ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವಾಸಮತದಲ್ಲಿ ಬಿಜೆಪಿ ಶಾಸಕರಿಂದ ಮೈತ್ರಿ ಸರ್ಕಾರಕ್ಕೆ ಬೆಂಬಲ!

|
Google Oneindia Kannada News

ಬಾಗಲಕೋಟೆ, ಜುಲೈ 17 : ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ಗುರುವಾರ ವಿಶ್ವಾಸಮತಯಾಚನೆ ಮಾಡಲಿದ್ದಾರೆ. ಬಿಜೆಪಿಯ ನಾಲ್ಕೈದು ಶಾಸಕರು ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡುವ ಸಾಧ್ಯತೆ ಇದೆ ಎಂಬ ಅಚ್ಚರಿಯ ಹೇಳಿಕೆಯನ್ನು ಕಾಂಗ್ರೆಸ್ ನಾಯಕರೊಬ್ಬರು ನೀಡಿದ್ದಾರೆ.

ಬುಧವಾರ ಬಾಗಲಕೋಟೆಯಲ್ಲಿ ಮಾತನಾಡಿದ ಮಾಜಿ ಸಚಿವ ಬಸವರಾಜ ರಾಯರೆಡ್ಡಿ, "ನಾಳೆ ವಿಶ್ವಾಸಮತಯಾಚನೆ ವೇಳೆ ಏನು ಬೇಕಾದರೂ ಆಗಬಹುದು. ಬಿಜೆಪಿಯವರು ನಾಲ್ಕೈದು ಜನರು ನಮಗೆ ಬೆಂಬಲಿಸಬಹುದು" ಎಂದರು.

ರಾಜೀನಾಮೆ ವಾಪಸ್ ಪಡೆಯಲಿದ್ದಾರೆ ರಾಮಲಿಂಗಾ ರೆಡ್ಡಿ?ರಾಜೀನಾಮೆ ವಾಪಸ್ ಪಡೆಯಲಿದ್ದಾರೆ ರಾಮಲಿಂಗಾ ರೆಡ್ಡಿ?

"ಬಿಜೆಪಿಯವರಲ್ಲೂ ಆಪರೇಷನ್ ಮಾಡಿದ್ಧೇವೆ ಎಂದು ಈಗಾಗಲೇ ಸಿಎಂ ಕುಮಾರಸ್ವಾಮಿ ನಮಗೆ ಹೇಳಿದ್ದಾರೆ. ಹೀಗಾಗಿ ವಿಶ್ವಾಸಮತಯಾಚನೆ ವೇಳೆ ಬಿಜೆಪಿಯ ಕೆಲ ಶಾಸಕರು ನಮ್ಮ ಪರವಾಗಿ ಕೈ ಎತ್ತಬಹುದು" ಎಂದು ಹೇಳಿ ಅಚ್ಚರಿ ಮೂಡಿಸಿದರು.

ಸ್ಪೀಕರ್ ಜತೆ ಸಿದ್ದರಾಮಯ್ಯ, ಕುಮಾರಸ್ವಾಮಿ ಬಿಸಿ ಬಿಸಿ ಚರ್ಚೆಸ್ಪೀಕರ್ ಜತೆ ಸಿದ್ದರಾಮಯ್ಯ, ಕುಮಾರಸ್ವಾಮಿ ಬಿಸಿ ಬಿಸಿ ಚರ್ಚೆ

Former minister Basavaraj Rayareddy comment on floor test

"ಸುಪ್ರೀಂಕೋರ್ಟ್‌ ತೀರ್ಪಿನಿಂದಾಗಿ ನಮಗೆ ಯಾವುದೇ ಧಕ್ಕೆ ಇಲ್ಲ. ವಿಪ್ ಜಾರಿ ಮಾಡುವುದು ಆಯಾ ಪಕ್ಷಗಳ ಸಂವಿಧಾನಿಕ ಹಕ್ಕು. ಕಲಾಪಕ್ಕೆ ಭಾಗಿಯಾಗುವ ವಿಚಾರ ಶಾಸಕರಿಗೆ ಬಿಟ್ಟಿದ್ದು. ಶಾಸಕರ ರಾಜೀನಾಮೆ ಅಂಗೀಕಾರ, ತಿರಸ್ಕಾರ ಸ್ಪೀಕರ್‌ಗೆ ಬಿಟ್ಟಿದ್ದು" ಎಂದು ರಾಯರೆಡ್ಡಿ ಹೇಳಿದರು.

ವಿಶ್ವಾಸಮತಯಾಚನೆಗೆ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಗೈರುವಿಶ್ವಾಸಮತಯಾಚನೆಗೆ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಗೈರು

"ವಿಶ್ವಾಸಮತಯಾಚನೆಯ ವೇಳೆ ಏನು ಬೇಕಾದರೂ ಆಗಬಹುದು. ನಮ್ಮವರೇ ವಾಪಸ್ ಬಂದು ನಮಗೆ ಬೆಂಬಲ ನೀಡಬಹುದು. ಬಹುಮತ ಸಾಬೀತು ಮಾಡುವಾಗ ಏನಾಗಲಿದೆ? ಎಂದು ಕಾದು ನೋಡಿ" ಎಂದು ತಿಳಿಸಿದರು.

ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಗುರುವಾರ ಬೆಳಗ್ಗೆ 11ಗಂಟೆಗೆ ವಿಧಾನಸೌಧದಲ್ಲಿ ವಿಶ್ವಾಸಮತಯಾಚನೆ ಮಾಡಲಿದ್ದಾರೆ. 15 ಶಾಸಕರ ರಾಜೀನಾಮೆ ಬಳಿಕ ಮೈತ್ರಿ ಸರ್ಕಾರಕ್ಕೆ ಬಹುಮತ ಇದೆಯೋ?, ಇಲ್ಲವೋ? ಎಂದು ಕಾದು ನೋಡಬೇಕಿದೆ.

English summary
Congress leader and Former minister Basavaraj Rayareddy said that Congress-JD(S) government will get support from 4 to 5 BJP MLA's during the floor test on July 18, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X