ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸರೆಂದು ನಂಬಿಸಿ ಚಿನ್ನ ದೋಚಿ ಪರಾರಿಯಾದ ಕಳ್ಳರು

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ, ಜುಲೈ 25: ಪೊಲೀಸರೆಂದು ನಂಬಿಸಿ ದಾರಿಯಲ್ಲಿ ಹೋಗುತ್ತಿದ್ದವರಿಂದ ಚಿನ್ನ ದೋಚಿ ಪರಾರಿಯಾಗಿರುವ ಘಟನೆ ಬಾಗಲಕೋಟೆ ನಗರದ ವಿದ್ಯಾಗಿರಿಯಲ್ಲಿ ನಡೆದಿದೆ‌. ವಿದ್ಯಾಗಿರಿಯ 18ನೇ ಕ್ರಾಸ್‌ನ ಅಯೋಧ್ಯೆ ಹೋಟೆಲ್ ಎದುರು ಈ ಘಟನೆ ನಡೆದಿದೆ.

 ಮೈಸೂರಿನಲ್ಲಿ ಚಾಲಕನನ್ನು ಬೆದರಿಸಿ ಕಾರು ಕದ್ದು ಪರಾರಿ ಮೈಸೂರಿನಲ್ಲಿ ಚಾಲಕನನ್ನು ಬೆದರಿಸಿ ಕಾರು ಕದ್ದು ಪರಾರಿ

ವಸಂತ ಕೋನರೆಡ್ಡಿ ಹಾಗೂ ವಿಠ್ಟಲ್ ಬೆನಕಟ್ಟಿ ಎಂಬುವರು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೈಕ್ ಮೇಲೆ ಬಂದ ಇಬ್ಬರು ಅಪರಿಚಿತರು, ತಾವು ಪೊಲೀಸರೆಂದು ಐಡಿ ಕಾರ್ಡ್ ತೋರಿಸಿದ್ದಾರೆ. ಈ ಏರಿಯಾದಲ್ಲಿ ಕಳ್ಳತನವಾಗಿದೆ, ಈ ದಾರಿಯಲ್ಲಿ ಹೋಗಬೇಡಿ, ಚಿನ್ನ ಹಾಕಿಕೊಂಡು ನಡೆದಾಡಬೇಡಿ, ಜೇಬಿನಲ್ಲಿಟ್ಟುಕೊಂಡು ಹೋಗಿ ಎಂದು ವಸಂತ ಮತ್ತು ವಿಠ್ಠಲ್ ಅವರಿಗೆ ಹೇಳಿದ್ದಾರೆ.

Gold theft in the name of police in vidyanagar

ಇವರಿಬ್ಬರೂ ಒಡವೆಗಳನ್ನು ಬಿಚ್ಚಿ ಜೇಬಿಗೆ ಹಾಕಿಕೊಳ್ಳುತ್ತಿರುವಾಗ ಅವರಿಂದ ಚಿನ್ನವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಇಬ್ಬರಿಂದಲೂ ಸುಮಾರು 45 ಗ್ರಾಂ ಚಿನ್ನ ದೋಚಲಾಗಿದೆ. ಸುದ್ದಿ ತಿಳಿದ ನವನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

English summary
Thieves stole gold in the name of police officers. By showing the id card as police officers they stole 45grams gold from two people. The incident took place in Vidyagiri, Bagalkot city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X