ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಗಲಕೋಟೆ: ಮಗಳನ್ನು ರಕ್ಷಿಸಲು ಹೋದ ತಂದೆಯೂ ನೀರುಪಾಲು

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ, ಜುಲೈ.04: ಬೈಕ್ ನಿಂದ ಪುಟಿದು ನದಿಗೆ ಬಿದ್ದ ಮಗಳನ್ನು ರಕ್ಷಿಸಲು ಹೋಗಿ ತಂದೆ ಹಾಗೂ ಪುಟ್ಟ ಮಗಳು ಇಬ್ಬರೂ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ನಡೆದಿದೆ.

3 ವರ್ಷದ ಆನಮ್ ಹಾಗೂ 29 ವರ್ಷದ ದಸ್ತಗೀರ್ ಗೌಂಡಿ ಎಂಬುವರೇ ಮೃತ ದುರ್ದೈವಿಗಳು. ತಂದೆ ದಸ್ತಗೀರ್ ಗೌಂಡಿ, ಚಿಕ್ಕ ಗಲಗಲಿ ಗ್ರಾಮದ ಶಾಲೆಗೆ ಹೋಗಿ ಮಗಳನ್ನು ಕರೆದುಕೊಂಡು ಬೈಕ್ ನಲ್ಲಿ ಮನೆಗೆ ವಾಪಸ್ಸಾಗುವ ವೇಳೆ, ಈ ಘಟನೆ ನಡೆದಿದೆ.

ಧಿಕ್ಕರಿಸುವ ಮಕ್ಕಳನ್ನೇ ಮುದ್ದಿಸುವ ಹುಚ್ಚು ಆಸಾಮಿ ಅಪ್ಪ!ಧಿಕ್ಕರಿಸುವ ಮಕ್ಕಳನ್ನೇ ಮುದ್ದಿಸುವ ಹುಚ್ಚು ಆಸಾಮಿ ಅಪ್ಪ!

ಬೈಕ್ ಸ್ವಲ್ಪ ವೇಗವಾಗಿ ಚಲಿಸುತ್ತಿದ್ದುದರಿಂದ ಬೈಕ್ ಮೇಲಿದ್ದ ಆನಮ್ ಪುಟಿದು ನೇರವಾಗಿ ಕೃಷ್ಣಾ ನದಿಯಲ್ಲಿ ಬಿದ್ದಿದ್ದಾಳೆ. ತಕ್ಷಣ ಮಗಳನ್ನು ರಕ್ಷಿಸಲು ನದಿಗೆ ಹಾರಿದ ತಂದೆ ದಸ್ತಗೀರ್ ಸಹ ಮಗಳ ಜೊತೆ ನೀರುಪಾಲಾಗಿದ್ದಾರೆ.

Father has died to save his daughter in Bagalkote

ಸದ್ಯ ತಂದೆ-ಮಗಳ ಶವಗಳನ್ನು ಹೊರತಗೆಯಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಸೇತುವೆಯ ಎರಡು ಬದಿಯಲ್ಲಿ ತಡೆಗೋಡೆ ಇಲ್ಲದಿರುವುದೇ ಈ ದುರಂತಕ್ಕೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಎಸ್.ಪಿ ರಿಷ್ಯಂತ್ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.

English summary
Father has died to save his daughter. The incident occurred in Galagali village in Belagi taluk at Bagalkote district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X