ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾದಾಮಿಯಲ್ಲಿ ಮಳೆ: ಜಮೀನಿಗೆ ನೀರು ನುಗ್ಗಿ ನಷ್ಟ

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ, ಆಗಸ್ಟ್‌ 4: ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ವರುಣನ ಆರ್ಭಟ ಮುಂದುವರಿದಿದೆ. ಜಿಲ್ಲೆಯ ರಬಕವಿ ಬನಹಟ್ಟಿ, ಮುಧೋಳ, ತೇರದಾಳ, ಬಾದಾಮಿ ಸೇರಿದಂತೆ ಎಲ್ಲಾ ತಾಲ್ಲೂಕುಗಳಲ್ಲಿ ಭರ್ಜರಿ ಮಳೆಯಾಗಿದೆ.

ಬಾದಾಮಿ ತಾಲೂಕಿನಲ್ಲಿ ನಿರಂತರ ಮಳೆಯಿಂದಾಗಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಸೇತುವೆ ಜಲಾವೃತ ಆಗಿದೆ. ಬಾದಾಮಿ- ಮಣಿನಾಗರ ಮಾರ್ಗದ ರಸ್ತೆ ಸಂಪರ್ಕ ಸಹ ಬಂದ್‌ ಆಗಿದೆ.

ಕರಾಟೆ ಚಾಂಪಿಯನ್ ಶಿಪ್‌; ಚಿನ್ನ ಗೆದ್ದ ಬಾಗಲಕೋಟೆ ಸಹೋದರರುಕರಾಟೆ ಚಾಂಪಿಯನ್ ಶಿಪ್‌; ಚಿನ್ನ ಗೆದ್ದ ಬಾಗಲಕೋಟೆ ಸಹೋದರರು

ಯಂಕಂಚಿ, ಮಣಿನಾಗರ ಬಳಿ ಇರುವ ಸೇತುವೆ ಮೇಲೆ ಮಳೆ ನೀರು ರಭಸವಾಗಿ ಹರಿಯುತ್ತಿದೆ. ಆದರೂ ಸಹಾ ಸ್ಥಳೀಯ ಯುವಕರು ಹುಚ್ಚು ಸಾಹಸಕ್ಕೆ ಮುಂದಾಗಿದ್ದು ಕಂಡುಬಂತು. ಅಪಾಯ ಮಟ್ಟದಲ್ಲಿ ನೀರು ಹರಿದು ಬರುತ್ತಿದ್ದರು ವೇಗವಾಗಿ ಹರಿಯುವ ನೀರಲ್ಲಿ ನಡೆದುಕೊಂಡು ಬರುವುದು, ಬೈಕ್ ತೆಗೆದುಕೊಂಡು ಹೋಗುವ ಹುಚ್ಚು ಸಾಹಸಕ್ಕೆ ಯುವಕರು ಮಾಡುತ್ತಿದ್ದಾರೆ.

Heavy Rain Continues In Bagalkot District People In Trouble

ಇದಲ್ಲದೆ ತೇರದಾಳ ಬಸ್ ನಿಲ್ದಾಣದಲ್ಲಿ ಮಳೆಯಿಂದಾಗಿ ಪ್ರಯಾಣಿಕರ ಪರದಾಟ ನಡೆಸಿದರು. ಮಳೆಯಲ್ಲೇ ನೆನೆದು ಓಡೋಡಿ ಬಸ್ ಹತ್ತುತ್ತಿರೊ ದೃಶ್ಯಗಳು ಕಂಡುಬಂದವು. ನಿರಂತರ ಮಳೆಯಿಂದಾಗಿ ಮಳೆ ನೀರು ರಸ್ತೆ ಮೇಲೆ ಹರಿದು ಜನಜೀವನ ಅಸ್ತವ್ಯಸ್ತವಾಗಿದೆ.

ಮನೆಗೆ ನುಗ್ಗಿದ ಮಳೆ ನೀರು; ಗೋವಕೊಪ್ಪ, ಕುಳಗೇರಿ ಗ್ರಾಮಗಳಲ್ಲಿ ಮಳೆಯ ನೀರು ಮನೆಗಳಿಗೆ ನುಗ್ಗಿದ್ದು, ನೀರು ಹೊರ ಹಾಕುವುದಕ್ಕೆ ಹರಸಾಹಸ ಪಡುತ್ತಿದ್ದಾರೆ. ಗುಡಿಸಲು ಹಾಗೂ ತಗಡಿನ ಶೆಡ್​ನಲ್ಲಿ ವಾಸ ಮಾಡುತ್ತಿರುವ ನೀರು ಹೊರ ಹಾಕುವ ಕೆಲಸದಲ್ಲಿ‌ ನಿರತರಾಗಿದ್ದರು. ಜೊತೆಗೆ ಚಿಮ್ಮನಕಟ್ಟಿ ಗ್ರಾಮ ಶಾಲೆಯ ಆವರಣದಲ್ಲಿ ನೀರು ನುಗ್ಗಿ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಪರದಾಡುವಂತಾಗಿದೆ.

ಪರಿಹಾರಕ್ಕಾಗಿ ರೈತರ ಮನವಿ; ಇಳಕಲ್‌ ತಾಲೂಕಿನಲ್ಲೂ ವಿವಿಧೆಡೆ ಬುಧರಾತ್ರಿ ಮಳೆಯಾಗಿದೆ. ಕೋಡಿಹಾಳ ಗ್ರಾಮದಲ್ಲಿ ರಸ್ತೆಗಳಲ್ಲಿ ನೀರು ನಿಂತು ಕೆರೆಯಾಗಿವೆ. ಮನೆಗೆ ನೀರು ನುಗ್ಗಿ ದವಸ ಧಾನ್ಯಗಳು ಹಾಳಾಗಿವೆ. ಹಳ್ಳಗಳು ತುಂಬಿದ್ದ ನೀರು ಜಮೀನುಗಳು ಜಲಾವೃತಗೊಂಡಿದ್ದು, ಎಳ್ಳು, ಸಜ್ಜೆ,ತೊಗರಿ, ಸೂರ್ಯಕಾಂತಿ ಬೆಳೆಗಳು ನೀರಿನಲ್ಲಿ ನಿಂತು ಹಾಳುಗುವ ಹಂತ ತಲುಪಿವೆ. ರೈತರು ಪರಿಹಾರ ಒದಗಿಸಿಕೊಡಬೇಕೆಂದಯ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

Heavy Rain Continues In Bagalkot District People In Trouble

ಬಾಗಲಕೋಟೆ ಯಲ್ಲಿ ಕಳೆದ 24 ಗಂಟೆಗಳಲ್ಲಿ ರಾಜ್ಯದ ನಾನಾ ಕಡೆಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಬಿದ್ದಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಂಗಳೂರು, ಬಳ್ಳಾರಿ, ಮಂಡ್ಯ ಜಿಲ್ಲೆಗಳಲ್ಲೂ ಮಳೆ ಅಬ್ಬರ ಜೋರಾಗಿದೆ.

English summary
The Badami town in the Bagalkot district witnessed heavy rainfall on Wednesday. Water logged in houses and agricultural lands. farmers lost lakhs of rupees in after crop damage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X