ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್ ಮುಖಂಡನ ಹೊಲದಲ್ಲಿ ಅಕ್ರಮ ಸಾರಾಯಿ ವಶ

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ, ಮೇ 09 : ಮತದಾನ ದಿನ ಸಮೀಪಿಸುತ್ತಿದ್ದಂತೆ ಎಲ್ಲೆಡೆ ಅಕ್ರಮ ಹೆಚ್ಚಾಗುತ್ತಿದೆ. ಇದೀಗ ಜಿಲ್ಲೆಯ ಹುನಗುಂದ ಮತ ಕ್ಷೇತ್ರ ವ್ಯಾಪ್ತಿಯ ಗುಡೂರ ಗ್ರಾಮದ ಹೊರ ವಲಯದಲ್ಲಿ ಅಕ್ರಮ ಸರಾಯಿ ಪತ್ತೆಯಾಗಿದ್ದು, 180 ಸಾರಾಯಿ ಬಾಕ್ಸ್ ವಶಪಡಿಸಿಕೊಳ್ಳಲಾಗಿದೆ.

ಕಾಂಗ್ರೆಸ್ ಮುಖಂಡ ಸಂಗಪ್ಪ ಕಿಲ್ಲೆದ ಎಂಬುವವರ ಹೊಲದಲ್ಲಿ ಅಕ್ರಮ ಸರಾಯಿ ಪತ್ತೆಯಾಗಿದೆ. ಅಮೀನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೊಲದ ಮಾಲೀಕ ಸಂಗಪ್ಪ ಕಿಲ್ಲೆದ ಮೇಲೆ ದೂರು ದಾಖಲಾಗಿದೆ.

ಗುಂಡ್ಲುಪೇಟೆ: ಬೈಕ್ ನಲ್ಲಿ ಸಾಗಿಸುತ್ತಿದ್ದ ಅಕ್ರಮ ಮದ್ಯ ವಶಗುಂಡ್ಲುಪೇಟೆ: ಬೈಕ್ ನಲ್ಲಿ ಸಾಗಿಸುತ್ತಿದ್ದ ಅಕ್ರಮ ಮದ್ಯ ವಶ

ಸದ್ಯ ಐದು ಬೈಕ್ ಸೇರಿದಂತೆ 180 ಸಾರಾಯಿ ಬಾಕ್ಸ್ ವಶಪಡಿಸಿಕೊಳ್ಳಲಾಗಿದೆ.

Illegal wine detected in Congress leaders formar

ಹುನಗುಂದ ಕ್ಷೇತ್ರದಲ್ಲಿ ಈಗ ಚುನಾವಣಾ ಬಿಸಿ ಕಾವೇರಿದೆ. ಕಳೆದ ಎರಡು ದಶಕಗಳಲ್ಲಿ ಕ್ಷೇತ್ರದ ಚುನಾವಣಾ ಇತಿಹಾಸ ಗಮನಿಸಿದರೆ ಇಲ್ಲಿ ಸದಾ ಬಿಜೆಪಿ-ಕಾಂಗ್ರೆಸ್ ಸಾಂಪ್ರದಾಯಿಕ ಎದುರಾಳಿಗಳಾಗಿವೆ. ಆದರೆ ಈ ಬಾರಿ ಪಕ್ಷೇತರ ಅಭ್ಯರ್ಥಿಯೂ ಸದ್ದು ಮಾಡುತ್ತಿದ್ದಾರೆ.

ಹಾಗಾಗಿ ತ್ರಿಕೋನ ಪೈಪೋಟಿ ಎದುರಾಗಿ ಎರಡೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ನಿದ್ರೆಗೆಡಿಸಿದೆ.

Illegal wine detected in Congress leaders formar

ಕಾಂಗ್ರೆಸ್‌ನಿಂದ ಶಾಸಕ ವಿಜಯಾನಂದ ಕಾಶಪ್ಪನವರ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಬಿಜೆಪಿಯಿಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಗುತ್ತಿಗೆದಾರ ಎಸ್.ಆರ್.ನವಲಿಹಿರೇಮಠ ಕಣದಲ್ಲಿದ್ದಾರೆ.

English summary
Illegal wine detected in Congress leader's formar. 180 box wine has been seized. Illegal wine was found in Congress's leader Sangappa Killeda land in Gudur village of Bagalkot district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X