• search
  • Live TV
ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಧೋಳ: 'ರಾಹುಲ್ ವೈಭವ' ಆರೋಪಕ್ಕೆ ತಿಮ್ಮಾಪುರ್ ತಿರುಗೇಟು

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ, ಮಾರ್ಚ್ 22: 'ಮುಧೋಳ ಮತಕ್ಷೇತ್ರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ.ರನ್ನ ವೈಭವದಲ್ಲಿ ರಾಹುಲ್ ವೈಭವ ಮಾಡಲಾಗಿದೆ' ಎಂದು ಶಾಸಕ ಗೋವಿಂದ ಕಾರಜೋಳ ಅವರ ಆರೋಪಕ್ಕೆ ಸಚಿವ ಆರ್.ಬಿ.ತಿಮ್ಮಾಪುರ ಶಾಸಕ ಕಾರಜೋಳ ತಿರುಗೇಟು ನೀಡಿದ್ದಾರೆ.

ಶಾಸಕ ಗೋವಿಂದ ಕಾರಜೋಳ ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು, ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಶಾಸಕ ಕಾರಜೋಳ ಹೇಳಿದ್ದಾರೆ.

Excise Minister R.B Timmapur reaction to Govind Karjol on allegation

ಬಾಗಲಕೋಟೆಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಆರ್.ಬಿ.ತಿಮ್ಮಾಪುರ ಹದಿನೈದು ವರ್ಷಗಳ ಕಾಲ ಮುಧೋಳದಲ್ಲಿ ಯಾರು ಭ್ರಷ್ಟಾಚಾರ ಮಾಡಿದ್ದಾರೆ, ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ಕೋಟಿಗಟ್ಟಲೇ ಯಾರು ಹಣ ಗುಳುಂ ಮಾಡಿದ್ದಾರೆಂದು ಜನರಿಗೆ ಅರ್ಥವಾಗಿದೆ ಎಂದರು.

ಮುಧೋಳದಲ್ಲಿ ಇತ್ತೀಚಿಗೆ ನಡೆದ ರನ್ನ ವೈಭವದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ವೈಭವ ಮಾಡಿಲ್ಲ.ರನ್ನ ವೈಭವದ ಖರ್ಚಿನಲ್ಲಿ ಪಕ್ಷದ ಕಾರ್ಯಕ್ರಮ ಮಾಡಿಲ್ಲ. ರನ್ನ ವೈಭವದ ಖರ್ಚು ವೆಚ್ಚವನ್ನು ಸಹ ಸಿದ್ದಪಡಿಸಿ ಶೀಘ್ರ ಮಾಧ್ಯಮದ ಮೂಲಕ ಬಹಿರಂಗಪಡಿಸುವುದಾಗಿ ಹೇಳಿದರು.

ಹತಾಶೆಗೊಂಡಿರುವ ಶಾಸಕ ಗೋವಿಂದ ಕಾರಜೋಳ ಅವರ ಭ್ರಷ್ಟಾಚಾರದ ಹೂರಣ ಹೊರಗಡೆ ಬರುತ್ತದೆ ಎಂಬ ಅಂಜಿಕೆಯಿಂದ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದರು. ಮುಧೋಳ ಮತಕ್ಷೇತ್ರದಲ್ಲಿ ಮತದಾರ ಪಟ್ಟಿಯಲ್ಲಿನ ಹಿಂದೂಗಳ ಹೆಸರು ಡಿಲೀಟ್ ಮಾಡಲು ನಾನೇನು ಡಿಸಿ, ತಹಶೀಲ್ದಾರ, ಎಸಿನಾ ಎಂದು ಕಾರಜೋಳ ಆರೋಪಕ್ಕೆ ಲೇವಡಿ ಮಾಡಿದರು.

English summary
Excise Minister R.B Timmapur denied all corruption charges and alleged by BJP leader Govind Karjol. Karjol alleged that Timmappur has misused the funds allotted to Ranna Vaibhava and distributed the same to Rahul Gandhi's programme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X