ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಕೆಶಿ ಬಂಧನದ ಬಗ್ಗೆ ನನ್ನ ಏನೂ ಕೇಳ್ಬೇಡಿ, ಕಾನೂನು ಪ್ರಕಾರ ಎಲ್ಲಾ ಆಗುತ್ತೆ: ಕಾರಜೋಳ

|
Google Oneindia Kannada News

Recommended Video

ಡಿಕೆಶಿ ಬಂಧನದ ಬಗ್ಗೆ ನನ್ನ ಏನೂ ಕೇಳಬೇಡಿ

ಬೆಂಗಳೂರು, ಸೆಪ್ಟೆಂಬರ್ 6: ದಯವಿಟ್ಟು ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಬಂಧನದ ಬಗ್ಗೆ ನನ್ನನ್ನ ಏನೂ ಕೇಳಬೇಡಿ ಕಾನೂನು ಪ್ರಕಾರ ಏನು ಆಗಬೇಕೋ ಅದು ಆಗುತ್ತೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.

ನಾನು ಕೆಲವೊಮ್ಮೆ ಉತ್ತರ ಕರ್ನಾಟಕದ ಆಡುಭಾಷೆಯಲ್ಲಿ ಕೆಲವು ಶಬ್ದಗಳನ್ನು ಬಳಸುತ್ತೇನೆ, ಅದಕ್ಕೇ ಕನಕಪುರ ಬಂಡೆಗೆ ಡಿಚ್ಚಿ ಎಂದು ತೋರಿಸಿದರೆ ನನ್ನ ಗತಿ ಏನು ಎಂದು ಪ್ರಶ್ನಿಸಿದ್ದಾರೆ.

ಡಿಕೆಶಿಗೆ ಜಾಮೀನು ಸಿಗದಂತೆ ಮಾಡಿದ ಪುತ್ತೂರಿನ ವಕೀಲ ಇವರೇ..!ಡಿಕೆಶಿಗೆ ಜಾಮೀನು ಸಿಗದಂತೆ ಮಾಡಿದ ಪುತ್ತೂರಿನ ವಕೀಲ ಇವರೇ..!

ಡಿಕೆ ಶಿವಕುಮಾರ್ ಅವರ ಬಂಧನದ ಕುರಿತು ಬಾಗಲಕೋಟೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು ಕಾನೂನು ಪ್ರಕಾರ ಏನು ಆಗಬೇಕೋ ಆಗುತ್ತೆ, ಇದರ ಬಗ್ಗೆ ನನ್ನನ್ನು ಏನೂ ಕೇಳಬೇಡಿ ಎಂದು ಹೇಳಿದ್ದಾರೆ.

Govind Karjol Says Dont Ask Me Anything About DK Shivakumar Arrest

ಇನ್ನು ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ವಿಚಾರ ಸಂಬಂಧ ಮಾತನಾಡಿರುವ ಅವರು ಈ ಕುರಿತು ಎಲ್ಲಾ ಶಾಸಕರನ್ನು ಕರೆದು ಸಭೆ ನಡೆಸಿ ಸೂಚನೆ ನೀಡಿದ್ದೇನೆ.

ಅರ್ಹ ಫಲಾನುಭವಿಗಳಿಗೆ ಎಲ್ಲಾ ಸೌಲಭ್ಯ ಸಿಗುವಂತೆ ನೋಡಿಕೊಳ್ಳಲಾಗುತ್ತದೆ ಎಂದರು. ಇನ್ನು ಸಿದ್ದರಾಮಯ್ಯ ಅವರ ಮಧ್ಯಂತರ ಚುನಾವಣೆ ಹೇಳಿಕೆ ಕುರಿತು ಮಾತನಾಡಿರುವ ಅವರು ಯಾವ ಕಾರಣಕ್ಕೂ ಮಧ್ಯಂತರ ಚುನಾವಣೆ ನಡೆಯುವುದಿಲ್ಲ.

ಕಾಂಗ್ರೆಸ್ ಖಾಲಿ ಇದೆ, ಮಧ್ಯಂತರ ಚುನಾವಣೆಯ ಜಪ ಮಾಡುತ್ತಿದೆ. ಆದರೆ ಯಾವುದೇ ಕಾರಣಕ್ಕೂ ಅದು ನಡೆಯುವುದಿಲ್ಲ ಯಡಿಯೂರಪ್ಪ ನಾಯಕತ್ವದಲ್ಲಿ ಅವಧಿಯನ್ನು ಪೂರ್ಣಗೊಳಿಸುತ್ತೇವೆ ಎಂದು ತಿಳಿಸಿದರು.

English summary
Deputy Chief minister Govind Karjol Said that Please Dont Ask Anything About DK Shivakumar Arrest case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X