ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ಎದುರು ಕಣ್ಣೀರಿಟ್ಟಿದ್ದ ಎಂಜಿನಿಯರ್‌ ಅಮಾನತು

By Nayana
|
Google Oneindia Kannada News

ಬಾಗಲಕೋಟೆ, ಜು.24: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಕಣ್ಣೀರಿಟ್ಟಿದ್ದ ಬಾದಾಮಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ಸಹಾಯಕ ಎಂಜಿನಿಯರ್‌ ವೆಂಕಟೇಶ್‌ ಅಮಾನತಿಗೆ ಸರ್ಕಾರ ಆದೇಶ ಹೊರಡಿಸಿದೆ.

ಬಾದಾಮಿ ಶಾಸಕರಾಗಿ ಆಯ್ಕೆಯಾದ ಬಳಿಕ ಸಿದ್ದರಾಮಯ್ಯ ಮೊದಲು ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಚಳಿ ಬಿಡಿದ್ದರು. ಮೊದಲ ಕೆಡಿಪಿ ಸಭೆಯಾದ್ದರಿಂದ ಎಚ್ಚರಿಕೆ ನೀಡುತ್ತಿದ್ದೇನೆ ಇದೇ ರೀತಿ ಮುಂದುವರೆದರೆ ಶಿಸ್ತು ಕ್ರಮ ಅನಿವಾರ್ಯವಾಗಲಿದೆ.

ಸಿದ್ದರಾಮಯ್ಯ ಗುಮಾಸ್ತರಂತೆ ನಡೆದುಕೊಳ್ಳುತ್ತಿದ್ದಾರೆ: ಕೆ.ಎಸ್‌.ಈಶ್ವರಪ್ಪಸಿದ್ದರಾಮಯ್ಯ ಗುಮಾಸ್ತರಂತೆ ನಡೆದುಕೊಳ್ಳುತ್ತಿದ್ದಾರೆ: ಕೆ.ಎಸ್‌.ಈಶ್ವರಪ್ಪ

ಒತ್ತಡಗಳಿಗೆ ಮಣಿಯದೆ ಕ್ರಮ ಜರುಗಿಸುತ್ತೇನೆ ಎಂದು ಕಠುವಾಗಿ ನುಡಿದಿದ್ದರು.ಕ್ಷೇತ್ರದಲ್ಲಿ 61 ಶುದ್ಧ ಕುಡಿಯುವ ನೀರಿನ ಘಟಕಗಳು 8 ತಿಂಗಳಿನಿಂದ ಸ್ಥಗಿತಗೊಂಡಿದ್ದರೂ ದುರಸ್ತಿಗೆ ಕರಮ ಕೈಗೊಳ್ಳದ ಬಗ್ಗೆ ಆತಂಕ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ಸಿಇಒ ವಿಕಾಸ್‌ ಅವರಿಗೆ ಕರೆ ಮಾಡಿ ಎಂಜಿನಿಯರ್‌ ವೆಂಕಟೇಶ್‌ ಅವರನ್ನು ಕೂಡಲೇ ಅಮಾನತು ಮಾಡುವಂತೆ ತಿಳಿಸಿದ್ದರು.

Engineer suspended after siddaramaiah anger

ನೀರಾವರಿ ಸಚಿವ ಕೃಷ್ಣ ಬೈರೇಗೌಡ ಅವರ ಬಳಿಯೂ ಮಾತನಾಡಿ ಚರ್ಚಿಸಿದ್ದರು. ಈ ವಿಚಾರ ಕುರಿತು ತನ್ನನ್ನು ಅಮಾನತು ಮಾಡದಂತೆ ಸಿದ್ದರಾಮಯ್ಯ ಅವರ ಬಳಿ ವೆಂಕಟೇಶ್‌ ಕಣ್ಣೀರಿಟ್ಟಿದ್ದರು. ಇದೀಗ ವೆಂಕಟೇಶ್‌ ಅವರನ್ನು ಅಮನಾತು ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

English summary
Recently siddaramaiah conduct kdp meeting. In that meeting ex cm shows his anger over incapability of work, engineer Venkaesh suspended.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X