ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏನ್ ಸಿದ್ರಾಮಣ್ಣ, ಪ್ರಕೃತಿ ವಿಕೋಪ ಬಿಎಸ್ವೈ ಅವರನ್ನು ಕೇಳ್ಕೊಂಡು ಬರುತ್ತಾ?

|
Google Oneindia Kannada News

ಬಾಗಲಕೋಟೆ, ಆ 20: ರಾಜ್ಯದಲ್ಲಿನ ಬಹುತೇಕ ಜಿಲ್ಲೆಗಳ ಮಳೆ, ಪ್ರವಾಹದ ರುದ್ರ ನರ್ತನಕ್ಕೂ, ಯಡಿಯೂರಪ್ಪ ಮುಖ್ಯಮಂತ್ರಿ ಆಗಿರುವುದಕ್ಕೂ, ಮಾಜಿ ಸಿದ್ದರಾಮಯ್ಯ ಒಂದಕ್ಕೊಂದು ತುಲನೆ ಮಾಡಿದ್ದಾರೆ.

ಜಿಲ್ಲೆಯ ಮತ್ತು ತಾವು ಪ್ರತಿನಿಧಿಸುವ ಬಾದಾಮಿ ಕ್ಷೇತ್ರದ ಊರುಗಳಲ್ಲಿನ ನೆರೆ ಸಂತ್ರಸ್ತರ ಸಮಸ್ಯೆಯನ್ನು ಆಲಿಸುತ್ತಾ "2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೂ ಪ್ರವಾಹ ಬಂತು, 2019ರಲ್ಲೂ ಪ್ರವಾಹ ಬಂದಿದೆ. ಈ ಬಾರಿ ಇನ್ನೂ ಹೆಚ್ಚಿನ ಪ್ರವಾಹ ಬಂದಿದೆ" ಎಂದು ಸಿದ್ದರಾಮಯ್ಯ ಹೇಳಿದರು.

ಬಾದಾಮಿಯಲ್ಲಿ ಸಿದ್ದರಾಮಯ್ಯ: ಪ್ರವಾಹ ಸಂತ್ರಸ್ಥರ ಅವಹಾಲು ಸ್ವೀಕಾರಬಾದಾಮಿಯಲ್ಲಿ ಸಿದ್ದರಾಮಯ್ಯ: ಪ್ರವಾಹ ಸಂತ್ರಸ್ಥರ ಅವಹಾಲು ಸ್ವೀಕಾರ

"ಕಳಪೆ ಗುಣಮಟ್ಟದ ಕಾಮಗಾರಿಯಿಂದ ಹಿಂದೆ ಕಟ್ಟಿಸಿಕೊಟ್ಟ ಮನೆಗಳಿಗೆ ಹೋಗಿಲ್ಲ ಎಂದು ನೀವು ಹೇಳುತ್ತಿದ್ದೀರಿ. ನಿಮ್ಮ ಪ್ರತಿನಿಧಿಯಾಗಿ ಸರಕಾರಕ್ಕೆ ಒತ್ತಡ ತರುತ್ತೇನೆ. ಸರಕಾರ ಎಷ್ಟರ ಮಟ್ಟಿಗೆ ಸ್ಪಂದಿಸುತ್ತದೆ ಎನ್ನುವುದು ಗೊತ್ತಿಲ್ಲ" ಎಂದು ಸಿದ್ದರಾಮಯ್ಯ, ಗ್ರಾಮಸ್ಥರಿಗೆ ಹೇಳಿದರು.

Flood In Karnataka 2008 and 2019: Both Time Yediyurappa Was CM, Siddaramaiah

ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ವೈದ್ಯರ ಸೂಚನೆ ಮೇರೆಗೆ ವಿಶ್ರಾಂತಿಯಲ್ಲಿದ್ದ ಸಿದ್ದರಾಮಯ್ಯ, ಬಾದಾಮಿ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಪ್ರವಾಹ ಸಂತ್ರಸ್ತರನ್ನು ಭೇಟಿ ಮಾಡಿದ ಸಿದ್ದರಾಮಯ್ಯ ಅವರ ಅವಹಾಲುಗಳನ್ನು ಕೇಳಿಸಿ, ಅವರಿಗೆ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಕಣ್ಣಿನ ಆಪರೇಷನ್ ಆಗಿದ್ದ ಕಾರಣ ಸಿದ್ದರಾಮಯ್ಯ ಅವರು ಪ್ರವಾಹ ಸಮಯದಲ್ಲಿ ತಮ್ಮ ಕ್ಷೇತ್ರ ಬಾದಾಮಿಗೆ ಹೋಗಲಾಗಿರಲಿಲ್ಲ, ಹಾಗಾಗಿ ಅವರ ಮಗ ಯತೀಂದ್ರ ಸಿದ್ದರಾಮಯ್ಯ ಅವರನ್ನು ಬಾದಾಮಿಗೆ ಕಳುಹಿಸಿದ್ದರು. ಇದೀಗ ಅವರೇ ಖುದ್ದು ಬಾದಾಮಿಗೆ ಹೋಗಿದ್ದಾರೆ.

ಮುಖ್ಯಮಂತ್ರಿಗೆ ಅವಮಾನ: ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಕಿಡಿಮುಖ್ಯಮಂತ್ರಿಗೆ ಅವಮಾನ: ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಕಿಡಿ

ನೆರೆ ಪರಿಹಾರದ ವಿಚಾರದಲ್ಲಿ, ಈ ಹಿಂದಿನ ಯಾವ ಸರ್ಕಾರಗಳೂ ನೆರೆ ಅಥವಾ ಬರ ಪರಿಸ್ಥಿತಿ ಎದುರಾದಾಗ ರಾಜ್ಯವನ್ನು ನಿರ್ಲಕ್ಷ್ಯ ಮಾಡಿರಲಿಲ್ಲ. ಆದರೆ, ಕೇಂದ್ರ ಸರ್ಕಾರ ರಾಜ್ಯವನ್ನು ನಿರ್ಲಕ್ಷಿಸಿದ್ದಲ್ಲದೆ, ಮುಖ್ಯಮಂತ್ರಿಯನ್ನು ಅವಮಾನಿಸಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದರು.

English summary
Flood In Karnataka 2008 and 2019: Both Time Yediyurappa Was Chief Minister, Former CM Siddaramaiah blames BSY for Natural disaster.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X