ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೇಟಾ ತಯಾರಿಯೇ ಕುಟುಂಬದ ಕಾಯಕ; ಮೋದಿ, ರಾಹುಲ್‌ಗೂ ಮೆಚ್ಚುಗೆ

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ, ಜೂನ್ 29: ಅವರದ್ದು ಪೇಟಾ ತಯಾರು ಮಾಡುವ ಕುಟುಂಬ. ಹಲವು ದಶಕಗಳಿಂದ ಹಲವಾರು ನಾಯಕರಿಗೆ ಪೇಟಾ ತೊಡಿಸಿದೆ ಆ ಕುಟುಂಬ. ಕುಟುಂಬದ ಪೇಟಾ ತಯಾರಿಕೆ ಕಲೆಗೆ ದೇಶದ ನಾನಾ ನಾಯಕರು ಮೆಚ್ಚುಗೆ ಸೂಚಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರಿಗೆ ಈ ಕುಟುಂಬ ಪೇಟಾ ತೊಡಿಸಿದೆ. ದೇಶವಲ್ಲದೇ ಕರ್ನಾಟಕ ರಾಜ್ಯದಲ್ಲಿಯೂ ಅನೇಕ ರಾಜಕೀಯ ನಾಯಕರಿಗೆ ಫ್ಯಾಮಿಲಿ ಪೇಟಾ ತೊಡಿಸಿದೆ.

ಪೇಟಾ ತಯಾರಿಯಲ್ಲಿ ಪ್ರಸಿದ್ಧಿ ಪಡೆದಿರುವ ಮಹಾರಾಷ್ಟ್ರದ ಸೊಲ್ಹಾಪುರ ರಾಜಕುಮಾರ್ ಪವಾರ್ ಫ್ಯಾಮಿಲಿ ಬಾಗಲಕೋಟೆಗೆ ಆಗಮಿಸಿತ್ತು. ಆಗ ಅವರು ತಮ್ಮ ಪೇಟಾ ತಯಾರಿಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ನೋಡುಗರ ಕಣ್ಮನ ಸೆಳೆಯುವ ಪೇಟಾ

ನೋಡುಗರ ಕಣ್ಮನ ಸೆಳೆಯುವ ಪೇಟಾ

ಕ್ಷಣಾರ್ಧದಲ್ಲಿ ಪೇಟಾ ತೊಡಿಸುವ ಫ್ಯಾಮಿಲಿ ಇದು. ಅಂದಹಾಗೆ ಇದು ರಾಜಕುಮಾರ್ ಪವಾರ್ ಫ್ಯಾಮಿಲಿಯ ಕಥೆ. ಅನೇಕ ಕಡೆಗಳಲ್ಲಿ ಪೇಟಾ ತೊಟ್ಟವರನ್ನು ನೋಡಿದ್ದೀವಿ.‌ ಅದರಲ್ಲೂ ಬಹಳಷ್ಟು ಚೆನ್ನಾಗಿ ಪೇಟಾ ತೊಡಿಸುತ್ತಾರೆ ಅಂದರೆ ಸಾಕು ಅವರನ್ನು ಎಲ್ಲಿದ್ದರೂ ಹುಡುಕಿ ಕರೆದುಕೊಂಡು ಬರುತ್ತಾರೆ. ಮಹಾರಾಷ್ಟ್ರದ ಸೊಲ್ಹಾಪುರ ರಾಜಕುಮಾರ್ ಪವಾರ್ ಫ್ಯಾಮಿಲಿ ಹಲವು ದಶಕಗಳಿಂದ ಈ ಪೇಟಾ ತೊಡಿಸುವ ಕಾಯಕ ಮಾಡಿಕೊಂಡು ಬರುತ್ತಿದೆ. ಆದರೆ ಇಲ್ಲಿ ವಿಶೇಷ ಅಂದರೆ ಈ ಪವಾರ್ ಫ್ಯಾಮಿಲಿ ತೊಡಿಸುವ ಪೇಟಾಗೆ ರಾಜ್ಯ, ದೇಶ ಹಾಗೂ ಹೊರ ದೇಶಗಳಲ್ಲೂ ಭಾರೀ ಬೇಡಿಕೆ ಇದೆ.

ದೇವೆಗೌಡರಿಗೂ ಪೇಟಾ ತೊಡಿಸೋದು ಪವಾರ್ ಫ್ಯಾಮಿಲಿ

ದೇವೆಗೌಡರಿಗೂ ಪೇಟಾ ತೊಡಿಸೋದು ಪವಾರ್ ಫ್ಯಾಮಿಲಿ

ದೇಶದ ಪ್ರಧಾನಿ ನರೇಂದ್ರ‌ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿ ರಾಜ್ಯದ ನಾಯಕರಾದ ಯಡಿಯೂರಪ್ಪ, ದೇವೆಗೌಡರಿಗೂ ಪೇಟಾ ತೊಡಿಸೋದು ಇದೇ ಪವಾರ್ ಫ್ಯಾಮಿಲಿ. "ಬೇರೆ ಬೇರೆ ಕಡೆಗಳಲ್ಲಿ ನಾವು ಪೇಟಾಗಳನ್ನು ತೊಡಿಸಿದ್ದೇವು. ಆ ಪೇಟಾ ಇಷ್ಟಪಟ್ಟು ನಮ್ಮನ್ನು ಸಂಪರ್ಕ ಮಾಡಿ ದೊಡ್ಡ ದೊಡ್ಡ ಗಣ್ಯರು ನಮ್ಮಿಂದ ಪೇಟಾ ತೊಟ್ಟುಕೊಂಡಿದ್ದಾರೆ. ನಮ್ಮಿಂದ ಪೇಟಾ ತೊಟ್ಟುಕೊಳ್ಳಲು ಇಷ್ಟ ಪಡುತ್ತಾರೆ. ಅವರಿಗೆ ಖುಷಿಯಾದಷ್ಟು ನಮಗೆ ಹಣ ಕೊಡುತ್ತಾರೆ" ಎಂದು ರಾಜಕುಮಾರ್ ಪವಾರ್ ಕುಟುಂಬ ಹೇಳಿದೆ.

