾಕಿ ಉಳಿಸಿಕೊಂಡಿಲ್ಲ ಎಂದು ಆಸ್ತಿ ವಿವರದಲ್ಲಿ ಅವರು ಘೋಷಿಸಿಕೊಂಡಿದ್ದಾರೆ.

* ಆನಂದ್ ನ್ಯಾಮಗೌಡ ಅವರ ಸ್ಥಿರಾಸ್ತಿ ಒಟ್ಟು 97,84,266 ರೂಪಾಯಿಗಳದ್ದಾಗಿದೆ. ಆನಂದ್ ಅವರ ಪತ್ನಿ ಕೀರ್ತಿ ಅವರ ಸ್ಥಿರಾಸ್ತಿ ಮೌಲ್ಯ 10,10,000 ಆಗಿದೆ.

ಕರ್ನಾಟಕ ಸಚಿವರುಗಳ ಸರಾಸರಿ ಆಸ್ತಿ ಮೌಲ್ಯ 76 ಕೋಟಿ ರು ! ಕರ್ನಾಟಕ ಸಚಿವರುಗಳ ಸರಾಸರಿ ಆಸ್ತಿ ಮೌಲ್ಯ 76 ಕೋಟಿ ರು !

English summary
Jamkhandi constituency assembly by election 2018 congress candidate Anand Nyamagouda declared his assests while submitting nomination. He has total rs.5.25 crore assets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X