ಈಶ್ವರಪ್ಪ ಮಗಳ ಮೊಬೈಲ್ ಬಾಗಲಕೋಟೆ ಬಿಜೆಪಿ ಕಾರ್ಯಕರ್ತನ ಮನೆಯಲ್ಲಿ ಪತ್ತೆ
ಬಾಗಲಕೋಟೆ, ಸೆಪ್ಟೆಂಬರ್ 26: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಮಗಳ ಕಳೆದುಹೋದ ಮೊಬೈಲ್ ಬಾಗಲಕೋಟೆಯಲ್ಲಿ ಪತ್ತೆಯಾಗಿದೆ. ಬಾಗಲಕೋಟೆಯ ಬಂಟನೂರು ಗ್ರಾಮದ ಬಿಜೆಪಿ ಕಾರ್ಯಕರ್ತ ಲಕ್ಷ್ಮಣ ಬಂಡಿವಡ್ಡರ್ ಮನೆಯಲ್ಲಿ ಮೊಬೈಲ್ ಪತ್ತೆಯಾಗಿದೆ.
ಮತ್ತೆ ಮತ್ತೆ ಅಸ್ತಿತ್ವದ ಪ್ರಶ್ನೆ ಎತ್ತಿ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯ ಮಾಡಿದ ಈಶ್ವರಪ್ಪ
ಬೆಂಗಳೂರಿನ ಈಶ್ವರಪ್ಪ ಅವರ ಗಾಂಧಿಭವನದ ನಿವಾಸದಲ್ಲಿ ಮೊಬೈಲ್ ಕಳೆದುಹೋಗಿತ್ತು. ಈ ಬಗ್ಗೆ ಅವರ ಮಗಳು ಕೆ.ಶಾಂತಾ ಸೆಪ್ಟೆಂಬರ್ 13ರಂದು ಬೆಂಗಳೂರು ನಾರ್ತ್ ಈಸ್ಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸ್ಯಾಮಸಂಗ್ ಜೆ -6 ಮಾಡಲ್ ನ ಮೊಬೈಲ್ ಅನ್ನು ಐಎಮ್ ಇಐ ಸಂಖ್ಯೆ ಮೂಲಕ ಸ್ಥಳ ಪತ್ತೆ ಹಚ್ಚಿದ ಬೆಂಗಳೂರು ಪೊಲೀಸರು, ಈ ಬಗ್ಗೆ ಬಾಗಲಕೋಟೆ ಜಿಲ್ಲೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರಲ್ಲಿ ರೈಲ್ವೆ ಪ್ರಯಾಣಿಕರ ಮೊಬೈಲ್ ಕದಿಯೋದು ಇವರೇ ನೋಡಿ
ಮುಧೋಳ ತಾಲೂಕಿನ ಬಂಟನೂರು ಗ್ರಾಮದ ಬಿಜೆಪಿ ಕಾರ್ಯಕರ್ತ ಲಕ್ಷ್ಮಣ ಬಂಡಿವಡ್ಡರ್ ಮನೆಯಲ್ಲಿ ಮೊಬೈಲ್ ಪತ್ತೆಯಾಗಿದೆ. ಆದರೆ ಆ ಮೊಬೈಲ್ ಇಲ್ಲಿಗೆ ಹೇಗೆ, ಯಾಕೆ ಬಂತು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈಶ್ವರಪ್ಪ ಭೇಟಿ ಮಾಡಿದ ವೇಳೆ ಲಕ್ಷ್ಮಣ್ ಮೊಬೈಲ್ ತೆಗೆದುಕೊಂಡು ಬಂದರಾ? ಎನ್ನುವ ಸಂದೇಹಕ್ಕೆ ಈ ಘಟನೆ ಎಡೆಮಾಡಿದೆ. ಲಕ್ಷ್ಮಣ ಬಂಡಿವಡ್ಡರ್ ಅವರ ಮನೆಯಿಂದ ಮೊಬೈಲ್ ಪಡೆದ ಲೋಕಾಪುರ ಪೊಲೀಸರು ಎರಡು ದಿನಗಳ ಹಿಂದೆ ಮೊಬೈಲ್ ಅನ್ನು ಬೆಂಗಳೂರಿಗೆ ಕಳುಹಿಸಿದ್ದಾರೆ.