ಇವರು ತೊಡಿಸುವ ಪೇಟಾಗೆ ಭಾರೀ ಬೇಡಿಕೆ

ಇವರು ತೊಡಿಸುವ ಪೇಟಾಗೆ ಭಾರೀ ಬೇಡಿಕೆ

ಇನ್ನು ಪವಾರ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಿಮ್ಮ ಪೇಟಾ ಬಗ್ಗೆ ನಾನು ಬಹಳ ಕೇಳಿದ್ದೇನೆ. ಈ ಬಾರಿ ನಿಮ್ಮ ಟೋಪಿ ನನಗೆ ಕೊಡಿ ಅಂತಾ ನನ್ನ ಟೋಪಿ ಪಡೆದುಕೊಂಡಿದ್ದರಂತೆ ಸೊಲ್ಹಾಪುರದಲ್ಲಿರುವ ಪವಾರ್ ಕುಟುಂಬದ ಕಡೆ ನೂರಿಂದ ಹಿಡಿದು 10 ಸಾವಿರ ಮೌಲ್ಯದ ಪೇಟಾಗಳು, ಇವರ ಬಳಿ 50ಕ್ಕೂ ಅಧಿಕ ಜನರು ಕೆಲಸ ಕೂಡಾ ಮಾಡುತ್ತಾರಂತೆ. ದೇಶವಷ್ಟೇ ಅಲ್ಲದೇ ವಿದೇಶಗಳಲ್ಲೂ ಇವರು ತೊಡಿಸುವ ಪೇಟಾಗೆ ಭಾರೀ ಬೇಡಿಕೆ ಇದೆಯಂತೆ. ಹೊರ ದೇಶಗಳಲ್ಲಿ ನಡೆಯುವ ಹಿಂದೂ ಮದುವೆ ಸಮಾರಂಭಗಳಿಗೆ ಪೇಟಾ ತೊಡಿಸುವ ಸಲುವಾಗಿ ಪವಾರ್ ಫ್ಯಾಮಿಲಿಯನ್ನ ಬುಕ್ ಮಾಡುತ್ತಾರೆ. ಇನ್ನು ಪವಾರ್ ಫ್ಯಾಮಿಲಿ ಬಗ್ಗೆ ಹಲವರು ಸಾಕಷ್ಟು ಅಭಿಮಾನ ಹೊಂದಿದ್ದಾರೆ.

ನಮ್ಮ‌ ಧರ್ಮದ ಸಂಸ್ಕೃತಿ ಪೇಟಾ

ನಮ್ಮ‌ ಧರ್ಮದ ಸಂಸ್ಕೃತಿ ಪೇಟಾ

ಒಟ್ಟಾರೆ ಪೇಟಾ ತೊಡಿಸೋಕು ಸಾಕಷ್ಟು ಜನ ಸಿಗುತ್ತಾರೆ. ಆದರೆ ನೋಡಿದ ತಕ್ಷಣ ಆಕರ್ಷಿಸುವ ರೀತಿಯಲ್ಲಿ ತೊಡಿಸುವವರ ಪೈಕಿ ಪವಾರ್ ಫ್ಯಾಮಿಲಿ ಕೂಡಾ ಒಂದು ಎನ್ನಬಹುದು.‌ ಪವಾರ್ ತೊಡಿಸಿದ ಪೇಟಾ ನೋಡಿದರೇ ನೀವು ಕೂಡಾ ಫಿದಾ ಆಗೋದು ಖಂಡಿತ. ಪೇಟಾ ತೊಡುವುದು ಶೋಕಿಗಾಗಿ ಅಲ್ಲ, ಅದು ನಮ್ಮ‌ ಧರ್ಮದ ಸಂಸ್ಕೃತಿ, ಇದನ್ನು ಯಾರೂ ಮರೆಯಬಾರದು. ರಾಜಕುಮಾರ್ ಫ್ಯಾಮಿಲಿ ಇಡೀ ಭಾರತವನ್ನು ಸುತ್ತಿದ್ದಾರೆ. ಪ್ರಧಾನಿ ಮೋದಿ ಅವರನ್ನು ಸೇರಿ ಹಲವು ಗಣ್ಯನಿಗೆ ಪೇಟಾ ತೊಡಿಸಿದ್ದಾರೆ. ಇದು ಹಣಕ್ಕಾಗಿ ಅವರು ಈ ಕೆಲಸ ಮಾಡುತ್ತಿಲ್ಲ. ನಮ್ಮ ಸಂಸ್ಕೃತಿ ಉಳಿಸುವುದು ಅವರ ಮೂಲ ಉದ್ದೇಶ.

Recommended Video

HD Revanna ನವರು R Ashok ಹೇಳಿಕೆ ವಿರುದ್ಧ ತಿರುಗೇಟು ನೀಡಿದ್ದಾರೆ | Oneindia Kannada

English summary
Family from Solapur, Maharashtra famous for turban making. Prime minister Narendra Modi and Congress leader Rahul Gandhi appreciated the art. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X