ಮಹಾರಾಷ್ಟ್ರದಲ್ಲಿ ಭಾರಿ ಮಳೆ, ಹಿಪ್ಪರಗಿ ಜಲಾಶಯಕ್ಕೆ ಹರಿದುಬಂದಿದೆ ನೀರು
ಬಾಗಲಕೋಟೆ, ಆಗಸ್ಟ್ 1: ಪಕ್ಕದ ಮಹಾರಾಷ್ಟ್ರ ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಹಿಪ್ಪರಗಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.
ಬೆಳಗಾವಿಯಲ್ಲಿ ಭಾರಿ ಮಳೆ: ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ
ಒಟ್ಟು ಆರು ಟಿಎಂಸಿ ಸಾಮರ್ಥ್ಯದ್ದಾಗಿರುವ ಹಿಪ್ಪರಗಿ ಜಲಾಶಯದ ಸದ್ಯದ ಒಳ ಹರಿವು 98,300 ಕ್ಯೂಸೆಕ್ ಆಗಿದ್ದು, 97,300 ಕ್ಯೂಸೆಕ್ ಹೊರ ಹರಿವಾಗಿದೆ. ಜಲಾಶಯಕ್ಕೆ ನೀರಿನ ಪ್ರಮಾಣ ಅಧಿಕವಾದ ಬೆನ್ನಲ್ಲೆ ಪ್ರವಾಹದ ಭೀತಿ ಎದುರಾಗಿದೆ. ಹೀಗಾಗಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಅಲ್ಲದೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನದಿ ತೀರದ ಗ್ರಾಮಸ್ಥರಿಗೆ ಜಿಲ್ಲಾಡಳಿತ ಈಗಾಗಲೇ ಸೂಚನೆ ಕೊಟ್ಟಿದೆ.
ಕೃಷ್ಣಾ ನದಿಯಲ್ಲಿ ಬೆಳಗಾವಿ ಜಿಲ್ಲೆಯ ಮಹಿಷವಾಡಗಿ ಹಾಗೂ ರಬಕವಿ ಬನಹಟ್ಟಿ ಪಟ್ಟಣದ ಮಧ್ಯೆ ಬೋಟ್ ಸಂಚಾರ ಮುಂದುವರೆದಿದೆ.